Grammys: 66ನೇ ಗ್ರ್ಯಾಮಿಯಲ್ಲಿ ಮಿಂಚಿದ ಭಾರತೀಯರು; 3 ಗ್ರ್ಯಾಮಿ ಗೆದ್ದ ಉಸ್ತಾದ್ ಝಾಕಿರ್
Team Udayavani, Feb 5, 2024, 10:09 AM IST
ಲಾಸ್ ಏಂಜಲೀಸ್: 66ನೇ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ಸ್ ಕಾರ್ಯಕ್ರಮ ಭಾನುವಾರ(ಫೆ.4 ರಂದು) ಲಾಸ್ ಏಂಜಲೀಸ್‌ನ ಕ್ರಿಪ್ಟೋ.ಕಾಂನ ಅರೆನಾ ಸಮಾಂಗಣದಲ್ಲಿ ನಡೆದಿದೆ.
ಈ ಸಮಾರಂಭದಲ್ಲಿ ಮ್ಯೂಸಿಕ್ ಲೋಕದಲ್ಲಿ ಸಾಧನೆಗೈದ ಹತ್ತಾರು ಕಲಾವಿದರ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ನೀಡಲಾಗಿದೆ.
ಇನ್ನು ಅಮೆರಿಕಾದ ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಅವರು ತನ್ನ13ನೇ ಗ್ರ್ಯಾಮಿ ಪ್ರಶಸ್ತಿಯನ್ನು ಬೆಸ್ಟ್ ಪಾ ವೋಕಲ್ ಆಲ್ಬಂ ವಿಭಾಗದಲ್ಲಿ ‘ಮಿಡ್ ನೈಟ್ಸ್ʼ ಗಾಗಿ ಪಡೆದುಕೊಂಡರು. ಇದೇ ವೇಳೆ ಅವರು ತನ್ನ ಮುಂದಿನ ಆಲ್ಬಂ ಬರುವುದಾಗಿ ವೇದಿಕೆಯಲ್ಲಿ ಘೋಷಿಸಿದರು.
ಮುಖ್ಯವಾಗಿ ಅಮೆರಿಕಾದ ಗಾಯಕಿ ಮೈಲಿ ಸೈರಸ್ ಬೆಸ್ಟ್ ಪಾಪ್ ಸೋಲೋ ಪರ್ಫೆಮೆನ್ಸ್ ಗಾಗಿ ( ʼಫ್ಲವರ್ಸ್ʼ ಆಲ್ಬಂ) ಗ್ರ್ಯಾಮಿಯನ್ನು ಪಡೆದುಕೊಂಡಿದ್ದಾರೆ. ಇದು ಅವರ ಮೊದಲ ಗ್ರ್ಯಾಮಿ ಎನ್ನುವುದು ವಿಶೇಷ.
ಅತ್ಯುತ್ತಮ ಪಾಪ್ ಡ್ಯಾನ್ಸ್ ರೆಕಾರ್ಡಿಂಗ್ (“ಪದಮ್ ಪದಮ್”) ಗಾಗಿ ಕೈಲಿ ಮಿನೋಗ್ ಅವರು ಗ್ರ್ಯಾಮಿಯನ್ನು ಪಡೆದುಕೊಂಡಿದ್ದಾರೆ.
ಮಿಚೆಲ್ ಒಬಾಮಾ ಅವರು ಅತ್ಯುತ್ತಮ ಆಡಿಯೋಬುಕ್ ಗಾಗಿ( “The Light We Carry: Overcoming in Uncertain Times,”) ಗ್ರ್ಯಾಮಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತಕ್ಕೆ ಗ್ರ್ಯಾಮಿ ತಂದ ʼಶಕ್ತಿ” ಬ್ಯಾಂಡ್: ಇನ್ನು ಈ ವರ್ಷ ಕೂಡ ಭಾರತದ ಮ್ಯೂಸಿಕ್ ಸಾಧನೆಗೆ ಗ್ರ್ಯಾಮಿ ಪ್ರಶಸ್ತಿಯ ಗೌರವ ಸಂದಿದೆ. ಶಂಕರ್ ಮಹಾದೇವನ್ ಮತ್ತು ಝಾಕಿರ್ ಹುಸೇನ್ ಅವರ ʼಬ್ಯಾಂಡ್ ಶಕ್ತಿ ʼ ಗ್ರ್ಯಾಮಿ ಗೆದ್ದಿದೆ. ಈ ಬ್ಯಾಂಡ್ ನ ‘ದಿಸ್ ಮೂಮೆಂಟ್’ಹೆಸರಿನ ಆಲ್ಬಂಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಅವಾರ್ಡ್ ಸಿಕ್ಕಿದೆ.
‘ದಿಸ್ ಮೂಮೆಂಟ್ʼ 2023 ರ ಜೂನ್.30 ರಂದು ರಿಲೀಸ್ ಆಗಿದೆ. ಇದರಲ್ಲಿ ಒಟ್ಟು 8 ಹಾಡುಗಳಿದ್ದು, ಬ್ರಿಟಿಷ್ ಮೂಲದ ಜಾನ್ ಮೆಕ್ಲಾಲಿನ್ (ಗಿಟಾರ್ ಸಿಂಥ್), ಝಾಕಿರ್ ಹುಸೇನ್ (ತಬಲಾ), ಶಂಕರ್ ಮಹದೇವನ್ (ವೋಕಲಿಸ್ಟ್), ವಿ ಸೆಲ್ವಗಣೇಶ್ (ತಾಳವಾದಕ ಹಾಗೂ ಗಣೇಶ್ ರಾಜಗೋಪಾಲನ್ (ಪಿಟೀಲು ವಾದಕ) ಅವರು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸುಸಾನಾ ಬಾಕಾ, ಬೊಕಾಂಟೆ, ಬರ್ನಾ ಬಾಯ್ ಮತ್ತು ಡೇವಿಡೊ ಆಲ್ಬಂನೊಂದಿಗೆ ನಾಮಿನೇಟ್ ಆಗಿದ್ದ ʼದಿಸ್ ಮೂಮೆಂಟ್ʼ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಅವಾರ್ಡ್ ಸಿಕ್ಕಿದೆ.
ಇನ್ನು ʼಪಾಷ್ಟೋ’ ನಲ್ಲಿನ ಕೊಡುಗೆಗಾಗಿ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಪರ್ಫೆಮೆನ್ಸ್ ವಿಭಾಗದಲ್ಲಿ ಬೇಲಾ ಫ್ಲೆಕ್ ಮತ್ತು ಎಡ್ಗರ್ ಮೆಯೆರ್, ರಾಕೇಶ್ ಚೌರಾಸಿಯಾ ಅವರೊಂದಿಗೆ ಗ್ರ್ಯಾಮಿ ಗೆದ್ದಿದ್ದಾರೆ. ಇದಲ್ಲದೆ ಅವರು Best Contemporary Instrumental Album(As We Speak ಆಲ್ಬಂ) ವಿಭಾಗದಲ್ಲಿ ಗ್ರ್ಯಾಮಿಯನ್ನು ಪಡೆದುಕೊಂಡಿದ್ದಾರೆ. ಇದೇ ವಿಭಾಗದಲ್ಲಿ ರಾಕೇಶ್ ಚೌರಾಸಿಯಾ ಅವರು ಕೂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಝಾಕಿರ್ ಹುಸೇನ್ ಅವರು ಮೂರು ಗ್ರ್ಯಾಮಿಯನ್ನು ಗೆದ್ದಿದ್ದು, ರಾಕೇಶ್ ಚೌರಾಸಿಯಾ ಅವರು ಎರಡು ಗ್ರ್ಯಾಮಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತಕ್ಕೆ ಗ್ರ್ಯಾಮಿ ತಂದುಕೊಟ್ಟ ಝಾಕಿರ್ ಹುಸೇನ್ ಹಾಗೂ ಶಂಕರ್ ಮಹದೇವನ್ ಹಾಗೂ ಇತರರಿಗೆ ರಿಕ್ಕಿ ಕೇಜ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.