“ಧಾಕಡ್” ಸಿನೆಮಾದ ಬಿಹೈಂಡ್ ದಿ ಸೀನ್ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ ಕಂಗನಾ..!
ಕಂಗನಾ ರನೌತ್, ರೈತರಲ್ಲಿ ಕ್ಷಮೆಯಾಚಿಸದಿದ್ದರೇ, ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ” : ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು
Team Udayavani, Feb 12, 2021, 6:15 PM IST
ನವ ದೆಹಲಿ : ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಮುಂದಿನ ಸಿನೆಮಾ “ಧಾಕಡ್” ನ ಬಿಹೈಂಡ್ ದಿ ಸೀನ್(ಬಿಟಿಎಸ್) ಫೋಟೊವೊಂದನ್ನು ಟ್ವೀಟರ್ ನಲ್ಲಿ ಶುಕ್ರವಾರ(ಫೆ.12) ಪೋಸ್ಟ್ ಮಾಡಿದ್ದಾರೆ.
14 ಘಂಟೆಗಳ ನೈಟ್ ಶಿಫ್ಟ್ ಶೂಟಿಂಗ್ ನ್ನು ನಾನು ಕಳೆದಿದ್ದೇನೆ. ಇದು ನನ್ನ 10ನೇ ದಿನದ ನೈಟ್ ಶಿಪ್ಟ್ ಎಂದು ಅವರು ಹೇಳಿಕೊಂಡಿದ್ದಾರೆ. ಫೋಟೊದಲ್ಲಿ ಕಂಗನಾ ಜೊತೆ ಚಿತ್ರದ ನಿರ್ದೇಶಕ ರಜನೀಶ್, ಹಾಸ್ಯಾಸ್ಪದ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.
ಓದಿ : “ಮಾನವನ ಕೂದಲಿಗಿಂತ 10 ಪಟ್ಟು ಸಣ್ಣದಿರುವ ಬ್ರೈನ್ ಮೆಷಿನ್” ಅಭಿವೃದ್ಧಿಯಲ್ಲಿ ಎಲೊನ್ ಮಸ್ಕ್.!
10 ನೇ ನೈಟ್ ಶಿಫ್ಟ್ , ಬಿಡುವಿಲ್ಲದ ಚಿತ್ರೀಕರಣ, 14 ಗಂಟೆಗಳ ನೈಟ್ ಶಿಫ್ಟ್, ಬೆಳಗಾಗಿದೆ ಆದರೇ, ನಮ್ಮ ಮುಖ್ಯಸ್ಥ @RazyGhai ಅವರು tum mujhe khoon do main tumhe aazadi dunga.. ನಾನು ನಿಮ್ಮವಳು. Bring it on #Dhaakad ಎಂದು ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.
10th night shift non stop action, 14 hours shift night rolled in to morning but our chief @RazyGhai be like tum mujhe khoon do main tumhe aazadi dunga..
Well I am all yours ….. bring it on #Dhaakad pic.twitter.com/8aswVi7Lce— Kangana Ranaut (@KanganaTeam) February 12, 2021
ಏತನ್ಮಧ್ಯೆ, ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು “ಕಂಗನಾ ರನೌತ್, ರೈತರಲ್ಲಿ ಕ್ಷಮೆಯಾಚಿಸದಿದ್ದರೇ, ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ” ಎಂದು ಎಸ್ ಪಿ ಗೆ ಮನವಿ ಪತ್ರವೊಂದನ್ನು ಕೊಟ್ಟಿದ್ದಾರೆ.
ಇನ್ನು, ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಆಕೆಯ ವಿರುದ್ಧ ಫೆಬ್ರವರಿ 12 ಹಾಗೂ 13ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿರುವುದನ್ನು ಬೆತುಲ್ ನ SDPO ನಿತೇಶ್ ಪಟೇಲ್ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಓದಿ : ತೆಂಗಿನ ಮರದ ಬುಡ ಬಿಡಿಸಿದರೆ ಏನಾಗುತ್ತದೆ? | How to Grow a Coconut Tree
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.