ಬ್ರಾ ಖರೀದಿಗೆ ಶಾಪಿಂಗ್‌ ಹೋದಾಗ.. ಸಿನಿಮಾ ಸೀನ್ ಕುರಿತು ಮಾತನಾಡುತ್ತ ನೈಜ ಘಟನೆ ನೆನೆದ ಕರಣ್

Team Udayavani, Aug 3, 2023, 6:02 PM IST

ಬ್ರಾ ಖರೀದಿಗೆ ಶಾಪಿಂಗ್‌ ಹೋದಾಗ.. ಸಿನಿಮಾ ಸೀನ್ ಕುರಿತು ಮಾತನಾಡುತ್ತ ನೈಜ ಘಟನೆ ನೆನೆದ ಕರಣ್

ಮುಂಬಯಿ: ಬಾಲಿವುಡ್‌ ನಿರ್ದೇಶಕ ಕರನ್ ಜೋಹರ್‌ 7 ವರ್ಷದ ಬಳಿಕ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ.

ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಇತ್ತ ಸಿನಿಮಾ ತಂಡ ಪ್ರತಿಕಾಗೋಷ್ಠಿ ನಡೆಸಿ ಸಿನಿಮಾದ ಕುರಿತಾದ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಸ್ತ್ರೀವಾದ, ಪುರುಷ ಸಮಾಜದ ವಿಚಾರವನ್ನು ಸಿನಿಮಾದಲ್ಲಿ ಆಧುನಿಕ ರೀತಿಯಲ್ಲಿ ತೋರಿಸಲಾಗಿದೆ.

ಸಿನಿಮಾದಲ್ಲಿ ರಾಕಿ (ರಣವೀರ್) ರಾಣಿಯ ತಾಯಿ (ಚುರ್ನಿ ಗಂಗೂಲಿ) ಜೊತೆಗೆ ಒಳ ಉಡುಪುಗಳ ಶಾಪಿಂಗ್‌ಗೆ ಹೋಗುವ ದೃಶ್ಯವೊಂದಿದೆ. ಮೊದಲು ಎಲ್ಲಿಗೆ ಹೋಗುವುದೆಂದು ತಿಳಿಯದೇ, ಆ ಬಳಿಕ ರಾಕಿಗೆ ರಾಣಿಯ ತಾಯಿಅವರ ಕುಟುಂಬದ ಎಲ್ಲಾ ಹೆಣ್ಣುಮಕ್ಕಳು ಇದನ್ನು ಧರಿಸುತ್ತಾರೆ ಮತ್ತು ಅದರಲ್ಲಿ ಯಾವುದೇ ಮುಜುಗರವಿಲ್ಲ ಎಂದು ಹೇಳುವ ಡೈಲಾಗ್ ಇದೆ.

ಇದೇ ವಿಚಾರವಾಗಿ ನಿರ್ದೇಶಕ ಕರಣ್‌ ಜೋಹರ್‌ ಮಾತನಾಡಿದ್ದು, ತಾನು ಈ ರೀತಿ ಶಾಪಿಂಗ್‌ ಹೋಗುವ ವೇಳೆ ಏನಾಗಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

“ಇದು ನಿಷೇಧ ಹೇರುವ ವಿಚಾರವಲ್ಲ. ನಾನೂ ಕೂಡ ನನ್ನ ತಾಯಿಗೆ ಬ್ರಾ ಖರೀದಿಸಲು ಶಾಪಿಂಗ್‌ ಗೆ ಹೋಗಿದ್ದೇನೆ. ನನಗಿದು ಸಮಸ್ಯೆಯಾಗಿಲ್ಲ. ಆದರೆ ಈ ವೇಳೆ ನನ್ನ ಜೊತೆ ಸ್ನೇಹಿತರಿದ್ದರು. ನಾನು ಅದನ್ನು ಖರೀದಿಸುವಾಗ ಅವರು ಗಾಬರಿಗೊಂಡಿದ್ದರು. ನಾನು ಈ ಕೆಲಸವನ್ನು ಮಹಿಳಾ ಸ್ನೇಹಿತರಿಗೆ ಯಾಕೆ ಕೊಟ್ಟಿಲ್ಲ? ಎಂದಿದ್ದರು. ಆದರೆ ಇದ್ಯಾಕೆ? ನನ್ನ ತಾಯಿಗೆ 81 ವರ್ಷವಾಗಿದೆ. ಅವಳು ಕೇಳಿದ್ದನ್ನು ನಾನ್ಯಾಕೆ ಮಾಡಬಾರದು. ಬೇರೆ ಅವರಿಗೆ ಯಾಕೆ ನೀಡಬೇಕು? ಅವಳಿಗೆ ಒಳ ಉಡುಪು ಬೇಕೋ ಅಥವಾ ಬೇರೆ ಏನೋ ಬೇಕೋ ಅದನ್ನು ನಾನೇ ತಂದುಕೊಡಬೇಕು. ನನ್ನ ಪ್ರಕಾರ ಸಿನಿಮಾದಲ್ಲಿನ ಈ ದೃಶ್ಯ ಸ್ವಾಭಾವಿಕವಾದುದು. ಈ ದೃಶ್ಯದಲ್ಲಿ “ ಮದುವೆಯಾದ ಬಳಿಕ ಹೆಂಗಸರು ಗಂಡಸರ ಒಳ ಉಡುಪು ತೊಳೆಯುತ್ತಿದ್ದಾರೆ, ನೀನು ಈ ಬ್ರಾ ಟಚ್‌ ಮಾಡಲ್ವಾ? ಎನ್ನುವ ಡೈಲಾಗ್‌ ಇದೆ ನನಗೆ ಗೊತ್ತು ಇದರ ಬಗ್ಗೆ ಜನ ಏನು ಭಾವಿಸುತ್ತಾರೆ” ಎಂದು ಕರಣ್‌ ಜೋಹರ್‌ ಹೇಳಿದರು.

ರೊಮ್ಯಾಂಟಿಕ್‌ ಕಥಾ ಹಂದರವನ್ನು ಹೊಂದಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಜುಲೈ 28 ರಂದು ತೆರೆಗೆ ಬಂದಿದೆ. ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಮುಂತಾದವರು ನಟಿಸಿದ್ದಾರೆ.

ಟಾಪ್ ನ್ಯೂಸ್

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್‌ ಮಲಿಕ್; ಇಲ್ಲಿದೆ ಫೋಟೋಸ್

Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್‌ ಮಲಿಕ್; ಇಲ್ಲಿದೆ ಫೋಟೋಸ್

ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್‌ ಮಾತು

ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್‌ ಮಾತು

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.