Deepfake: ನಟಿ ಕಾಜೋಲ್ ಬಟ್ಟೆ ಬದಲಾಯಿಸುವ ವಿಡಿಯೋ ವೈರಲ್
Team Udayavani, Nov 16, 2023, 4:52 PM IST
ಮುಂಬಯಿ: ಡೀಪ್ ಫೇಕ್ ಕಾಟ ಸಿನಿಮಾರಂಗಕ್ಕೆ ತಪ್ಪಿದಂತೆ ಕಾಣುತ್ತಿಲ್ಲ. ರಶ್ಮಿಕಾ ಮಂದಣ್ಣ ಅವರ ವಿಡಿಯೋವನ್ನು ವೈರಲ್ ಮಾಡಿದ ಬಳಿಕ, ಕತ್ರಿನಾ ಕೈಫ್ ಫೋಟೋವನ್ನು ಆಶ್ಲೀಲವಾಗಿ ಡೀಪ್ ಫೇಕ್ ಮಾಡಲಾಗಿತ್ತು. ಇದೀಗ ಬಾಲಿವುಡ್ ಮತ್ತೊಬ್ಬ ನಟಿಯ ಡೀಪ್ ಫೇಕ್ ವಿಡಿಯೋವನ್ನು ವೈರಲ್ ಮಾಡಲಾಗಿದೆ.
ಬಿಟೌನ್ ಖ್ಯಾತ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಿ ವಿಡಿಯೋವೊಂದು ವೈರಲ್ ಮಾಡಲಾಗಿದೆ. ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಎಐ ಮೂಲಕ ಡೀಪ್ ಫೇಕ್ ಮಾಡಿ ಹರಿದು ಬಿಡಲಾಗಿದೆ.
ಈ ವಿಡಿಯೋವನ್ನು ಜೂ.5 ರಂದು ಟಿಕ್ ಟಾಕ್ ನಲ್ಲಿ ಸೋಶಿಯಲ್ ಮೀಡಿಯಾ ತಾರೆಯೊಬ್ಬರು ʼಗೆಟ್ ರೆಡಿ ವಿತ್ ಮಿ ಟ್ರೆಂಡ್ʼ ಅಡಿಯಲ್ಲಿ ಅಪ್ ಲೋಡ್ ಮಾಡಲಾಗಿತ್ತು. ಇದೇ ವಿಡಿಯೋವನ್ನು ಬಳಸಿಕೊಂಡು ವಿಡಿಯೋದಲ್ಲಿರುವವರ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಜೋಡಿಸಲಾಗಿದೆ ಎಂದು ಫ್ಯಾಕ್ಟ್ ಚೆಕ್ ಮಾಡುವ ʼಬೂಮ್ʼ ವರದಿ ಮಾಡಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಟೌನ್ ತಾರೆಯರು ಮಾತ್ರವಲ್ಲದೆ ಹಾಲಿವುಡ್ ಕಲಾವಿದರು ಕೂಡ ಡೀಪ್ ಫೇಕ್ ಬಲೆಗೆ ಸಿಲುಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.