ಗೇಮ್ ಆಫ್ ಥ್ರೋನ್ಸ್, ಜೇಮ್ಸ್ ಬಾಂಡ್ ಖ್ಯಾತಿಯ ಜನಪ್ರಿಯ ನಟಿ ಡಯಾನಾ ಇನ್ನಿಲ್ಲ
ರಿಗ್ 1959ರಲ್ಲಿ ರಾಯಲ್ ಶೇಕ್ಸ್ ಪಿಯರ್ ಕಂಪನಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ್ದರು.
Team Udayavani, Sep 11, 2020, 10:43 AM IST
ಲಂಡನ್: ಹಾಲಿವುಡ್ ನ ದ ಅವೆಂಜರ್ಸ್, ಗೇಮ್ ಆಫ್ ಥ್ರೋನ್ಸ್, ಜೇಮ್ಸ್ ಬಾಂಡ್ ಖ್ಯಾತಿಯ ಹಿರಿಯ ನಟಿ, ಬ್ರಿಟಿಷ್ ಪ್ರಶಸ್ತಿ ವಿಜೇತ ಡಯಾನಾ ರಿಗ್ (82) ಗುರುವಾರ (ಸೆ.10, 2020) ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಬಾಲಿವುಡ್ ಸಿನಿಮಾರಂಗದಲ್ಲಿನ ದೀರ್ಘ ಕಾಲದ ನಟನೆಗಾಗಿ ರಿಗ್ ಅವರು ಪ್ರತಿಷ್ಠಿತ ಎಮ್ಮಿ, ಟೋನಿ ಹಾಗೂ ಬಾಫ್ಟಾ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಡಯಾನಾ ರಿಗ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಿಧನರಾಗಿರುವುದಾಗಿ ರಿಗ್ ಮಾಧ್ಯಮ ವಕ್ತಾರ ಸೈಮನ್ ಬೆರೆಸ್ ಫೋರ್ಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ನನ್ನ ತಾಯಿ ಕಳೆದ ತಿಂಗಳು ತುಂಬಾ ಸಂತೋಷ, ಪ್ರೀತಿ, ನೆಮ್ಮದಿಯಿಂದ ಕಳೆದಿದ್ದರು. ಆಕೆಯ ವೃತ್ತಿ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಅದು ಪದಗಳಿಗೂ ಮೀರಿದ್ದಾಗಿದೆ” ಎಂದು ರಿಗ್ ಮಗಳು ನಟಿ ರಾಚೆಲ್ ಸ್ಟಿರ್ಲಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಂಜನಾ-ಅಜೀಜ್ ನಡುವೆ ಮದುವೆ?
ಬ್ರಿಟನ್ ನ ಪ್ರತಿಷ್ಠಿತ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ (ಆರ್ ಎಡಿಎ) ನಲ್ಲಿ ಕ್ಲಾಸಿಕಲ್ ತರಬೇತಿ ಪಡೆದ ನಂತರ ಡಯಾನಾ ರಿಗ್ 1959ರಲ್ಲಿ ರಾಯಲ್ ಶೇಕ್ಸ್ ಪಿಯರ್ ಕಂಪನಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ಉತ್ತರ ಇಂಗ್ಲೆಂಡ್ ನಲ್ಲಿ ಜನಿಸಿದ್ದ ಡಯಾನಾ ಶಾಲೆಗೆ ಹೋಗುವ ಮುನ್ನ ಕುಟುಂಬದ ಜತೆ ಭಾರತಕ್ಕೆ ಬಂದು ವಾಸ್ತವ್ಯ ಹೂಡಿದ್ದರು.
ಟೆಲಿವಿಷನ್ ಸ್ಪೈ(ಗುಪ್ತಚರ) ಸರಣಿಯಾದ ದ ಅವೆಂಜರ್ಸ್ ನಲ್ಲಿ ಡಯಾನಾ ನಟಿಸುವ ಮೂಲಕ ಮನೆಮಾತಾಗಿದ್ದರು. ತನ್ನ ವಿಭಿನ್ನ ಶೈಲಿಯ ನಟನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಡಯಾನಾ ಗುರುತಿಸಿಕೊಳ್ಳುವಂತಾಗಿತ್ತು. 1969ರಲ್ಲಿ ಜೇಮ್ಸ್ ಬಾಂಡ್ ಸರಣಿಯ “ಆನ್ ಹರ್ ಮೆಜೆಸ್ಟಿ ಸೀಕ್ರೆಟ್ ಸರ್ವಿಸ್ ಸಿನಿಮಾದಲ್ಲಿ ಬಾಂಡ್ ಪತ್ನಿ (ಟ್ರೇಸಿ)ಯಾಗಿ ಅಭಿನಯಿಸಿದ್ದರು. ಬಾಂಡ್ ಸಿನಿಮಾದಲ್ಲಿನ ಡಯಾನಾ ನಟನೆಯನ್ನು ನಿರ್ಮಾಪಕ ಮೈಕಲ್ ಜಿ ವಿಲ್ಸನ್ ಶ್ಲಾಘಿಸಿದ್ದರು.
ಇದನ್ನೂ ಓದಿ: ಇನ್ನೆಷ್ಟು ಧ್ವನಿಗಳನ್ನು ಹತ್ತಿಕ್ಕುವಿರಿ ನೀವು?: CM ಠಾಕ್ರೆಗೆ ನಟಿ ಕಂಗನಾ ಪ್ರಶ್ನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
Aishwarya Rai Bachchan ಬರ್ತ್‌ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.