2020 : ಬಾಲಿವುಡ್ ನಲ್ಲಿ ನಿರೀಕ್ಷೆಗಿಂತ ನಿರಾಶೆ ಮೂಡಿಸಿದ ಸಿನಿಮಾಗಳೇ ಹೆಚ್ಚು
Team Udayavani, Dec 29, 2020, 9:30 AM IST
ಮುಂಬಯಿ : ಬಾಲಿವುಡ್ ಗೆ 2020 ಅಂದುಕೊಂಡ ಹಾಗೆ ಖುಷಿಯ ವರ್ಷವೇನು ಆಗಿರಲಿಲ್ಲ. ಕೋವಿಡ್ ಕಾರಣದಿಂದ ದೊಡ್ಡ ನಟರ ಸಿನಿಮಾಗಳು ಅಷ್ಟಾಗಿ ಬಿಡುಗಡೆ ಆಗದೇ ಇರುವುದು ಒಂದು ಕಾರಣವಾದರೆ, ಕೈ ಲೆಕ್ಕದ್ದಷ್ಟು ಬಿಡುಗಡೆಯಾದ ಸಿನಿಮಾಗಳು ಸಹ ದೊಡ್ಡ ಮಟ್ಟದ ನಿರಾಸೆಯನ್ನು ಮೂಡಿಸಿದೆ.
2020 ರಲ್ಲಿ ಬಿಡುಗಡೆಯಾಗಿ ಸದ್ದು ಮಾಡದೆ ಪ್ರೇಕ್ಷಕರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಪಡೆದುಕೊಳ್ಳದ ಚಿತ್ರಗಳ ಪಟ್ಟಿ ಇಲ್ಲಿವೆ.
ಲವ್ ಅಜ್ ಕಲ್ -2 : ( Love aaj kal 2) :
ಕಾರ್ತಿಕ್ ಆರ್ಯನ್ ಹಾಗೂ ಸಾರಾ ಆಲಿಖಾನ್ ಮುಖ್ಯ ಭೂಮಿಕೆ ಕಾಣಿಸಿಕೊಂಡಿರುವ ಈ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದಾರೆ. 2009 ರಲ್ಲಿಯೂ ಇಮ್ತಿಯಾಜ್ ಅಲಿ ಇದೇ ಟೈಟಲ್ ಇಟ್ಟು ಸಿನಿಮಾ ಮಾಡಿದ್ದರು. ಆ ಕಾಲಕ್ಕೆ ಅದು ಹೊಸತು. ತಕ್ಕಮಟ್ಟಿಗೆ ಚಿತ್ರವೂ ಯಶಸ್ಸಾಗಿತ್ತು. ಆದರೆ 2020 ರಲ್ಲಿ ಅದೇ ಟೈಟಲ್ ಇಟ್ಟುಕೊಂಡು ಪಾತ್ರಧಾರಿಯನ್ನು ಬದಲಾಯಿಸಿ ಮಾಡಿದ ಪ್ರಯೋಗ ಫಲಿಸಲಿಲ್ಲ. ಸಿನಿಮಾದಲ್ಲಿನ ಪ್ರಮುಖ ಪಾತ್ರಗಳ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಸಿನಿಮಾ 2020 ರ ಸಾಲಿನ ಕೆಟ್ಟ ಚಿತ್ರಗಳ ಪಟ್ಟಿಗೆ ಸೇರಿಕೊಂಡಿತ್ತು.
ಭೂತ್ ಪಾರ್ಟ್ ಒನ್ : ದಿ ಹನ್ ಟೆಡ್ ಶೀಪ್ : ( Bhoot – Part One: The Haunted Ship ) :
ಬಾಲಿವುಡ್ ನಲ್ಲಿ ಹಾರಾರ್ ಕಂಟೇಟ್ ಗಳು ಮಿಂಚುವುದು ಕಡಿಮೆಯೇ. ವಿಕ್ಕಿ ಕೌಶಲ್, ಧರ್ಮಾ ಪ್ರೊಡಕ್ಷನ್ ಜತೆಗೆ ಮಾಡಿದ ಮೊದಲ ಸಿನಿಮಾ ಇದು. ನಟನೆ ಬಗ್ಗೆ ಮಾತಿಲ್ಲ. ಆದರೆ ಸಿನಿಮಾ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವ ಹಾಗೆ ತೆರೆಕಂಡು ಚಿತ್ರಮಂದಿರದಿಂದ ಹೊರಬರಲು ಜಾಸ್ತಿ ಸಮಯ ಬೇಕಾಗಿರಲಿಲ್ಲ.
ಭಾಗಿ – 3 : ( BAAGHI -3) :
ಒಂದು ಚಿತ್ರದಲ್ಲಿ ನಾಯಕ ನಿಜ ಜೀವನದಲ್ಲಿ ಹೊಡೆಯುವ ಜನರಿಗಿಂತ ನಾಲ್ಕೈದು ಮಂದಿಯನ್ನು ಜಾಸ್ತಿಯಾಗಿಯೇ ಹೊಡೆದು ಹೋರಾಟ ಮಾಡಿ ಉಳಿಯುತ್ತಾನೆ. ದೊಡ್ಡ ಪರೆದಯಲ್ಲಿ ಇದನ್ನು ಕಾಣುವ ಪ್ರೇಕ್ಷಕರು ನಾಯಕನ ಸಾಹಸವನ್ನು ಮೆಚ್ಚಿ ಚಪ್ಪಾಳೆ, ಶೀಳೆ ಹೊಡೆಯುತ್ತಾರೆ. ಅದೇ ಒಬ್ಬ ವ್ಯಕ್ತಿ ಒಂದು ದೇಶದ ವಿರುದ್ಧ, ಯುದ್ಧ ಶಸ್ತ್ರಾಸ್ತ್ರವನ್ನು ಲೆಕ್ಕಿಸದೆ ಅದಕ್ಕಿಂತ ಬಲಿಷ್ಠಾವಾಗಿ ಹೋರಾಡುತ್ತಾನೆ ಅಂದರೆ ತುಸು ಹೆಚ್ಚೇ ಆಯಿತು ಅನಿಸಲ್ವಾ? ಭಾಗಿ -3 ಚಿತ್ರಕ್ಕೆ ಈ ಅಧಿಕತನದ ವೈಭವೀಕರಣವೇ ಮುಳ್ಳಾಯಿತು. ಚಿತ್ರವನ್ನು ನೋಡಿದವರು ಹೆಚ್ಚು ಮಾತೇ ಆಡಲಿಲ್ಲ. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದರೂ, ಪೇಕ್ಷಕರ ಮನಮುಟ್ಟಲಿಲ್ಲ.
ಸಡಕ್ – 2 ( Sadaak -2 ) :
90 ರ ದಶಕದಲ್ಲಿ ಸಂಜಯ್ ದತ್ ಮುಖ್ಯಭೂಮಿಕೆಯಲ್ಲಿ ಬಂದ ಚಿತ್ರ ಸಡಕ್. ಅದೇ ಟೈಟಲ್ ಇಟ್ಟುಕೊಂಡು ನಿರ್ದೇಶಕ ಮಹೇಶ್ ಭಟ್ ಮತ್ತೆ ಏನೋ ಮ್ಯಾಜಿಕ್ ಮಾಡಲು ಹೊರಟಿದ್ದರು. ಆದರೆ ಅವರ ಮ್ಯಾಜಿಕ್ ಪ್ರೇಕ್ಷಕರಿಗೆ ಒಂಚೂರು ಇಷ್ಟವೇ ಆಗಿಲ್ಲ. ಸಿನಿಮಾ ನೆಪೋಟಿಸಂದಿಂದ ಪೆಟ್ಟು ತಿಂದರೂ ಕಥೆಯ ಜಾಡು ದಾರಿ ತಪ್ಪಿ ಸಾಗಿದ ಅನುಭವವನ್ನು ನೀಡುತ್ತದೆ. ಚಿತ್ರ ಬಂದ ವೇಗದಲ್ಲೇ ಮುಖಾಡೆ ಮಲಗಿತ್ತು.
ಖಾಲಿ-ಪೀಲಿ : ( Khaali peeli ) :
ಇಶಾನ್ ಖಟ್ಟರ್ ಹಾಗೂ ಅನನ್ಯ ಪಾಂಡೆ ಮುಖ್ಯ ಭೂಮಿಕೆಯಲ್ಲಿ ಬಂದ ಈ ಚಿತ್ರ ಎಷ್ಟು ಜನ ನೋಡಿದ್ದಾರೆ ಎನ್ನುವುದಕ್ಕಿಂತ ಎಷ್ಟು ದಿನ ಪ್ರೇಕ್ಷಕನ ತಲೆಯಲ್ಲಿ ಉಳಿಯಿತು ಎನ್ನುವುದೇ ಗೊತ್ತಿಲ್ಲ. ಖ್ಯಾತ ನಟರ ಮಕ್ಕಳನ್ನು ಹಾಕಿ ಚಿತ್ರ ಮಾಡಿದರೂ, ಇಬ್ಬರು ನಟನೆಯಲ್ಲಿ ವರ್ಷಾನುಗಟ್ಟಲೆ ತರಬೇತಿ ಪಡೆಯಬೇಕಿದೆ. ಚಿತ್ರದಲ್ಲಿ ಸರಿಯಾದ ಕಥೆಯೇ ಇಲ್ಲ. ಇದ್ದರೂ ನೋಡುವ ಆಗಿಲ್ಲ.
ಲಕ್ಷ್ಮೀ : (Laxmii ) :
ಖಂಡಿತವಾಗಿಯೂ ಇದು ಅಕ್ಷಯ್ ಕುಮಾರ್ ಬದುಕಿನ ಕೆಟ್ಟ ಚಿತ್ರಗಳಲ್ಲಿ ಒಂದು. ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಕ್ಷಯ್ ಕುಮಾರ್ ಲಕ್ಷ್ಮೀ ಚಿತ್ರದ ಮೇಲೆ ಪ್ರೇಕ್ಷಕರಿಗೆ ಬೆಟ್ಟದ್ದಷ್ಟು ನಿರೀಕ್ಷೆಗಳಿದ್ದವು. ಸಿನಿಮಾ ಓಟಿಟಿಯಲ್ಲಿ ಬಿಡುಗೆಡೆ ಆದ ಬಳಿಕ ಒಮ್ಮೆಗೆ ಬೃಹತ್ ಗಾತ್ರದ ಬೆಟ್ಟ ಬಿದ್ದು ಕೂರುವಾಗಿನ ಮೌನ ಪ್ರೇಕ್ಷಕರ ಮನದಲ್ಲಿ ಆವರಿತ್ತು. ಅದಕ್ಕೆ ಕಾರಣ ಚಿತ್ರದಲ್ಲಿ ಹೊಸತನವೇ ಇಲ್ಲದಿರಿವುದು. ತಮಿಳು ಮತ್ತು ತೆಲುಗು ಚಿತ್ರದಲ್ಲಿನ ಎಲ್ಲಾ ಅಂಶವನ್ನು ಹಾಗೆಯೇ ತೆರೆಮೇಲೆ ತಂದಿರುವ ನಿರ್ದೇಶಕ ರಾಘವ ಲಾರೆನ್ಸ್ ಹಿಂದಿ ಭಾಷೆಯ ಲಕ್ಷ್ಮೀ ಅವತಾರವನ್ನು ಪ್ರೇಕ್ಷಕರು ಇಷ್ಟಪಡಲಿಲ್ಲ.
ದುರ್ಗಾಮತಿ :( DURGAMATI) :
ತೆಲುಗಿ ಸಿನಿಮಾ ಭಾಗಮತಿ ಚಿತ್ರದ ಹಿಂದಿ ರಿಮೇಕ್ ದುರ್ಗಾಮತಿ. ತೆಲುಗಿನಲ್ಲಿ ಅನುಷ್ಕಾ ಶೆಟ್ಟಿಯ ನಟನೆಗಾದರೂ ಚಿತ್ರವನ್ನು ನೋಡಬಹುದು. ಆದರೆ ಹಿಂದಿಯಲ್ಲಿ ಭೂಮಿ ಪೆಡ್ನೆಕರ್ ತಮ್ಮ ಎಲ್ಲಾ ಪ್ರಯತ್ನವನ್ನು ಕ್ಯಾಮೆರಾದ ಮುಂದೆ ತೋರಿಸಿದರೂ ಅನುಷ್ಕಾ ಶೆಟ್ಟಿ ನಟನೆಗೆ ಸರಿಸಾಟಿಯಾಗಿ ನಿಲ್ಲುವುದು ಕಷ್ಟ. ಚಿತ್ರದ ಕತೆಯಲ್ಲಿ ಗೊಂದಲ ಮೂಡಿಸಿರುವುದು ಕೂಡ ಈ ಚಿತ್ರದ ಮೈನಸ್ ಪಾಯಿಂಟ್.
ಕೂಲಿ ನಂ .1 ( Cooli no.1) :
1995 ರಲ್ಲಿ ಹಾಸ್ಯನಟ ಗೋವಿಂದಾ ಕೂಲಿ ನಂ. 1 ಆಗಿ ಬಾಲಿವುಡ್ ನಲ್ಲಿ ಮಿಂಚಿದ್ದರು. 2020 ರಲ್ಲಿ ಡೇವಿಡ್ ಧವನ್ ಅದೇ ಟೈಟಲ್ ನಲ್ಲಿ ತಮ್ಮ ಮಗ ವರುಣ್ ಧವನ್ ರನ್ನು ತೆರೆಯಮೇಲೆ ತಂದಿದ್ದಾರೆ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ಸಾಯಿತು ಎನ್ನುವುದು ಚಿತ್ರ ನೋಡಿದ ಬಳಿಕ ಬರುತ್ತಿರುವ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಯೇ ತಿಳಿಯುತ್ತದೆ. ಈ ಚಿತ್ರದಲ್ಲಿನ ರೈಲಿನ ಒಂದು ದೃಶ್ಯ 2020 ರ ಕೊನೆಗೆ ಟ್ರೋಲ್ ಪೇಜ್ ಗಳಿಗೊಂದು ಆಹಾರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.