ಸಾವಿನ ದವಡೆಯಿಂದ ಪಾರಾದ ನಟ 3 ವರ್ಷ ಹಾಸಿಗೆಯಲ್ಲಿ, ಕೊನೆಗೂ ಛಲಬಿಡದೆ ಸ್ಟಾರ್ ಆದ “ವಿಕ್ರಮ್”


ನಾಗೇಂದ್ರ ತ್ರಾಸಿ, Nov 2, 2019, 7:20 PM IST

Actor-vikram

ಸಿನಿಮಾರಂಗದಲ್ಲಿ ಖ್ಯಾತಿ ಗಳಿಸುವುದು, ನಿರಂತರವಾಗಿ ಯಶಸ್ಸು ಪಡೆಯೋದು ಅಷ್ಟು ಸುಲಭದ ಮಾತಲ್ಲ. ಅದು ಕನ್ನಡ, ಮಲಯಾಳಂ, ತೆಲುಗು, ಬಾಲಿವುಡ್ ಯಾವುದೇ ಬೆಳ್ಳಿತೆರೆ ಇರಲಿ ಅಲ್ಲೆಲ್ಲಾ ಘಟಾನುಘಟಿ ಹೀರೋ, ಹೀರೋಯಿನ್ ಗಳ ಅಬ್ಬರ, ಕಾಲಘಟ್ಟ ಇದ್ದಾಗಲೂ ಒಂದು ಇಂಡಸ್ಟ್ರೀಯಲ್ಲಿ ಜನಪ್ರಿಯರಾಗುವುದು ಹೂವಿನ ಹಾದಿಯಲ್ಲ…ಅದಕ್ಕೆ ಸಾಕ್ಷಿ ತಮಿಳಿನ ಖ್ಯಾತ ನಟ ಜಾನ್ ಕೆನ್ನಡಿ ವಿನೋದ್ ರಾಜ್ ಅಲಿಯಾಸ್ ವಿಕ್ರಮ್!

ವಿಕ್ರಮ್ ಹೆಸರಿನ ಹಿಂದೆ ಕುತೂಹಲಕರ ವಿಷಯವಿದೆ..ಮೊದಲ ಎರಡು ಅಕ್ಷರ ವಿಐ ತಂದೆಯ ಹೆಸರು(ಜಾನ್ ಅಲ್ಬರ್ಟ್ ವಿಕ್ಟರ್) ಕೆ (ಕೆನ್ನಡಿ) ಆರ್ ಎ ತಾಯಿಯ ಹೆಸರು (ರಾಜೇಶ್ವರಿ) ಮತ್ತು ಆರ್ ಎಎಂ ವಿಕ್ರಮ್ ಮಕರ ರಾಶಿ ಚಿಹ್ನೆಯ ಹೆಸರು (Vikram)ಸೇರಿದೆ. 54ರ ಹರೆಯದ ವಿಕ್ರಮ್ ಈಗಲೂ ಹದಿಹರೆಯ ನಾಯಕ (ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ದೇವರಾಜ್, ಅವಿನಾಶ್ ಅವರಂತೆ) ನಟರನ್ನೂ ನಾಚಿಸುವಷ್ಟರ ಮಟ್ಟಿಗೆ ಪ್ರಬುದ್ಧ ನಟನೆ ಮೂಲಕ ಇಂದಿಗೂ ಬೇಡಿಕೆಯ ಜನಪ್ರಿಯ ನಟರಾಗಿ ಬೆಳೆದಿದ್ದಾರೆ.

ಮೂರು ದಶಕಗಳ ಕಾಲ ತಮಿಳು ಸಿನಿಮಾರಂಗದಲ್ಲಿ ವಿಭಿನ್ನ ಪಾತ್ರಗಳ ಪರಕಾಯ ಪ್ರವೇಶ ಮಾಡುವ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದ ಹೆಗ್ಗಳಿಕೆ ವಿಕ್ರಮ್ ಅವರದ್ದಾಗಿದೆ.  ಸೇತು ಸಿನಿಮಾಕ್ಕಾಗಿ ವಿಕ್ರಮ್ ಆರು ತಿಂಗಳ ಕಾಲ ಹಣ್ಣಿನ ಜ್ಯೂಸ್ ಕುಡಿಯುವ ಮೂಲಕ ಬರೋಬ್ಬರಿ 16ಕೆಜಿ ತೂಕ ಇಳಿಸಿಕೊಂಡಿದ್ದರಂತೆ! ನಂತರ ಡಯಟ್ ಗಾಗಿ ಮೊಟ್ಟೆಯ ಬಿಳಿ ತಿರುಳು, ಒಂದು ಲೋಟ ಬೀಟ್ ರೂಟ್ ಜ್ಯೂಸ್ ಮತ್ತು ಒಂದು ಚಪಾತಿ ತಿನ್ನುತ್ತಿದ್ದರಂತೆ!

ಇದು ಕೆನ್ನಡಿ ಎಂಬ ನಟ ಸಿನಿಮಾರಂಗದಲ್ಲಿ “ತ್ರಿ”ವಿಕ್ರಮನಾಗಿ ಬೆಳೆಯುವ ಮುನ್ನ ಕಷ್ಟ, ನಷ್ಟ, ನೋವುಗಳನ್ನು ಅನುಭವಿಸಿ ಕೊನೆಗೂ ಯಶಸ್ಸು ಕಂಡ ಜೀವನಗಾಥೆ ಇದಾಗಿದೆ. 1966ರ ಏಪ್ರಿಲ್ 17ರಂದು ಮದ್ರಾಸ್ ನಲ್ಲಿ ಜಾನ್ ಕೆನ್ನಡಿ(ವಿಕ್ರಮ್) ಜನಿಸಿದ್ದರು. ತಂದೆ ಜಾನ್ ವಿಕ್ಟರ್ ತಮಿಳುನಾಡಿನ ಪರಮಕುಡಿ ನಿವಾಸಿ. ತಂದೆ ಕೂಡಾ ನಟನಾಗಬೇಕೆಂಬ ಹಂಬಲದಿಂದ ಮನೆ ಬಿಟ್ಟು ಓಡಿ ಹೋಗಿದ್ದರು. ಆದರೆ ವಿಕ್ಟರ್ ಸಿನಿಮಾರಂಗದಲ್ಲಿ ಯಶಸ್ಸು ಕಾಣಲಿಲ್ಲ. ಕೇವಲ ಪೋಷಕ ನಟನೆಗಷ್ಟೇ ಸೀಮಿತವಾಗಿದ್ದರು. ತಾಯಿ ರಾಜೇಶ್ವರಿ ಸಬ್ ಕಲೆಕ್ಟರ್ ಆಗಿದ್ದರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ (ನ್ಯೂಡೆಲ್ಲಿ ಸಿನಿಮಾ) ಚಿರಪರಿಚಿತರಾಗಿದ್ದ ನಟ ತ್ಯಾಗರಾಜ್ ವಿಕ್ರಮ್ ತಾಯಿಯ ಸಹೋದರ!

ಶಾಲೆಗೆ ಹೋಗುವಾಗಲೇ ನಟನಾಗಬೇಕೆಂಬ ಕನಸು ಕಂಡಿದ್ದ ವಿಕ್ರಮ್:

12 ವರ್ಷದ ಬಾಲಕ ಅಂದು ಯೋಚಿಸುತ್ತಿದ್ದ ವಿಷಯ, ಜೀವನದ ಗುರಿ ಒಂದೇ ಆಗಿತ್ತು..ಅದು ತಾನು ನಟನಾಗಬೇಕೆಂಬುದು! 8ನೇ ತರಗತಿವರೆಗೂ ಓದಿನಲ್ಲೂ ಮೊದಲಿಗನಾಗಿದ್ದ ವಿಕ್ರಮ್…ವರ್ಷ ಕಳೆದಂತೆ ಸಿನಿಮಾ ನಟನಾಗಬೇಕೆಂಬ ವ್ಯಾಮೋಹ ಹೆಚ್ಚುತ್ತಾ ಹೋದಂತೆ ತರಗತಿಯಲ್ಲಿ ವಿಕ್ರಮ್ ಓದಿನಲ್ಲಿ ಹಿಂದುಳಿದು ಕೇವಲ ಉತ್ತೀರ್ಣನಾಗುತ್ತಿದ್ದ ಅಷ್ಟೇ. ಸೇಲಂ ಸಮೀಪದ ಯೆರಕಾಡಿನ ಬೋರ್ಡಿಂಗ್ ಶಾಲೆಯಲ್ಲಿ ಶಿಕ್ಷಣಾಭ್ಯಾಸದಲ್ಲಿ ವಿಕ್ರಮ್ ತೊಡಗಿದ್ದಾಗ ಕರಾಟೆ, ಈಜು, ನೃತ್ಯ ಹಾಗೂ ಎಲ್ಲಾ ವಿಧದ ಆಟಗಳನ್ನು ಕಲಿತುಬಿಟ್ಟಿದ್ದ. ಅದಕ್ಕೆ ಕಾರಣ ತಾನು ಮುಂದೆ ನಟನಾದರೆ ಆಗ ಸಹಾಯಕ್ಕೆ ಬರುತ್ತದೆ ಎಂಬ ಲೆಕ್ಕಾಚಾರವಾಗಿತ್ತಂತೆ! ಕಾಲೇಜು ಶಿಕ್ಷಣದ ನಂತರ ತಂದೆ ಪದವಿಗೆ ಹೋಗುವಂತೆ ಒತ್ತಾಯಿಸಿದ್ದರು. ಹೀಗಾಗಿ ಚೆನ್ನೈನ ಲೋಯೋಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಪದವಿ. ನಂತರ ಎಂಬಿಎ ಪದವಿ ಪಡೆದಿದ್ದರು.

ಕಾಲೇಜು ವಿದ್ಯಾಭ್ಯಾಸದ ವೇಳೆಯೇ ಉತ್ತಮ ನಟ ಪ್ರಶಸ್ತಿ ಪಡೆದಿದ್ದ ವಿಕ್ರಮ್:

ಕಾಲೇಜು ವಿದ್ಯಾಭ್ಯಾಸದ ವೇಳೆ ನಾಟಕಗಳಲ್ಲಿ ವಿಕ್ರಮ್ ಅಭಿನಯಿಸುತ್ತಿದ್ದರು. ದ ಕೈನೆ ಮುಟಿನಿ ಕೋರ್ಟ್ ಮಾರ್ಷಲ್, ಪೀಟರ್ ಷಫರ್ಸ್ಸ್ ಬ್ಲ್ಯಾಕ್ ಕಾಮಿಡಿ ನಾಟಕದಲ್ಲಿನ ನಟನೆಗೆ ವಿಕ್ರಮ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಐಐಟಿ ಮದ್ರಾಸ್ ನಲ್ಲಿ ನಡೆದ ಸಮಾರಂಭದಲ್ಲಿ ಪಡೆದಿದ್ದರು.

ಅಂದು ಸಾವಿನ ದವಡೆಯಿಂದ ಪಾರಾಗಿದ್ದ ವಿಕ್ರಮ್ ಮೂರು ವರ್ಷ ಹಾಸಿಗೆ ಹಿಡಿದುಬಿಟ್ಟಿದ್ದರು!

ನಾಟಕದಲ್ಲಿನ ಅದ್ಭುತ ನಟನೆಗಾಗಿ ವಿಕ್ರಮ್ ಸಾವಿರಾರು ಜನರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಖುಷಿಯಲ್ಲಿಯೇ ಬೈಕ್ ನಲ್ಲಿ ಮನೆಯತ್ತ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದುಬಿಟ್ಟಿತ್ತು. ಆ ಅಪಘಾತ ವಿಕ್ರಮ್ ಕನಸನ್ನು ನುಚ್ಚು ನೂರು ಮಾಡಿಬಿಟ್ಟಿತ್ತು. ಬಲಕಾಲು ಗಂಭೀರವಾಗಿ ನಜ್ಜುಗುಜ್ಜಾಗಿತ್ತು..ಈ ಕಾಲನ್ನು ಉಳಿಸುವ ಭರವಸೆ ಇದ್ದಿದ್ದು ಬರೇ ಶೇ.2ರಷ್ಟು ಮಾತ್ರವಾಗಿತ್ತು! ಶತಾಯಗತಾಯ ಕಾಲನ್ನು ಉಳಿಸಲೇಬೇಕು ಎಂದು ಹಠಕ್ಕೆ ಬಿದ್ದ ಪರಿಣಾಮ 23 ಆಪರೇಶನ್ ಮಾಡಲಾಗಿತ್ತು. ಮೂರು ವರ್ಷಗಳ ಕಾಲ ಹಾಸಿಗೆಯಲ್ಲಿದ್ದ ವಿಕ್ರಮ್ ಒಂದು ವರ್ಷಗಳ ಕಾಲ ವಾಕಿಂಗ್ ಸ್ಟಿಕ್ ಆಧಾರದ ಮೇಲೆ ಒಂದು ವರ್ಷ ನಡೆದಾಡಿದ್ದರು. ಕೊನೆಗೂ ಛಲ ಬಿಡದ ತನ್ನ ಕನಸನ್ನು ಸಾಕಾರಗೊಳಿಸುವತ್ತ ದಾಪುಗಾಲು ಇಟ್ಟಿದ್ದರು.

ಸಿನಿಮಾರಂಗದಲ್ಲಿ ಯಶಸ್ಸಿಗಾಗಿ ಹತ್ತು ವರ್ಷ ಸವೆಸಿದ್ದ ವಿಕ್ರಮ್:

ಮಾಡೆಲಿಂಗ್ ಮೂಲಕ ಜೀವನ ಆರಂಭಿಸಿದ್ದ ವಿಕ್ರಮ್ ಜಾಹೀರಾತುಗಳಲ್ಲಿ ನಟಿಸುತ್ತಿದ್ದರು. ಚೋಲಾ ಟೀ, ಟಿವಿಎಸ್ ಎಕ್ಸೆಲ್ ಅಲ್ವಿನ್ ವಾಚ್ ಜಾಹೀರಾತುಗಳಲ್ಲಿ ಮಿಂಚಿದ್ದರು. ಟಿವಿ ಸೀರಿಯಲ್ ಗಳು. ಸಿನಿಮಾರಂಗದಲ್ಲಿ ಮಿಂಚಬೇಕು, ಹೀರೋ ಆಗಬೇಕು ಎಂದು ಕನಸು ಕಂಡಿದ್ದ ವಿಕ್ರಮ್ ಸುಮಾರು ಹತ್ತು ವರ್ಷಗಳ ಕಾಲ ಸಣ್ಣ, ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಅದರಲ್ಲಿಯೂ ಕೆಲವು ಸಿನಿಮಾಗಳನ್ನು ತಿರಸ್ಕರಿಸಿದ್ದರು. ಹೀಗೆ ಹತ್ತು ಹಲವು ಏಳು ಬೀಳುಗಳನ್ನು ಕಂಡ ವಿಕ್ರಮ್ ಕೊನೆಗೆ ಹಿರಿಯ ನಿರ್ದೇಶಕ ಸಿವಿ ಶ್ರೀಧರ್ ತಮ್ಮ ಸಿನಿಮಾದಲ್ಲಿ ಹೀರೋ ಪಾತ್ರ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಹೀಗೆ 1990ರಲ್ಲಿ ಎನ್ ಕಾದಲ್ ಕಣ್ಮಣಿ ಸಿನಿಮಾದಲ್ಲಿ ನಟಿಸುವ ಮೂಲಕ ವಿಕ್ರಮ್ ಬೆಳ್ಳಿ ತೆರೆ ಪ್ರವೇಶಿಸಿದ್ದರು. ನಂತರ ಪಿಸಿ ಶ್ರೀರಾಮ್ ಅವರ ಕಾಲೇಜು ಲವ್ ಸ್ಟೋರಿಯ ಮೀರಾ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾಗಳೆಲ್ಲ ವಿಕ್ರಮ್ ನಿರೀಕ್ಷೆಗಳನ್ನೆಲ್ಲಾ ತಲೆಕೆಳಗೆ ಮಾಡಿತ್ತು. ಏತನ್ಮಧ್ಯೆ ಮಣಿರತ್ನಂ ನಿರ್ದೇಶನದ ಬಾಂಬೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದರು. ಆದರೆ ತನ್ನ ಮುಂದಿನ ಸಿನಿಮಾಕ್ಕೆ ತೊಂದರೆಯಾಗಲಿದೆ ಎಂಬ ದೃಷ್ಟಿಯಲ್ಲಿ ಗಡ್ಡ ತೆಗೆಯಲು ನಿರಾಕರಿಸಿದ್ದರಿಂದ ಆ ಅವಕಾಶವನ್ನೂ ವಿಕ್ರಮ್ ಕಳೆದುಕೊಂಡಿದ್ದರು.

ಟರ್ನಿಂಗ್ ಪಾಯಿಂಟ್ ಕೊಟ್ಟ ಸೇತು ಸಿನಿಮಾ:

ಹೀಗೆ ಸುಮಾರು ಹತ್ತು ವರ್ಷಗಳ ಕಾಲ ನಟಿಸಿದ್ದ ವಿಕ್ರಮ್ ಗೆ ಹೇಳಿಕೊಳ್ಳುವ ಸ್ಟಾರ್ ಪಟ್ಟವಾಗಲಿ, ಯಶಸ್ಸು ತಂದುಕೊಡಲಿಲ್ಲ. ನಂತರ 1999ರಲ್ಲಿ ತೆರೆಕಂಡ ಸೇತು(ಛಿಯಾನ್) ಸಿನಿಮಾ ವಿಕ್ರಮ್ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. ಈ ಸಿನಿಮಾವನ್ನು ಎರಡು ವರ್ಷಗಳ ಕಾಲ ಚಿತ್ರೀಕರಿಸಲಾಗಿತ್ತು. ಸೇತು ಸಿನಿಮಾ ವಿಕ್ರಮ್ ಇಮೇಜ್ ಅನ್ನು ಇಮ್ಮಡಿಗೊಳಿಸಿತ್ತು. ನಂತರ ದಿಲ್, ಕಾಸಿ, ಜೆಮಿನಿ, ಕಿಂಗ್, ಧೂಳ್, ಸಾಮಿ, ಪಿತಾಮಗನ್, ಅರುಲ್, ಅನ್ನಿಯನ್, ಕಾಂತಾಸ್ವಾಮಿ, ರಾವನನ್, ದೈವ ತಿರುಮಗಳ್ ಹೀಗೆ ಒಂದಕ್ಕಿಂತ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡುಬಿಟ್ಟಿದ್ದಾರೆ. ಇಂತಹ ವಿಭಿನ್ನ ಪಾತ್ರಗಳ ಮೂಲಕವೇ ವಿಕ್ರಮ್ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Bollywood: ವಿಕ್ಕಿ ಕೌಶಲ್‌ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?

Ajay Devgn lends his voice to ‘Chhaava’

Chhaava: ‘ಚಾವಾ’ಗೆ ಧ್ವನಿಯಾದ ಅಜಯ್‌ ದೇವಗನ್‌

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ

Mamata-Kulakarni

Spiritual journey: ಕಿನ್ನರ್‌ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.