ರಿಮೇಕ್ ಆದರೂ ಭರ್ಜರಿ ಹಿಟ್: 23 ದಿನಗಳಲ್ಲಿ ‘ದೃಶ್ಯಂ 2’ ಗಳಿಸಿದ್ದೆಷ್ಟು ಗೊತ್ತೇ?
Team Udayavani, Dec 11, 2022, 2:05 PM IST
ಮುಂಬಯಿ : ಅಜಯ್ ದೇವಗನ್ ನಾಯಕನಾಗಿ ನಟಿಸಿರುವ ರಿಮೇಕ್ ಚಿತ್ರ “ದೃಶ್ಯಂ 2” ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಗಳಿಸಿದೆ ಎಂದು ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ, ನಿರ್ಮಾಣ ಬ್ಯಾನರ್ ಪನೋರಮಾ ಸ್ಟುಡಿಯೋಸ್ ಚಿತ್ರದ ಇತ್ತೀಚಿನ ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು ಹಂಚಿಕೊಂಡಿದ್ದು, ”ನಾವು 4 ನೇ ಶನಿವಾರದ (ದಿನ 23) ನಮ್ಮ ಪ್ಯಾನ್ ಇಂಡಿಯಾ ನೆಟ್ ಬಾಕ್ಸ್ ಆಫೀಸ್ ಸಂಖ್ಯೆಯನ್ನು ಹೆಮ್ಮೆಯಿಂದ ಜಗತ್ತಿಗೆ ಘೋಷಿಸುತ್ತಿದ್ದು, 203.58 ಕೋಟಿ ರೂಪಾಯಿಗಳ ಎತ್ತರದ ಮತ್ತು ಸುಂದರವಾದ ಅಂಕಿಅಂಶವನ್ನು ಹೊಂದಿದೆ ಮತ್ತು ಬೆಳೆಯುತ್ತಿದೆ, ”ಎಂದು ತಿಳಿಸಲಾಗಿದೆ.
ಈ ಚಲನಚಿತ್ರವು ದೇವಗನ್ ಅವರ 2015 ರ ಕ್ರೈಮ್ ಥ್ರಿಲ್ಲರ್ “ದೃಶ್ಯಂ” ನ ಮುಂದುವರಿದ ಭಾಗವಾಗಿದೆ, ಇದು ಅದೇ ಹೆಸರಿನ ಮೋಹನ್ ಲಾಲ್ ನಟಿಸಿದ್ದ ಮಲಯಾಳಂ ಚಿತ್ರದ ಹಿಂದಿ ರಿಮೇಕ್ ಆಗಿತ್ತು. ಫೆಬ್ರವರಿ 2021 ರಲ್ಲಿ ಬಿಡುಗಡೆಯಾದ ಮಲಯಾಳಂ ಆವೃತ್ತಿಯ ಮುಂದಿನ ಭಾಗವಾಗಿದೆ.
“ದೃಶ್ಯಂ 2” ನಲ್ಲಿ ಶ್ರಿಯಾ ಸರನ್, ಟಬು, ರಜತ್ ಕಪೂರ್, ಇಶಿತಾ ದತ್ತಾ ಮತ್ತು ಅಕ್ಷಯ್ ಖನ್ನಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್ ಮತ್ತು ಕ್ರಿಶನ್ ಕುಮಾರ್ ನಿರ್ಮಿಸಿದ್ದಾರೆ. ಇದನ್ನು ವಯಾಕೋಮ್ 18 ಸ್ಟುಡಿಯೋಸ್, ಟಿ-ಸೀರೀಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.