![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 11, 2023, 1:06 PM IST
ಚೆನ್ನೈ: ದೀಪಾವಳಿ ಹಬ್ಬದ ತಯಾರಿಗೆ ಕಾಲಿವುಡ್ ರೆಡಿಯಾಗಿದೆ. ಹೊಸ ಸಿನಿಮಾಗಳ ಅಪ್ಡೇಟ್ ಗಳು ಒಂದೊಂದಾಗಿ ಹೊರ ಬೀಳುತ್ತಿವೆ. ರಿಲೀಸ್ ಡೇಟ್, ಟೀಸರ್, ಸಾಂಗ್ ರಿಲೀಸ್ ಹೀಗೆ ತನ್ನ ಸಿನಿಮಾದಿಂದ ಹೊಸ ಅಪ್ಡೇಟ್ ಗಳನ್ನು ಚಿತ್ರತಂಡ ದೀಪಾವಳಿಗೆ ನೀಡಲು ರೆಡಿಯಾಗಿವೆ.
ಪ್ರತಿ ವರ್ಷ ಸಂಕ್ರಾಂತಿ ಹಬ್ಬಕ್ಕೆ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ. ಮುಂದಿನ ವರ್ಷ ಕಾಲಿವುಡ್ ನಲ್ಲಿ ಬಿಗ್ ಸಿನಿಮಾಗಳು ರಿಲೀಸ್ ಸಂಕ್ರಾಂತಿ ಹಬ್ಬವನ್ನು ಲಾಕ್ ಮಾಡಿಕೊಂಡಿವೆ. ಇದರಲ್ಲಿ ಪ್ರಮುಖವಾದವು ಎಂದರೆ ಧನುಷ್ ಅವರ ʼಕ್ಯಾಪ್ಟನ್ ಮಿಲ್ಲರ್ʼ. ಈ ಸಿನಿಮಾ ರಿಲೀಸ್ ಸಮಯದಲ್ಲೇ ರಜಿನಿಕಾಂತ್ ಐಶ್ವರ್ಯಾ ರಜಿನಿಕಾಂತ್ ನಿರ್ದೇಶನದ ʼಲಾಲ್ ಸಲಾಂʼ ಸಿನಿಮಾ ಕೂಡ ರಿಲೀಸ್ ಆಗಲಿದೆ ಎನ್ನಲಾಗಿದೆ.
ಸಂಕ್ರಾಂತಿ ಹಬ್ಬಕ್ಕೆ ಕಾಲಿವುಡ್ ನಲ್ಲಿ ʼಲಾಲ್ ಸಲಾಂʼ ಹಾಗೂ ʼಕ್ಯಾಪ್ಟನ್ʼ ಜೊತೆಯಾಗಿಯೇ ರಿಲೀಸ್ ಆಗಲಿದೆ ಎನ್ನಲಾಗಿದ್ದು, ಫ್ಯಾನ್ಸ್ ಗಳು ಬಾಕ್ಸ್ ಆಫೀಸ್ ಕದನ ನೋಡಲು ಕಾಯುತ್ತಿದ್ದಾರೆ.
2022 ರಲ್ಲಿ ಧನುಷ್ ಹಾಗೂ ಐಶ್ವರ್ಯಾ ತನ್ನ 18 ವರ್ಷದ ದಾಂಪತ್ಯ ಜೀವನದಿಂದ ದೂರವಿದ್ದು ಪ್ರತ್ಯೇಕವಾಗಿ ಇರುವುದಾಗಿ ಘೋಷಿಸಿದ್ದರು. ಆದರೆ ಅಧಿಕೃತವಾಗಿ ಇನ್ನು ಕೂಡ ಇಬ್ಬರು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ವಿಚ್ಛೇದನವನ್ನು ಪಡೆದಿಲ್ಲ. ತನ್ನ ಮಕ್ಕಳಾದ ಲಿಂಗಾ ಹಾಗೂ ಯಾತ್ರಾ ಅವರಿಗೆ ಪೋಷಕರಾಗಿ ಉಳಿದಿದ್ದು, ದೂರವಿದ್ದೇ ಮಕ್ಕಳಿಗೆ ಸಮಯವನ್ನು ನೀಡುತ್ತಿದ್ದಾರೆ.
ʼಲಾಲ್ ಸಲಾಂʼ ಐಶ್ವರ್ಯಾ ನಿರ್ದೇಶನದ ಮೂರನೇ ಸಿನಿಮಾ. ಈ ಹಿಂದೆ ಅವರು ʼ3ʼ(2011), ʼ ವೈ ರಾಜಾ ವೈʼ(2015) ಸಿನಿಮಾವನ್ನು ಮಾಡಿದ್ದರು. ʼಲಾಲ್ ಸಲಾಂʼ ಸಿನಿಮಾದಲ್ಲಿ ವಿಷ್ಣು ವಿಶಾಲ್,ವಿಕ್ರಾಂತ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದು, ರಜಿನಿಕಾಂತ್ ಹಾಗೂ ಕಪಿಲ್ ದೇವ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದ ಟೀಸರ್ ದೀಪಾವಳಿಗೆ ರಿಲೀಸ್ ಆಗಲಿದೆ ಎನ್ನಲಾಗಿದೆ.
ಇನ್ನು ಧನುಷ್ ಅವರ ʼಕ್ಯಾಪ್ಟನ್ ಮಿಲ್ಲರ್ʼ ನಿರೀಕ್ಷೆ ಹೆಚ್ಚಿಸಿದ್ದು, ಅರುಣ್ ಮಾಥೇಶ್ವರನ್ ಅವರ ಈ ಸಿನಿಮಾದಲ್ಲಿ ಧನುಷ್ ಜೊತೆ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾ ಮೋಹನ್, ಸಂದೀಪ್ ಕಿಶನ್, ನಾಸರ್, ವಿನೋತ್ ಕಿಶನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Confirmed, @dhanushkraja v/s @ash_rajinikanth for #Pongal2024 as #CaptainMiller takes on #LalSalaam! pic.twitter.com/q6XvCpLHz0
— Sreedhar Pillai (@sri50) November 10, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.