ಧನುಷ್ ಅಭಿನಯದ ‘ಮಾರನ್’ ಮಾರ್ಚ್ 11 ರಂದು ಓಟಿಟಿಯಲ್ಲಿ ಬಿಡುಗಡೆ
Team Udayavani, Mar 1, 2022, 12:46 PM IST
ನಿರ್ದೇಶಕ ಕಾರ್ತಿಕ್ ನರೇನ್ ಅವರ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್, ಧನುಷ್ ಮತ್ತು ಮಾಳವಿಕಾ ಮೋಹನನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ `ಮಾರನ್`, ಮಾರ್ಚ್ 11 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.
ಸೋಮವಾರ, ಚಿತ್ರದ ಟ್ರೇಲರ್ ಅನ್ನು ಅಭಿಮಾನಿಗಳು ಮತ್ತು ಪ್ರೇಕ್ಷಕರು ಟ್ವಿಟರ್‌ನಲ್ಲಿ `ಟ್ವಿಟರ್ ಅನ್‌ಲಾಕ್` ಎಂಬ ವೈಶಿಷ್ಟ್ಯದ ಮೂಲಕ ಅನಾವರಣಗೊಳಿಸಿದ್ದು, ಈ ವೈಶಿಷ್ಟ್ಯವನ್ನು ಅಳವಡಿಸಿಕೊಂಡ ಮೊದಲ ತಮಿಳು ಚಿತ್ರ ಇದಾಗಿದೆ ಎಂದು ತಯಾರಕರು ಹೇಳಿದ್ದಾರೆ.
ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ಪ್ರೇಕ್ಷಕರನ್ನೇ ಸೆಲೆಬ್ರಿಟಿಗಳನ್ನಾಗಿ ಮಾಡುವ ಉದ್ದೇಶದಿಂದ `ಟ್ವಿಟರ್ ಅನ್‌ಲಾಕ್’ ಮೂಲಕ ಟ್ರೇಲರ್ ಅನ್ನು ಅನಾವರಣಗೊಳಿಸಿತು.
ಇದೀಗ ಟ್ರೈಲರ್ ಡಿಸ್ನಿ+ ಹಾಟ್‌ಸ್ಟಾರ್ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸತ್ಯಜ್ಯೋತಿ ಫಿಲ್ಮ್ಸ್ ಟಿ ಜಿ ತ್ಯಾಗರಾಜನ್ ಅವರು ಪ್ರಸ್ತುತಪಡಿಸಿದ್ದು, ಸೆಂಧಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ನಿರ್ಮಿಸಿದ್ದಾರೆ, ಕಾರ್ತಿಕ್ ನರೇನ್ ನಿರ್ದೇಶನದ `ಮಾರನ್’ ಚಿತ್ರದಲ್ಲಿ ಧನುಷ್ ಮತ್ತು ಮಾಳವಿಕಾ ಮೋಹನನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಜಿ.ವಿ.ಯವರ ಸಂಗೀತವನ್ನೊಳಗೊಂಡಿದೆ.
ಇದನ್ನೂ ಓದಿ:ಸ್ಯಾಂಡಲ್ ವುಡ್ ಶಿವಧ್ಯಾನ; ಇಂದು ಹಾಡು, ಪೋಸ್ಟರ್, ಟೈಟಲ್ ರಿಲೀಸ್
ಪ್ರಕಾಶ್ ಕುಮಾರ್, ಸಮುತಿರಕನಿ, ಕೃಷ್ಣ ಕುಮಾರ್, ಮಾಸ್ಟರ್ ಮಹೇಂದ್ರನ್, ಜಯಪ್ರಕಾಶ್ ಮತ್ತು ಆಡುಕಳಂ ನಾರಾಯಣ್ ಸೇರಿದಂತೆ ಇತರರನ್ನು ತಾರಾಂಗಣ ಒಳಗೊಂಡಿದ್ದು, ಚಿತ್ರಕಥೆಯನ್ನು ಕಾರ್ತಿಕ್ ನರೇನ್ ಮತ್ತು ಖ್ಯಾತ ಬರಹಗಾರರಾದ ಸುಹಾಸ್ ಮತ್ತು ಶರ್ಫು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಗೆದ್ದವರು ಯಾರು?
Movies: ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿ ಕೈ ಸುಟ್ಟುಕೊಂಡ ಸ್ಟಾರ್ ಸಿನಿಮಾಗಳು
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್ ಅರ್ಜುನ್ʼ
Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್ ಹಿಟ್ ʼಮಿರ್ಜಾಪುರ್ʼ ಸರಣಿ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.