IMDb ಟಾಪ್ 100 ಇಂಡಿಯನ್ ಸೆಲೆಬ್ರಿಟಿ ಲಿಸ್ಟ್: ದೀಪಿಕಾ ನಂ.1, ಸ್ಥಾನ ಪಡೆದ ಕನ್ನಡದ ಈ ನಟ
Team Udayavani, May 29, 2024, 4:54 PM IST
ಮುಂಬಯಿ: ಸಿನಿಮಾಗಳ ಮಾಹಿತಿ, ವಿಮರ್ಶೆ, ರೇಟಿಂಗ್ ಹಾಗೂ ಸುದ್ದಿಗಳನ್ನು ನೀಡುವ ಐಎಂಡಿಬಿ ಕಳೆದ ದಶಕದಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಟಾಪ್ 100 ಭಾರತದ ಕಲಾವಿದರ ಪಟ್ಟಿಯನ್ನು ರಿಲೀಸ್ ಮಾಡಿದೆ.
ಇಂಟರ್‌ನೆಟ್ ಮೂವಿ ಡಾಟಾ ಬೇಸ್ (IMDb). ಕಳೆದ 10 ವರ್ಷಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಮಾಡಲ್ಪಟ್ಟ 100 ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವಾದ್ಯಂತ ಐಎಂಡಿಗೆ ಮಾಸಿಕ 250 ಮಿಲಿಯನ್‌ಗಿಂತಲೂ ಹೆಚ್ಚು ಜನ ಭೇಟಿ ನೀಡುತ್ತಾರೆ. ಈ ಪಟ್ಟಿಯು ಜನವರಿ 2014 ರಿಂದ ಏಪ್ರಿಲ್ 2024 ರವರೆಗಿನ IMDb ವೀಕ್ಲಿ ರ್‍ಯಾಂಕಿಂಗ್ಸ್ ಗಳನ್ನು ಆಧರಿಸಿದೆ. ಐಎಂಡಿಬಿಯಲ್ಲಿರುವ ದೀಪಿಕಾ ಅವರ ಪುಟವನ್ನು ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೈಜ ಪುಟ ವೀಕ್ಷಣೆಗಳ ಆಧಾರದ ಮೇಲೆ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.
ಟಾಪ್ 100 ಭಾರತೀಯ ಸೆಲೆಬ್ರಿಟಿಗಳಲ್ಲಿ ಶಾರುಖ್, ಸಲ್ಮಾನ್, ಆಮೀರ್ ಅವರನ್ನು ಮೀರಿಸಿ ನಟಿ ದೀಪಿಕಾ ಪಡುಕೋಣೆ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
2007ರಲ್ಲಿ ಶಾರುಖ್ ಖಾನ್ ಅವರ ‘ಓಂ ಶಾಂತಿ ಓಂ’ ಸಿನಿಮಾದ ಬಿಟೌನ್ ಗೆ ಎಂಟ್ರಿ ಕೊಟ್ಟ ದೀಪಿಕಾ ಇಂದು ಬಹುದೊಡ್ಡ ಸ್ಟಾರ್ ನಟಿಯಾಗಿ ನೆಲೆಕಂಡಿದ್ದಾರೆ. ಅಲ್ಲಿಂದ ಅವರು ಯಾವ ಸೂಪರ್ ಸ್ಟಾರ್ ಗೂ ಕಡಿಮೆಯಿಲ್ಲದಂತೆ ಎತ್ತರಕ್ಕೆ ಬೆಳೆದು ಇಂದು ಅತ್ಯಂತ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ನಟ ಶಾರುಖ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ. ನಟನೆಯಿಂದ ದೂರ ಉಳಿದರೂ ನಟಿ ಐಶ್ವರ್ಯಾ ಅವರು 3ನೇ ಸ್ಥಾನದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ತನ್ನ ಅಭಿನಯದಿಂದ ಗಮನ ಸೆಳೆದಿರುವ ಆಲಿಯಾ ಭಟ್ 4ನೇ ಸ್ಥಾನದಲ್ಲಿದ್ದಾರೆ. ದಿವಂಗತ ನಟ ಇರ್ಫಾನ್ ಖಾನ್ 5ನೇ ಸ್ಥಾನದಲ್ಲಿದ್ದಾರೆ. ಆಮೀರ್ ಖಾನ್(6), ಸುಶಾಂತ್ ಸಿಂಗ್ ರಜಪೂತ್(7), ಸಲ್ಮಾನ್ ಖಾನ್ (8), ಹೃತಿಕ್ ರೋಷನ್ (9), ಅಕ್ಷಯ್ ಕುಮಾರ್ 10ನೇ ಸ್ಥಾನದಲ್ಲಿದ್ದಾರೆ.
ಇತ್ತೀಗಷ್ಟೇ ʼಅನಿಮಲ್ʼ ಸಿನಿಮಾದಲ್ಲಿ ನಟಿಸಿದ ತೃಪ್ತಿ ದಿಮ್ರಿ ಈ ಪಟ್ಟಿಯಲ್ಲಿ 15ನೇ ಸ್ಥಾನವನ್ನು ಪಡೆದಿದ್ದಾರೆ.
ಬಾಲಿವುಡ್ ಬಹುತೇಕ ಬಿಗ್ ಸ್ಟಾರ್ ಈ ಲಿಸ್ಟ್ ನಲ್ಲಿದ್ದರೆ, ಇತ್ತ ದಕ್ಷಿಣ ಸಿನಿರಂಗದ ಖ್ಯಾತ ನಟರು ಕೂಡ ಈ ಲಿಸ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ, ಸಮಂತಾ ರುತ್ ಪ್ರಭು(13ನೇ ಸ್ಥಾನ), ತಮನ್ನಾ ಭಾಟಿಯಾ(16), ನಯನತಾರಾ(18ನೇ ಸ್ಥಾನ), ಪ್ರಭಾಸ್(29), ಧನುಷ್(30ನೇ ಸ್ಥಾನ), ರಾಮ್ ಚರಣ್(31ನೇ ಸ್ಥಾನ) ದಳಪತಿ ವಿಜಯ್(35ನೇ ಸ್ಥಾನ), ರಜಿನಿಕಾಂತ್(42ನೇ ಸ್ಥಾನ), ವಿಜಯ್ ಸೇತುಪತಿ(43ನೇ ಸ್ಥಾನ),ಅಲ್ಲು ಅರ್ಜುನ್(47ನೇ ಸ್ಥಾನ), ಮೋಹನ್ ಲಾಲ್(48ನೇ ಸ್ಥಾನ)
ಇನ್ನು ನಟ ಯಶ್(89ನೇ ಸ್ಥಾನ), ಕಮಲ್ ಹಾಸನ್, ಪ್ರಭಾಸ್, ಫಾಹದ್ ಫಾಸಿಲ್ ಕೂಡ ಈ ಲಿಸ್ಟ್ ನಲ್ಲಿದ್ದಾರೆ.
ನಟಿ ದೀಪಿಕಾ ಮುಂದೆ ʼಕಲ್ಕಿ2898 ಎಡಿʼ , ʼಸಿಂಗಂ ಎಗೇನ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
View this post on Instagram
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.