ವರ್ಕೌಟ್ ಆಯ್ತಾ ರೋಹಿತ್ ಶೆಟ್ಟಿ – ರಣ್ವೀರ್ ʼಸರ್ಕಸ್ʼ ಕಾಮಿಡಿ? ಮೊದಲ ದಿನ ಕಲೆಕ್ಷನ್ ಎಷ್ಟು
Team Udayavani, Dec 24, 2022, 1:40 PM IST
ಮುಂಬಯಿ: ರೋಹಿತ್ ಶೆಟ್ಟಿ ನಿರ್ದೇಶನದ ʼಸರ್ಕಸ್ʼ ಸಿನಿಮಾ ವಿಶ್ವದಾದ್ಯಂತ ಈ ವಾರ ತೆರೆ ಕಂಡಿದೆ. ಟ್ರೇಲರ್ ನಿಂದ ಒಂದಷ್ಟು ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ಮೊದಲ ದಿನದಲ್ಲಿ ಗಳಿಸಿದ್ದೆಷ್ಟು? ಸಿನಿಮಾದ ಬಗ್ಗೆ ಪ್ರೇಕ್ಷಕರು ಏನು ಹೇಳಿದ್ದಾರೆ ಎನ್ನುವುದರ ಕುರಿತ ವರದಿ ಇಲ್ಲಿದೆ.
ಬಾಲಿವುಡ್ ನಲ್ಲಿ ʼಸಿಂಗಂʼ ,ʼಗೋಲ್ ಮಾಲ್ʼ ಸರಣಿಯಂತಹ ಹಿಟ್ ಸಿನಿಮಾಗಳನ್ನು ನೀಡಿರುವ ರೋಹಿತ್ ಶೆಟ್ಟಿ ಕಾಮಿಡಿ ಜಾನರ್, ಬಹು ತಾರಾಗಣ ಇಟ್ಟುಕೊಂಡು ʼಸರ್ಕಸ್ʼ ಸಿನಿಮಾ ಮಾಡಿದ್ದಾರೆ. ಮೊದಲ ದಿನವೇ 10 ಸಾವಿರಕ್ಕೂ ಅಧಿಕ ಶೋ ಪ್ರದರ್ಶನಗೊಂಡಿದ್ದು, 3 ಲಕ್ಷಕ್ಕೂ ಅಧಿಕ ಟಿಕೆಟ್‌ಮಾರಾಟವಾಗುವ ಮೂಲಕ ಸಿನಿಮಾಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.
ಬಿಟೌನ್ ನ ಸಿನಿಮಾ ವರದಿಯ ಪ್ರಕಾರ ʼಸರ್ಕಸ್ʼ ಮೊದಲ ದಿನವೇ 7 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ನಲ್ಲಿ ಅಂದಾಜು 3.20 ಕೋಟಿ ಕಲೆಕ್ಷನ್ ಮಾಡಿದೆ. ಗುಜರಾತ್ ನಲ್ಲಿ ಹೆಚ್ಚು ಗಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ದುಬಾರಿ ಓಲಾ ಸ್ಕೂಟರ್ ಬಳಸಿಕೊಂಡು ಕ್ರಿಕೆಟ್ ಕಾಮೆಂಟ್ರಿ ಮಾಡಿದ ವ್ಯಕ್ತಿ.! ವಿಡಿಯೋ ವೈರಲ್
ಸಿನಿಮಾ ಅಷ್ಟಾಗಿ ಪ್ರೇಕ್ಷಕರಿಗೆ ಹಿಡಿಸಿಲ್ಲ. ರೋಹಿತ್ ಶೆಟ್ಟಿ ಅವರಿಂದ ಇಂತಹ ಸಿನಿಮಾ ನಿರೀಕ್ಷಿಸಿರಲಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ರಣ್ವೀರ್ ಸಿಂಗ್ ಅವರ ಇತ್ತೀಚೆಗೆ ಬಂದ ಸಿನಿಮಾಗಳಿಗೆ ಹೋಲಿಸಿದರೆ ಈ ʼಸರ್ಕಸ್ʼ ಸಿನಿಮಾದ ಮೊದಲ ದಿನದ ಕಲೆಕ್ಷನ್ ತುಸು ಕಡಿಮೆಯೇ. ಆದರೆ ಕ್ರಿಸ್ಮಸ್, ಹೊಸ ವರ್ಷದ ದಿನಗಳಲ್ಲಿ ತೆರೆಗೆ ಬಂದಿರುವ ಸಿನಿಮಾದ ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಮಾಡಬಹುದು.
ಸಂಜಯ್ ಮಿಶ್ರಾ, ಸಿದ್ಧಾರ್ಥ ಜಾಧವ್, ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡೀಸ್, ಜಾನಿ ಲಿವರ್, ವರುಣ್ ಶರ್ಮಾ, ಮುಖೇಶ್ ತಿವಾರಿ, ರಾಧಿಕಾ ಬಂಗಿಯಾ, ವ್ರಾಜೇಶ್ ಹಿರ್ಜಿ, ಮುರಳಿ ಶರ್ಮಾ ಮತ್ತು ಅನಿಲ್ ಚರಂಜಿ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಗೆದ್ದವರು ಯಾರು?
Movies: ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿ ಕೈ ಸುಟ್ಟುಕೊಂಡ ಸ್ಟಾರ್ ಸಿನಿಮಾಗಳು
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್ ಅರ್ಜುನ್ʼ
Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್ ಹಿಟ್ ʼಮಿರ್ಜಾಪುರ್ʼ ಸರಣಿ
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.