ಐಸಿಯುನಲ್ಲಿ ಪುಟ್ಟ ಕಂದ: ಮಗು ಜನಿಸಿ 2 ತಿಂಗಳಾದ ಬಳಿಕ ಸತ್ಯ ಬಿಚ್ಚಿಟ್ಟ ನಟಿ ದಿಯಾ
Team Udayavani, Jul 14, 2021, 4:15 AM IST
ಮುಂಬೈ : ಬಾಲಿವುಡ್ ನಟಿ ದಿಯಾ ಮಿರ್ಜಾ ತಾವು ತಾಯಿಯಾದ ವಿಚಾರವನ್ನು ಎರಡು ತಿಂಗಳ ಬಳಿಕ ಎಲ್ಲರೆದರೂ ಹಂಚಿಕೊಂಡಿದ್ದಾರೆ. ಜೊತೆಗೆ ಈ ವಿಷಯ ಇಷ್ಟು ದಿನಗಳವರೆಗೆ ಗುಟ್ಟಾಗಿ ಇಟ್ಟಿರುವುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.
ದಿಯಾ ಮಿರ್ಜಾ ಇಂದು (ಜುಲೈ 14) ಇನ್ಸ್ಟಾಗ್ರಾಂನಲ್ಲಿ ತನ್ನ ಮಗುವಿನ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ “ತನ್ನ ಮಗ ಅವ್ಯಾನ್ ಆಜಾದ್ ರೇಖಿ ಮೇ 14 ರಂದು ಅವಧಿಪೂರ್ವವಾಗಿ ಜನಿಸಿದ ಮತ್ತು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಪ್ರೀತಿಯ ಆರೈಕೆಯಲ್ಲಿದ್ದ” ಎಂದು ಬರೆದಿದ್ದಾರೆ.
ದಿಯಾಗೆ ತುರ್ತು ಅಪೆಂಡೆಕ್ಟಮಿ ಮತ್ತು ತೀವ್ರವಾದ ಬ್ಯಾಕ್ಟೀರಿಯಾದ ಸೋಂಕು ಇದ್ದು ಅದು ಮಗುವಿಗೆ ಹಾನಿಯಾಗಬಹುದು ಮತ್ತು ಸಿ-ಸೆಕ್ಷನ್ ನಂತರ, ಮಗುವನ್ನು ನವಜಾತ ಶಿಶುಗಳ ಐಸಿಯುನಲ್ಲಿ ಇರಿಸಿ ಆರೈಕೆ ಮಾಡಲಾಗಿತ್ತು.
ಮಗು ತನ್ನ ಹೆತ್ತವರು, ಅಜ್ಜಿಯರು ಮತ್ತು ಸಹೋದರಿ ಸಮೈರಾ ಇರುವ ಮನೆಗೆ ಶೀಘ್ರವೇ ಬರುತ್ತಾನೆ ಎಂದು ದಿಯಾ ಹೇಳಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ದಿಯಾ ಮಿರ್ಯಾ ಅವರು ಉದ್ಯಮಿ ವೈಭವ್ ರೇಖಿ ಜೊತೆ ಮದುವೆ ಆಗಿದ್ದರು. ಇದು ಅವರಿಗೆ ಎರಡನೇ ವಿವಾಹ. ಅದಕ್ಕೂ ಮುನ್ನ 2014ರಲ್ಲಿ ಅವರು ಸಾಹಿಲ್ ಸಂಘ ಜೊತೆ ಮದುವೆಯಾಗಿ, 2019ರಲ್ಲಿ ವಿಚ್ಛೇದನ ನೀಡಿದ್ದರು. ರೆಹ್ನಾ ಹೈ ತೇರೆ ದಿಲ್ ಮೆ, ಲಗೇ ರಹೋ ಮುನ್ನಾ ಭಾಯ್, ಸಂಜು ಮುಂತಾದ ಸಿನಿಮಾಗಳಿಂದ ದಿಯಾ ಮಿರ್ಜಾ ಹೆಚ್ಚು ಫೇಮಸ್ ಆಗಿದ್ದಾರೆ.
ದಿಯಾ ಕೊನೆಯ ಬಾರಿಗೆ ಅನುಭವ್ ಸಿನ್ಹಾ ಅವರ “ಥಪ್ಪಡ್” ನಲ್ಲಿ ಕಾಣಿಸಿಕೊಂಡಿದ್ದಾರೆ. ತಾಪ್ಸಿ ಪನ್ನು ಅಭಿನಯದ ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಸಿನಿಮಾ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ನಾಗಾರ್ಜುನ ಮತ್ತು ಸೈಯಾಮಿ ಖೇರ್ ಜೊತೆಯಾಗಿ ನಟಿಸಿರುವ ತೆಲುಗು ಆಕ್ಷನ್ ಡ್ರಾಮಾ “ವೈಲ್ಡ್ ಡಾಗ್” ನಲ್ಲಿ ದಿಯಾ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.