ಗೋವಾ ಇಫಿ ಚಿತ್ರೋತ್ಸವ; ಎನ್‌ಎಫ್‌ಡಿಸಿ ಯ ಫಿಲ್ಮ್ ಬಜಾರ್‌ಗೆ ಚಾಲನೆ
Team Udayavani, Nov 21, 2019, 2:00 PM IST
ಪಣಜಿ(ಉದಯವಾಣಿ ಪ್ರತಿನಿಧಿಯಿಂದ): ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಸಂಭ್ರಮದ ಜತೆಗೇ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ [ಎನ್‌ಎಫ್‌ಡಿಸಿ] ಹಮ್ಮಿಕೊಂಡಿರುವ 13 ನೇ ವರ್ಷದ ಚಲನಚಿತ್ರಸಂತೆ [ಫಿಲ್ಮ್ ಬಜಾರ್] ಬುಧವಾರ ಉದ್ಘಾಟನೆಗೊಂಡಿತು.
ಏಷ್ಯಾದ ಅತಿದೊಡ್ಡ ಚಲನಚಿತ್ರ ಸಂತೆಯಾದ ಫಿಲ್ಮ್ ಬಜಾರ್ ಪ್ರತಿ ವರ್ಷ ಇಫಿ ಚಿತ್ರೋತ್ಸವದೊಂದಿಗೆ ನಡೆಯುತ್ತದೆ. ಇದನ್ನು ಎನ್‌ಎಫ್‌ಡಿಸಿ ಸಂಘಟಿಸುತ್ತಿದೆ. ಈ ಬಾರಿ ಉತ್ಸವಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವುದೆಂದರೆ ಕೌಶಲ ಕಾರ್ಯಾಗಾರ, ಚಿತ್ರ ನಿರ್ಮಾಪಕರ ಕಾರ್ಯಾಗಾರ.
ನ. 24 ವೆರೆಗೂ ನಡೆಯುವ ಚಲನಚಿತ್ರ ಸಂತೆಯಲ್ಲಿ ವಿಶಾಲ್ ಭಾರದ್ವಾಜ್, ಅದಿಲ್ ಹುಸೇನ್, ಸೌಂದರ್ಯ ರಜನೀಕಾಂತ್, ಪ್ರಸೂನ್ ಜೋಷಿ, ಸಿದ್ಧಾರ್ಥ ರಾಯ್ ಕಪೂರ್, ಮೇಘನಾ ಗುಲ್ಜಾರ್, ವಾಣಿ ತ್ರಿಪಾಠಿ ಟಿಕೂ ಮತ್ತಿತರರು ವಿವಿಧ ಕಾರ್ಯಾಗಾರ, ಉಪನ್ಯಾಸಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸಹ ನಿರ್ಮಾಣ ಯೋಜನೆಯಲ್ಲಿ 14 ಸಿನಿಮಾಗಳು, ಪ್ರಗತಿಯಲ್ಲಿರುವ 5 ಸಿನಿಮಾಗಳು ಹಾಗೂ ಫಿಲ್ಮ್ ಬಜಾರ್‌ನ ಶಿಫಾರಸಿನ 26 ಸಿನಿಮಾಗಳ ಬಗೆಗೂ ಚರ್ಚೆ ನಡೆಯಲಿದೆ. 30 ಕ್ಕೂ ಹೆಚ್ಚು ಭಾಷೆಗಳ 213 ಚಲನಚಿತ್ರಗಳು ವ್ಯೂವಿಂಗ್ ರೂಮ್‌ನಲ್ಲಿ ನೋಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡದ ಆರು ಚಿತ್ರಗಳು ಇದರಲ್ಲಿ ಸೇರಿವೆ. ಇದರೊಂದಿಗೆ ಗೋಂಡಿ, ಬೋಡೊ, ಗೋಜ್ರಿ ಹಾಗೂ ಗಾಲೋ ಭಾಷೆಯ ಚಿತ್ರಗಳು ಸೇರಿರುವುದು ವಿಶೇಷ.
ಈ ಪೈಕಿ 154 ಕಥಾ ಚಿತ್ರಗಳಾಗಿದ್ದು, 59 ಕಿರುಚಿತ್ರಗಳು. 89 ಮಂದಿಯ ಚೊಚ್ಚಲ ಚಿತ್ರಗಳು ಈ ಪಟ್ಟಿಯಲ್ಲಿವೆ.
ಕೌಶಲ ಕಾರ್ಯಾಗಾರದ ಮೂಲಕ ಯುವ ಸಿನಿಮಾ ನಿರ್ದೇಶಕರ ಸಬಲೀಕರಣದ ಬಗ್ಗೆ ಪ್ರಸೂನ್ ಜೋಷಿ, ಸಿದ್ಧಾರ್ಥ ರಾಯ್ ಕಪೂರ್ ಮಾತನಾಡಿದರೆ, ವಾಣಿ ತ್ರಿಪಾಠಿ ಟಿಕೂ ಬಾಹುಬಲಿ ಚಿತ್ರದ ನಿರ್ಮಾಪಕಿ ಶೋಬು ಯರ್ಲಗಡ್ಡ ಅವರೊಂದಿಗೆ ಸಂವಾದ ನಡೆಸುವರು. ಸೌಂದರ್ಯ ರಜನೀಕಾಂತ್ ಮತ್ತು ನಂದಿತಾ ರಾಯ್ ಭಾರತೀಯ ಸಿನಿಮಾದಲ್ಲಿ ಬದಲಾಗುತ್ತಿರುವ ಮಹಿಳೆಯ ಪಾತ್ರ ಕುರಿತು ಮಾತನಾಡುವರು.
ಕೌಶಲ ಕಾರ್ಯಾಗಾರದಲ್ಲಿ ಅದಿಲ್ ಹುಸೇನ್. ಮೇಘನಾ ಗುಲ್ಜಾರ್, ಪುನೀತ್ ಕೃಷ್ಣ, ರಾಜೀ ವ್ ಕೃಷ್ಣ ಮೆನನ್, ಸುಭಾಷ್ ಘಾಯ್ ಮತ್ತಿತರರು ಪಾಲ್ಗೊಳ್ಳುವರು.
ಪ್ರಗತಿಯಲ್ಲಿರುವ ಚಿತ್ರಗಳ ವಿಭಾಗದಲ್ಲಿ ನಿರ್ಮಾಣದ ಹಂತದಲ್ಲಿರುವ ಚಿತ್ರಗಳನ್ನು ನಿರ್ದೇಶಕರು ಆಸಕ್ತ ನಿರ್ಮಾಪಕರಿಗೆ ಪ್ರದರ್ಶಿಸಲೂ ಅವಕಾಶವಿದೆ. ಈ ಬಾರಿಯ ಚಿತ್ರ ನಿರ್ಮಾಪಕರ ಕಾರ್ಯಾಗಾರಕ್ಕೆ ಅಮೆರಿಕ, ಶ್ರೀಲಂಕಾ, ಬಾಂಗ್ಲಾದೇಶ್, ತೈವಾನ್ ಮತ್ತು ಭಾರತದ ೨೦ ಯೋಜನೆಗಳು ಆಯ್ಕೆಯಾಗಿವೆ. ಇದರೊಂದಿಗೆ ಸಹ ನಿರ್ಮಾಣ ಯೋಜನೆಯಡಿಯೂ ಭಾರತ, ಭೂತಾನ್. ಬಾಂಗ್ಲಾದೇಶ, ಫ್ರಾನ್ಸ್, ನೇಪಾಳ್ ಸಿಂಗಾಪುರ ಸೇರಿದಂತೆ ೧೪ ಯೋಜನೆಗಳು ಆಯ್ಕೆಯಾಗಿದ್ದು, ಹಿಂದಿ, ಇಂಗ್ಲಿಷ್, ಮಲಯಾಲಂ, ಬಂಗಾಳಿ, ಅಸ್ಸಾಮಿ, ನೇಪಾಳಿ, ಗುಜರಾತಿ, ಭೂತಾನೀಸ್ ಭಾಷೆಯ ಪ್ರತಿಭಾವಂತ ನಿರ್ದೇಶಕರು ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಈ ವರ್ಷದ ಉತ್ಸವಕ್ಕೆ ಚಾಲನೆ ನೀಡಿದರು. ಅವರೊಂದಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಪರಿಸರ ರಾಜ್ಯ ಸಚಿವ ಬಬುಲ್ ಸುಪ್ರಿಯೊ, ಎನ್‌ಎಫ್ಡಿಸಿ ಯ ಎಂಡಿ ಟಿಸಿಎ ಕಲ್ಯಾಣಿ ಮತ್ತಿತರರು ಭಾಗವಹಿಸಿದ್ದರು.
ಕರ್ನಾಟಕ, ಲಕ್ಷದ್ವೀಪ್, ಮಧ್ಯಪ್ರದೇಶ, ಒರಿಸ್ಸಾ, ಉತ್ತರಾಖಂಡ್, ಉತ್ತರ ಪ್ರದೇಶ, ದಿಲ್ಲಿ, ರಾಜಸ್ಥಾನ ಮತ್ತಿತರ 12 ರಾಜ್ಯಗಳ ಇಲಾಖೆಗಳು ಈ ಸಂತೆಯಲ್ಲಿ ಭಾಗವಹಿಸಿವೆ. ಫಿಲ್ಮ್ ಬಜಾರ್ ಎನ್‌ಎಫ್‌ಡಿಸಿ ಸಂಘಟಿಸುತ್ತಿರುವ ವೇದಿಕೆ. ಚಿತ್ರ ನಿರ್ದೇಶಕರು, ನಿರ್ಮಾಪಕರು, ಚಿತ್ರ ಏಜೆಂಟರು, ವಿತರಕರು, ಚಿತ್ರೋತ್ಸವ ಸಂಘಟಕರ ವಿಚಾರ ವಿನಿಮಯಕ್ಕೆ ಕಲ್ಪಿಸಿರುವಂಥದ್ದು. ದಕ್ಷಿಣ ಏಷ್ಯಾ ಹಾಗೂ ವಿವಿಧ ದೇಶಗಳ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಇದರಲ್ಲಿ ಪಾಲ್ಗೊಳ್ಳುವರು. ಕಳೆದ ವರ್ಷ 850 ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.