![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 22, 2023, 12:51 PM IST
ಚಂಡಿಗಢ: ತನ್ನ ಹಾಡುಗಳಿಂದ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ ಗಾಯಕ ರಾಜು ಪಂಜಾಬಿ (40) ಮಂಗಳವಾರ (ಆ.22 ರಂದು) ಕೊನೆಯುಸಿರೆಳೆದಿದ್ದಾರೆ.
ರಾಜು ಪಂಜಾಬಿ ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಜಾಂಡೀಸ್ ಕಾಯಲೆಗೆ ಹರಿಯಾಣದ ಹಿಸಾರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನಕಳೆದಂತೆ ಅವರ ಆರೋಗ್ಯ ಹದಗೆಟ್ಟಿತ್ತು. ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸುವ ಹಂತಕ್ಕೆ ಅವರ ಆರೋಗ್ಯ ಹದಗೆಟ್ಟಿತ್ತು. ಮಂಗಳವಾರ ಅವರು ಕೊನೆಯುಸಿರೆಳೆದಿದ್ದಾರೆ.
ಹರ್ಯಾಣದಲ್ಲಿ ರಾಜು ಪಂಜಾಬಿ ಗಾಯಕರಾಗಿ ಅಪಾರ ಜನಪ್ರಿಯರಾಗಿದ್ದರು. ತನ್ಜ ಹಾಡುಗಳಿಂದ ಖ್ಯಾತರಾಗಿದ್ದ ಅವರು ಸಣ್ಣ ವಯಸ್ಸಿನಲ್ಲೇ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದರು.
ʼʼಆಚಾ ಲಗೇ ಸೆʼʼ, ʼʼದೇಸಿ ದೇಸಿʼʼ, ʼʼತು ಚೀಜ್ ಲಜವಾಬ್ʼʼ, ʼʼಲಾಸ್ಟ್ ಪೆಗ್ʼʼ ಮತ್ತು ʼʼಭಾಂಗ್ ಮೇರೆ ಯಾರಾ ನೇʼʼ ಮುಂತಾದ ಹಾಡುಗಳಿಂದ ಜನಮನದಲ್ಲಿ ಖ್ಯಾತರಾಗಿದ್ದರು.
ಇದನ್ನೂ ಓದಿ: Chiranjeevi: ಮೆಗಾಸ್ಟಾರ್ ವೃತ್ತಿ ಜೀವನದಲ್ಲೇ ದುಬಾರಿ ಸಿನಿಮಾ ʼMega 157′ ಪೋಸ್ಟರ್ ಔಟ್
ರಾಜು ಪಂಜಾಬಿ ಅವರು ಇತ್ತೀಚೆಗೆ (ಆ.12 ರಂದು) ‘ಆಪ್ಸೆ ಮಿಲ್ಕೆ ಯಾರಾ ಹಮ್ಕೊ ಅಚ್ಚಾ ಲಗಾ ಥಾ’ ಹಾಡನ್ನು ರಿಲೀಸ್ ಮಾಡಿದ್ದರು.
ಗಾಯಕನ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಟ್ವಿಟರ್ ನಲ್ಲಿ ಖ್ಯಾತ ಹರ್ಯಾನ್ವಿ ಗಾಯಕ ಮತ್ತು ಸಂಗೀತ ನಿರ್ಮಾಪಕ ರಾಜು ಪಂಜಾಬಿ ಜಿ ಅವರ ನಿಧನವು ಹರಿಯಾಣ ಸಂಗೀತ ಉದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಶಾಂತಿ!” ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಸ್ಥಳೀಯ ರಾವತ್ಸರ್ ಖೇಡಾಕ್ಕೆ ಕೊಂಡೊಯ್ಯಲಾಗುತ್ತದೆ, ಅಲ್ಲಿ ಅವರ ಅಂತ್ಯಕ್ರಿಯೆಯನ್ನು ಮಾಡಲಾಗುತ್ತದೆ. ಅವರು ಪ್ರಸ್ತುತ ಹಿಸಾರ್‌ನ ಆಜಾದ್‌ನಗರದಲ್ಲಿ ವಾಸಿಸುತ್ತಿದ್ದರು ಎಂದು ವರದಿ ತಿಳಿಸಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.