ಆಲಿಯಾ ಭಟ್ ಖಾಸಗಿತನಕ್ಕೆ ಧಕ್ಕೆ: ಪಾಪರಾಜಿಗಳ ವಿರುದ್ಧ ನಟಿ ಗರಂ
Team Udayavani, Feb 22, 2023, 10:39 AM IST
ಮುಂಬಯಿ: ಅನುಮತಿಯಿಲ್ಲದೆ ಫೋಟೋಗಳನ್ನು ತೆಗೆದು ಗೌಪ್ಯತೆ ಹಾಗೂ ಖಾಸಗಿತನಕ್ಕೆ ಧಕ್ಕೆ ತಂದದಕ್ಕಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಪಾಪರಾಜಿ ( ಸಿನಿಮಾ ಫೋಟೋಗ್ರಾಫರ್ಸ್) ಗಳ ವಿರುದ್ಧ ಗರಂ ಆಗಿದ್ದಾರೆ.
ಸೆಲೆಬ್ರಿಟಿಗಳ ಪೋಟೋ, ಗಾಸಿಪ್ ಗಳನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುವ ಪಾಪರಾಜಿಗಳು ಬಾಲಿವುಡ್ ನಲ್ಲಿ ಹೆಚ್ಚು. ಎಕ್ಸ್ ಕ್ಲೂಸಿವ್ ಎಂದು ಅನೇಕ ಬಾರಿ ಪಾಪರಾಜಿಗಳು ಸೆಲೆಬ್ರಿಟಿಗಳ ಫೋಟೋಗಳನ್ನು ಅವರಿಗೆ ಗೊತ್ತಿಲ್ಲದಂತೆ ತೆಗೆದು ತಮ್ಮ ಮೀಡಿಯಾ ಹೌಸ್ ಗಳಿಗೆ ಕೊಡುವುದುಂಟು. ಇತ್ತೀಚೆಗೆ ನಟಿ ಆಲಿಯಾ ಭಟ್ ವಿಚಾರದಲ್ಲೂ ಹೀಗೆಯೇ ಆಗಿದೆ.
ನಟಿ ಆಲಿಯಾ ಭಟ್ ತಮ್ಮ ಮನೆಯ ಲಿವಿಂಗ್ ರೂಮ್ ನಲ್ಲಿ ಕೂತಿದ್ದ ವೇಳೆ ಯಾರೋ ಇಬ್ಬರು ಪಾಪರಾಜಿಗಳು ದೂರದಿಂದ ಝೂಮ್ ಮಾಡಿ ಅವರ ಫೋಟೋಗಳನ್ನು ತೆಗೆದಿದ್ದಾರೆ. ಆ ಬಳಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಆಪ್ಲೋಡ್ ಮಾಡಿದ್ದಾರೆ.
ಇದನ್ನೂ ಓದಿ: ರೂಪಾ-ರೋಹಿಣಿಗೆ ಪ್ರಧಾನಿ ಕಚೇರಿ ತರಾಟೆ: ನಿಜನಾ?; ಮೇಲ್ಮನೆಯಲ್ಲಿ ಪ್ರತಿಧ್ವನಿ
ಈ ಬಗ್ಗೆ ನಟಿ ಆಲಿಯಾ ಭಟ್ ಗರಂ ಆಗಿದ್ದು, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಮಧ್ಯಾಹ್ನ ನನ್ನ ಮನೆಯ ಲಿವಿಂಗ್ ರೂಮ್ ನಲ್ಲಿ ಕೂತಿದ್ದೇನೆ. ಯಾರೋ ನನ್ನನು ನೋಡಿದಂತೆ ಆಯಿತು. ತಲೆ ಎತ್ತಿ ನೋಡಿದಾಗ ನನ್ನ ಪಕ್ಕದ ಬಿಲ್ಡಿಂಗ್ ನಲ್ಲಿ ಇಬ್ಬರು ಕ್ಯಾಮೆರಾ ಹಿಡಿದು ನನ್ನ ಪೋಟೋಗಳನ್ನು ತೆಗೆದುಕೊಳ್ಳುತ್ತಿರುವುದನ್ನು ನೋಡಿದೆ. ಇದು ಒಬ್ಬರ ಗೌಪ್ಯತೆಗೆ ಧಕ್ಕೆಯಾಗುವು ವಿಚಾರ. ಇದು ಎಲ್ಲಿ ಸರಿ ಮತ್ತು ಇದಕ್ಕೆ ಎಲ್ಲಿ ಅನುಮತಿಯಿದೆ. ನಾವು ದಾಟ ಬಾರದ ಒಂದು ಗಡಿ ಇರುತ್ತದೆ. ಆದರೆ ಇಂದು ಆ ಗಡಿಯನ್ನು ನೀವು ದಾಟಿದ್ದೀರಿ ಎಂದು ಎಂದು ಆಲಿಯಾ ಪ್ರಶ್ನಿಸಿ, ಮುಂಬಯಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಈ ಹಿಂದೆ ಆಲಿಯಾ ಗರ್ಭಿಣಿಯಾಗಿದ್ದ ವೇಳೆಯೂ ಮೀಡಿಯಾ ಹೌಸ್ ವೊಂದು ನಟಿ ಬಗ್ಗೆ ಸುಳ್ಳು ವರದಿ ಮಾಡಿತ್ತು. ನಟಿ ಅನುಷ್ಕಾ ಶರ್ಮಾ ಗರ್ಭಿಣಿ ಆಗಿದ್ದಾಗ ವಿರಾಟ್ ಕೊಹ್ಲಿ- ಅನುಷ್ಕಾ ಅವರು ಬಾಲ್ಕನಿಯಲ್ಲಿ ಕೂತಿದ್ದ ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದಿದ್ದರು. ಆ ವೇಳೆ ಅನುಷ್ಕಾ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.