Dunki;ಶಾರುಖ್-ರಾಜು ಯಾವ ಮ್ಯಾಜಿಕ್ ಮಾಡಿದ್ದಾರೆನ್ನುವ ಕುತೂಹಲ:ಆಮಿರ್ ಖಾನ್
ನಿರ್ದೇಶಕ -ನಿರ್ಮಾಪಕಗೆ ಶುಭ ಹಾರೈಸಿದ ಬಾಲಿವುಡ್ ತಾರೆಯರು...
Team Udayavani, Dec 20, 2023, 5:47 PM IST
ಮುಂಬಯಿ :ಬಹುನಿರೀಕ್ಷಿತ ‘ಡಂಕಿ’ ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಆಮಿರ್ ಖಾನ್ ”ರಾಜ್ ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಏನು ಮ್ಯಾಜಿಕ್ ಮಾಡಿದ್ದಾರೆ ಎಂದು ನೋಡಲು ನಾವೆಲ್ಲರೂ ಬಹಳಷ್ಟು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.
ಖ್ಯಾತ ನಿರ್ದೇಶಕ-ನಿರ್ಮಾಪಕ ರಾಜ್‌ಕುಮಾರ್ ಹಿರಾನಿ ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿದ ಸಂಭ್ರಮದ ವೇಳೆ ಶುಭಕೋರಿರುವ ಆಮಿರ್ ಖಾನ್, ”ಹಿರಾನಿ ನನ್ನ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅಭಿನಂದನೆಗಳು, ರಾಜು, 20 ವರ್ಷಗಳನ್ನು ಪೂರೈಸಿದ ನಿಮ್ಮ ಮುಂದಿನ ಚಿತ್ರ ‘ಡಂಕಿ’. ನೀವು ಮತ್ತು ಶಾರುಖ್ ಏನು ಮ್ಯಾಜಿಕ್ ಮಾಡಿದ್ದೀರಿ ಎಂದು ನೋಡಲು ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೇವೆ. ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.ನಿರಂತರ ಯಶಸ್ಸು ನಿಮಗೆ ಸಿಗಲಿ” ಎಂದು ಪ್ರೀತಿಯಿಂದ ಹಾರೈಸಿದ್ದಾರೆ.
ಹಿರಾನಿ ಅವರು ಸಂಜಯ್ ದತ್, ಅರ್ಷದ್ ವಾರ್ಸಿ ಮತ್ತು ಬೊಮನ್ ಇರಾನಿ ನಟಿಸಿದ್ದ ಸೂಪರ್ ಹಿಟ್ ಚಲನಚಿತ್ರ “ಮುನ್ನಾ ಭಾಯಿ ಎಂಬಿಬಿಎಸ್” ಮೂಲಕ ಗಮನ ಸೆಳೆದಿದ್ದರು. 2003, ಡಿಸೆಂಬರ್ 19 ರಂದು ಬಿಡುಗಡೆಯಾಗಿತ್ತು.
ಅಕ್ರಮ ವಲಸೆ ತಂತ್ರ ‘ಡಾಂಕಿ ಫ್ಲೈಟ್’ ಆಧಾರಿತ ಹಾಸ್ಯ ಚಿತ್ರ “ಡಂಕಿ” ಗುರುವಾರ(ಡಿ.21) ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಹಿರಾನಿ ಅವರಿಗೆ ಶಾರುಖ್ ಖಾನ್ , ವಿದ್ಯಾ ಬಾಲನ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಆರ್. ಮಾಧವನ್ ಸೇರಿ ಖ್ಯಾತ ನಟ ನಟಿಯರು ಶುಭ ಹಾರೈಸಿದ್ದಾರೆ.
ಹಿರಾನಿ ನಿರ್ದೇಶಿಸಿರುವ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರದಲ್ಲಿ ಶಾರುಖ್ ಅವರೊಂದಿಗೆ ತಾಪ್ಸಿ ಪನ್ನು, ಬೊಮನ್ ಇರಾನಿ, ವಿಶೇಷ ಪಾತ್ರದಲ್ಲಿ ವಿಕ್ಕಿ ಕೌಶಲ್ ಸೇರಿ ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.