![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 19, 2023, 11:54 AM IST
ಮುಂಬಯಿ: ಬಾಲಿವುಡ್ ನಲ್ಲಿ ಇತ್ತೀಚೆಗೆ ಬಂದ ಕೆಲ ಸಿನಿಮಾಗಳು ಕೋಟಿ ಕ್ಲಬ್ ಸೇರಿದೆ. ಸದ್ಯ ಬಾಕ್ಸ್ ಆಫೀಸ್ ನಲಿ ಹೊಸ ದಾಖಲೆ ಬರೆಯುವುದಕ್ಕೆ ಸನ್ನಿ ಡಿಯೋಲ್ ಅವರ ʼಗದರ್-2ʼ ಮುಂದಾಗಿದೆ. ನಿರೀಕ್ಷೆಯಂತೆ ʼಗದರ್-2ʼ ಸಿನಿಮಾಕ್ಕೆ ಅಭೂತಪೂರ್ವ ರೆಸ್ಪಾನ್ಸ್ ವ್ಯಕ್ತವಾಗಿದೆ. ಸಿನಿಮಾ ರಿಲೀಸ್ ಆಗಿ 8 ದಿನ ಕಳೆದಿದೆ. ಈ 8 ದಿನಗಳಲ್ಲಿ ಸಿನಿಮಾ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ.
ಅನಿಲ್ ಶರ್ಮಾ ನಿರ್ದೇಶನದ ʼಗದರ್-2ʼ 2001 ರಲ್ಲಿ ಬಂದ ʼಗದರ್ʼ ಸಿನಿಮಾದ ಸೀಕ್ವೆಲ್. ಸಿನಿಮಾದ ಮೊದಲ ಭಾಗಕ್ಕೆ ಅಂದು ದೊಡ್ಡಮಟ್ಟದಲ್ಲಿ ಯಶಸ್ಸು ಸಿಕ್ಕಿತ್ತು. ಅದೇ ರೀತಿಯ ಆರಂಭವನ್ನು ʼಗದರ್-2ʼ ಕೂಡ ಪಡೆದುಕೊಂಡಿದೆ.
ಅಕ್ಷಯ್ ಕುಮಾರ್ ಅವರ ʼಓಮೈಗಾಡ್-2ʼ ಸಿನಿಮಾದೊಂದಿಗೆ ಪೈಪೋಟಿಯಾಗಿ ತೆರೆಕಂಡ ʼಗದರ್-2ʼ 8 ದಿನದಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಮೂಲಕ ಹಲವು ದಾಖಲೆಗಳನ್ನು ಮುರಿದಿದೆ.
ಕೆಜಿಎಫ್ -2, ಪಠಾಣ್, ದಂಗಲ್.. ದಾಖಲೆಗಳನ್ನು ಮುರಿದ ʼಗದರ್-2ʼ :
ʼಗದರ್-2 ʼ ಯಶಸ್ವಿಯಾಗಿ 2ನೇ ಶುಕ್ರವಾರಕ್ಕೆ ಕಾಲಿಟ್ಟಿದೆ. ಎರಡನೇ ಶುಕ್ರವಾರ ಅಂದರೆ 8ನೇ ದಿನಕ್ಕೆ ಸಿನಿಮಾ ಒಂದು ಅಂದಾಜಿನ ಪ್ರಕಾರ 19.05 ಕೋಟಿ ರೂಪಾಯಿಯ ಕಲೆಕ್ಷನ್ ಮಾಡಿದೆ. ಈ ಮೂಲಕ ಕೆಜಿಎಫ್ -2, ಪಠಾಣ್, ದಂಗಲ್, ಕಾಶ್ಮೀರ ಫೈಲ್ಸ್, ಬಜರಂಗಿ ಭಾಯಿಜಾನ್, ಸಂಜು ಹಾಗೂ ಪಿಕೆಯಂತಹ ಸಿನಿಮಾದ 2ನೇ ಶುಕ್ರವಾರದ ಕಲೆಕ್ಷನ್ ದಾಖಲೆಯನ್ನು ಮುರಿದಿದೆ.
2ನೇ ಶುಕ್ರವಾರ ʼಕಾಶ್ಮೀರ ಫೈಲ್ಸ್ʼ 19.00 ಕೋಟಿ ರೂಪಾಯಿಯನ್ನು ಸಂಗ್ರಹಿಸಿತ್ತು. ದಂಗಲ್, ಪಿಕೆ, ಬಜರಂಗಿ ಭಾಯಿಜಾನ್, ಸಂಜು, ಪಠಾಣ್ ಮತ್ತು ಕೆಜಿಎಫ್ 2 ಕ್ರಮವಾಗಿ 18.00 ಕೋಟಿ, 15.00 ಕೋಟಿ, 12.75 ಕೋಟಿ, 12.50 ಕೋಟಿ, 13.00 ಕೋಟಿ, ಮತ್ತು 11.25 ಕೋಟಿ ರೂಪಾಯಿಯ ಕಲೆಕ್ಷನ್ ನ್ನು 2ನೇ ಶುಕ್ರವಾರ ಮಾಡಿತ್ತು.
ಶುಕ್ರವಾರ (ಆ.18 ರಂದು) ʼಗದರ್-2 ʼ 19.05 ಕೋಟಿ ರೂ.ಗಳಿಸಿದೆ ಎನ್ನಲಾಗಿದೆ. ʼಬಾಹುಬಲಿ -2ʼ ಎರಡನೇ ಶುಕ್ರವಾರ 19.50 ಕೋಟಿ ರೂಪಾಯಿಯನ್ನು 2ನೇ ಶುಕ್ರವಾರ ಗಳಿಸ ಮೊದಲ ಸ್ಥಾನದಲ್ಲಿದೆ.
ಸಾರ್ವಕಾಲಿಕ 2 ನೇ ಶುಕ್ರವಾರದ ಗಳಿಕೆ:
ಬಾಹುಬಲಿ 2: 19.50 ಕೋಟಿ ರೂ
ಗದರ್ 2: 19.05 ಕೋಟಿ ರೂ.
ಕಾಶ್ಮೀರ ಫೈಲ್ಸ್: 19 ಕೋಟಿ ರೂ.
ದಂಗಲ್: 18 ಕೋಟಿ ರೂ.
ಪಿಕೆ: 15 ಕೋಟಿ ರೂ.
ಪಠಾಣ್: 13 ಕೋಟಿ ರೂ.
ಬಜರಂಗಿ ಭಾಯಿಜಾನ್: 12.75 ಕೋಟಿ ರೂ.
ಸಂಜು: 12.50 ಕೋಟಿ ರೂ.
ಕೆಜಿಎಫ್ 2: 11.25 ಕೋಟಿ ರೂ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.