Hema Malini: ಅನಿವಾರ್ಯವಾಗಿದ್ದರೆ ತೆರೆಮೇಲೆ ಕಿಸ್ಸಿಂಗ್ ಸೀನ್ ಮಾಡಬಲ್ಲೇ.. ಹೇಮಾ ಮಾಲಿನಿ
74ರ ಹರೆಯದಲ್ಲಿ ಹೇಮಾ ಮಾಲಿನಿ ಬೋಲ್ಡ್ ರಿಪ್ಲೈ
Team Udayavani, Aug 26, 2023, 5:37 PM IST
ಮುಂಬಯಿ: ಕರಣ್ ಜೋಹರ್ ನಿರ್ದೇಶನದ “ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ” ಈ ವರ್ಷದ ಬಿಟೌನ್ ಹಿಟ್ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ. ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಗಳಲ್ಲೊಂದು.
ಆಲಿಯಾ ಭಟ್ – ರಣವೀರ್ ಸಿಂಗ್ ಜೋಡಿಯಾಗಿ ನಟಿಸಿದ ಸಿನಿಮಾದಲ್ಲಿ ಮಾರ್ಡನ್ ಲವ್ ಸ್ಟೋರಿಯನ್ನು ಕೌಟುಂಬಿಕ ಹಿನ್ನೆಲೆಯಲ್ಲಿಯೂ ತೋರಿಸಲಾಗಿದೆ. ಅನೇಕ ವಿಚಾರಗಳನ್ನು ಸಿನಿಮಾದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.
ಸಿನಿಮಾ ಎಷ್ಟು ಸದ್ದು ಮಾಡಿತ್ತೋ ಅಷ್ಟೇ ಸದ್ದನ್ನು ಸಿನಿಮಾದಲ್ಲಿನ ಧರ್ಮೇಂದ್ರ ಹಾಗೂ ನಟಿ ಶಬಾನಾ ಅಜ್ಮಿ ಅವರ ದೃಶ್ಯ ಕೂಡ ಮಾಡಿತ್ತು.
ನಟ ಧರ್ಮೇಂದ್ರ ಅವರು ನಟಿ ಶಬಾನಾ ಅಜ್ಮಿ ಅವರಿಗೆ ಕಿಸ್ ಕೊಡುವ ದೃಶ್ಯವೊಂದು ಸಿನಿಮಾದಲ್ಲಿದೆ. ಈ ದೃಶ್ಯ ಸಿನಿಮಾದೊಂದಿಗೆ ಚರ್ಚೆಯಾಗಿತ್ತು. 2007 ರಲ್ಲಿ ತೆರೆಗೆ ಬಂದಿದ್ದ ಅನುರಾಗ್ ಬಸು ನಿರ್ದೇಶನದ ʼಲೈಫ್ ಇನ್ ಎ ಮೆಟ್ರೋʼ ಸಿನಿಮಾದಲ್ಲಿ ನಟ ಧರ್ಮೇಂದ್ರ ಅವರು ಸಹ ನಟಿ ನಫೀಸಾ ಅಲಿ ಅವರೊಂದಿಗೆ ಕಿಸ್ಸಿಂಗ್ ದೃಶ್ಯವನ್ನು ಮಾಡಿದ್ದರು. ಆ ಬಳಿಕ ಇದೀಗ 18 ವರ್ಷಗಳ ಬಳಿಕ ಅವರು ಕಿಸ್ಸಿಂಗ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿನ ಕಿಸ್ಸಿಂಗ್ ಸೀನ್ ಬಗ್ಗೆ ಈಗಾಗಲೇ ಹಲವು ಚರ್ಚೆಗಳಾಗಿವೆ. ಇದೀಗ ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ ಈ ದೃಶ್ಯಕ್ಕೆ ಸಂಬಂಧಿಸಿ ಕೊಟ್ಟಿರುವ ಪ್ರತಿಕ್ರಿಯೆ ವೈರಲ್ ಆಗಿದೆ.
ಹೇಮಾ ಮಾಲಿನಿ ಅವರು ಇನ್ನು ಕೂಡ “ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ” ಸಿನಿಮಾವನ್ನು ನೋಡಿಲ್ಲ. ʼಇಂಡಿಯಾ.ಕಾಂʼ ಜೊತೆಗಿನ ಸಂದರ್ಶನವೊಂದರಲ್ಲಿ ಅವರಿಗೆ ಈ ದೃಶ್ಯದ ಕುರಿತು ಪ್ರಶ್ನೆ ಕೇಳಲಾಗಿದೆ.
ನಿಮ್ಮ ಪತಿ ಧರ್ಮೇಂದ್ರ ರೀತಿಯ ʼಕಿಸ್ಸಿಂಗ್ ಸೀನ್ʼ ಮಾಡುವ ಅನಿವಾರ್ಯ ಸಿನಿಮಾದಲ್ಲಿ ಬಂದರೆ ಅದನ್ನು ನೀವು ಒಪ್ಪಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು “ಖಂಡಿತ ಮಾಡುತ್ತೇನೆ, ಯಾಕೆ ಮಾಡಲ್ಲ, ಒಂದು ವೇಳೆ ಅದು ಚಿತ್ರಕ್ಕೆ ಸಂಬಂಧಿಸಿದಾದರೆ, ಅನಿವಾರ್ಯವಾಗಿದ್ದರೆ ಬಹುಶಃ ನಾನು ಆ ದೃಶ್ಯವನ್ನು ಮಾಡಬಲ್ಲೇ” ಎಂದು 74ರ ಹರೆಯದ ಹೇಮಾ ಮಾಲಿನಿ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ.
“ರಾಕಿ ಔರ್ ರಾಣಿ ಕೀ ಪ್ರೇಮ್” ನಲ್ಲಿ ಕಿಸ್ಸಿಂಗ್ ಸೀನ್ ಧರ್ಮೇಂದ್ರ ಹೇಳಿದ್ದೇನು?:
“ಸಿನಿಮಾದಲ್ಲಿ ನನ್ನ ಹಾಗೂ ಶಬಾನಾ ಅವರ ನಡುವಿನ ಕಿಸ್ಸಿಂಗ್ ಸೀನ್ ದೃಶ್ಯದಿಂದ ಎಲ್ಲರಿಗೂ ಅಚ್ಚರಿಯಾಗಿದೆ ಎನ್ನುವುದನ್ನು ನಾನು ಕೇಳಲ್ಪಟ್ಟೆ. ಅದೇ ಸಮಯದಲ್ಲಿ ಪ್ರೇಕ್ಷಕರು ಇದಕ್ಕೆ ಚಪ್ಪಾಳೆಯನ್ನೂ ತಟ್ಟಿದ್ದಾರೆ. ಜನ ನಿರೀಕ್ಷೆ ಇದನ್ನು ಮಾಡಿರಲಿಲ್ಲ, ಇದ್ದಕ್ಕಿದ್ದಂತೆ ಈ ದೃಶ್ಯ ಬರುವುದರಿಂದ ಇದು ಪ್ರಭಾವ ಬೀರಿದೆ ಎಂದು ನನಗೆ ಅನ್ನಿಸುತ್ತದೆ. ನಾನು ಕೊನೆಯ ಬಾರಿಗೆ ನಫೀಸಾ ಅಲಿ ಅವರೊಂದಿಗೆ ʼಲೈಫ್ ಇನ್ ಎ ಮೆಟ್ರೋʼ ಚಿತ್ರದಲ್ಲಿ ಚುಂಬನದ ದೃಶ್ಯವನ್ನು ಮಾಡಿದ್ದೆ, ಆ ಸಮಯದಲ್ಲೂ ಜನರು ಅದನ್ನು ಮೆಚ್ಚಿದ್ದರು” ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.