Dunki twitter review: ಹೇಗಿದೆ ಶಾರುಖ್ ʼಡಂಕಿʼ ಸಿನಿಮಾ; ಇಲ್ಲಿದೆ ಪ್ರೇಕ್ಷಕರ ಅಭಿಪ್ರಾಯ
‘ಡಂಕಿʼ ಸಿನಿಮಾ ಆಸ್ಕರ್ ಗೆ ಅರ್ಹವಾಗಿದೆ ಎಂದ ಪ್ರೇಕ್ಷಕ.!
Team Udayavani, Dec 21, 2023, 12:30 PM IST
ಮುಂಬಯಿ: ಶಾರುಖ್ ಖಾನ್ – ರಾಜಕುಮಾರ್ ಹಿರಾನಿ ಮೊದಲ ಬಾರಿ ಜೊತೆಯಾಗಿರುವ ʼಡಂಕಿʼ ಇಂದು ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಸಾವಿರಾರು ಥಿಯೇಟರ್ ನಲ್ಲಿ ಶಾರುಖ್ ʼಡಂಕಿʼ ಪಯಣವನ್ನು ನೋಡಲು ಪ್ರೇಕ್ಷಕರು ಮುಂಜಾನೆಯಿಂದಲೇ ಕಾದು ಕುಳಿತಿದ್ದಾರೆ.
ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ʼಪಠಾಣ್ʼ, ʼಜವಾನ್ʼ ಬಳಿಕ ʼಡಂಕಿʼ ರಿಲೀಸ್ ಆಗಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಶಾರುಖ್ ಇದ್ದಾರೆ. ಸಿನಿಮಾವನ್ನು ನೋಡಿದ ಪ್ರೇಕ್ಷಕರು ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
“ಡಂಕಿ” ಒಂದು ಎಮೋಷನಲ್ ಸಿನಿಮಾದ ಜೊತೆ ಹಾಸ್ಯವನ್ನು ಸಾರುವ ಸಿನಿಮಾವಾಗಿದೆ. ವಿಕ್ಕಿ ಕೌಶಲ್ ನೆನಪಿನಲ್ಲಿ ಉಳಿಯುತ್ತಾರೆ. ಹಾರ್ದಿ(ಶಾರುಖ್) ಅವರು ಕಿಂಗ್ ಖಾನ್ ಎಂದು ಸಿನಿಮಾವನ್ನು ಮೆಚ್ಚಿಕೊಂಡು ಒಬ್ಬರು ಬರೆದುಕೊಂಡಿದ್ದಾರೆ.
“ರಾಜಕುಮಾರ್ ಹಿರಾನಿ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಹಾಗೂ ಕಲಾವಿದರ ನಟನೆ ಅದ್ಭುತವಾಗಿದೆ. ಇದು ಹಿಂದಿ ಸಿನಿರಂಗದಲ್ಲಿ ಯಾವಾಗಲೂ ನೆನಪಾಗಿ ಉಳಿಯುತ್ತದೆ. ಇದನ್ನು ರಾಜಕುಮಾರ್ ಹಿರಾನಿ ಬಿಟ್ಟು ಬೇರೆ ಯಾರಾದರೂ ನಿರ್ದೇಶನ ಮಾಡುತ್ತಿದ್ದರೆ ಸೂಕ್ತವಾಗಿ ಇರುತ್ತಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ” ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
“ಡಂಕಿ ಫಸ್ಟ್ ಹಾಫ್ ಅದ್ಭುತವಾಗಿದೆ. ಶಾರುಖ್‌ಖಾನ್ ತಾಪ್ಸಿಪನ್ನು ಮತ್ತು ಪೋಷಕ ಪಾತ್ರಗಳ ಅಭಿನಯ ಮೆಚ್ಚುಗೆ ಆಗುತ್ತದೆ” ಎಂದು ಫಿಲ್ಮ್ ಟ್ರೇಡ್ ಎಕ್ಸ್ ಪರ್ಟ್ ಸುಮಿತ್ ಕಡೆಲ್ ಬರೆದುಕೊಂಡಿದ್ದಾರೆ.
“ಈ ಸಿನಿಮಾ 3 ಈಡಿಯಟ್ಸ್‌ಗಿಂತ ಉತ್ತಮವಾಗಿದೆ ಎಂದು ಹೇಳುತ್ತಿದ್ದರು ನಿಜವಾಗಿಯೂ ʼಡಂಕಿʼ ಬಾಲಿವುಡ್‌ನ ಗೇಮ್ ಚೇಂಜರ್ ಆಗಿದೆ. ಇದೊಂದು ಮಾಸ್ಟರ್ ಪೀಸ್ ಆಗಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
‘ಡಂಕಿʼ ಸಿನಿಮಾ ಆಸ್ಕರ್ ಗೆ ಅರ್ಹವಾಗಿದೆ. ಶಾರುಖ್ ಖಾನ್ ಅವರ ʼಹಾರ್ದಿʼ ಅವರ ಪಾತ್ರ ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದೆ. ಇದೊಂದು ಬ್ಲಾಕ್ ಬಸ್ಟರ್ ಹಾಗೂ ಮಾಸ್ಟರ್ ಪೀಸ್ ಸಿನಿಮಾವಾಗಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಮುನ್ನಾಭಾಯಿ ಹಾಗೂ 3 ಈಡಿಯಟ್ಸ್ ಲೆವೆಲ್ ನ ಕಾಮಿಡಿ ʼಡಂಕಿʼ ಸಿನಿಮಾದಲ್ಲಿದೆ. ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಬರ್ತಾ ಇದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ಕೆಲವರು ಸಿನಿಮಾ ನೋಡಿ ನೆಗೆಟಿವ್ ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ.
“ಡಂಕಿ” ಸಿನಿಮಾ ನೋಡಿ ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ. ಕ್ರಿಂಜ್ ರೀತಿಯ ಕಾಮಿಡಿ. ಧಾರಾವಾಹಿಯ ಹಾಗೆ ಬೋರಿಂಗ್ ಡ್ರಾಮಾದಂತೆ ಸಿನಿಮಾ ಇದೆ. ಇದು ಹಿರಾನಿ ಅವರ ಅತ್ಯಂತ ದುರ್ಬಲ ಸಿನಿಮಾ” ಎಂದು ಒಬ್ಬರು ಬರೆದುಕೊಂಡಿದ್ದಾರೆ.
“ಹಳೆಯ ಹಿಂದಿ ಧಾರಾವಾಹಿಯಂತಿದೆ. ತಲೆ ನೋವು ಬರುವ ಹಾಸ್ಯದ ದೃಶ್ಯಗಳಿವೆ. 2 ದೃಶ್ಯಗಳನ್ನು ಚೆನ್ನಾಗಿ ಬರೆಯಲಾಗಿದೆ ಉಳಿದಿರುವ ಎಲ್ಲವೂ ಸಂಪೂರ್ಣ ನಿರಾಶೆ, ರಾಜು ಹಿರಾನಿ ಸರ್ ಅವರ ದುರ್ಬಲ ಕೆಲಸ ಇದು” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಹಿರಾನಿ ಸರ್ ಗಾಗಿ ಮಾತ್ರ ʼಡಂಕಿʼ ನೋಡಿದೆ….ಆದರೆ ಸಿನಿಮಾ ಅಷ್ಟೊಂದು ಚೆನ್ನಾಗಿರಲಿಲ್ಲ ಮತ್ತು ಕಾಮಿಡಿ ಕಥಾವಸ್ತು ಅಷ್ಟೊಂದು ಚೆನ್ನಾಗಿ ಕೆಲಸ ಮಾಡಲಿಲ್ಲ ಒಟ್ಟಾರೆ ಔಟ್‌ಪುಟ್‌ನಿಂದ ನಿರಾಸೆಯಾಗಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.