72 ಗಂಟೆಯೊಳಗೆ ಮದುವೆ ಆಗಬೇಕು.. ಮದುವೆಗೂ ಮುನ್ನ ಗರ್ಭಿಣಿ ಆಗಿದ್ದ ನಟಿಗೆ ಮನೆಯವರ ಷರತ್ತು.!
Team Udayavani, May 18, 2023, 11:37 AM IST
ಮುಂಬಯಿ: ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಬಿಟೌನ್ ನ ಫೇಮ್ ಜೋಡಿಗಳಲ್ಲಿ ಒಂದು. ಪ್ರೀತಿಸಿ ಮದುವೆಯಾದ ಜೋಡಿಗೆ ದಂಪತಿಗೆ ಮೆಹರ್, ಗುರಿಕ್ ಸಿಂಗ್ ಎನ್ನುವ ಮಕ್ಕಳಿದ್ದಾರೆ. ಎಲ್ಲ ಸೆಲೆಬ್ರಿಟಿಗಳ ಹಾಗೆ ಇಬ್ಬರ ಮದುವೆ ಅದ್ದೂರಿಯಾಗಿ ನಡೆದಿಲ್ಲ. ಈ ಬಗ್ಗೆ ಸ್ವತಃ ನಟಿ ನೇಹಾ ಧೂಪಿಯಾ ಅವರೇ ಮಾತನಾಡಿದ್ದಾರೆ.
ನೇಹಾ – ಅಂಗದ್ ಬೇಡಿ ಸಂಬಂಧವನ್ನು ಅವರ ಮನೆಯವರು ಒಪ್ಪಿಕೊಂಡಿದ್ದರು. ಆದರೆ ನೇಹಾ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು. ಈ ವಿಚಾರದೊಂದಿಗೆ ಪ್ರೀತಿಯ ವಿಚಾರವನ್ನು ಮನೆಯವರ ಮುಂದೆ ನೇಹಾ ಹೇಳಿ ಅವರನ್ನು ಒಪ್ಪಿಸುವುದು ಅಷ್ಟು ಸುಲಭ ಮಾತಾಗಿರಲಿಲ್ಲ.
ಇದನ್ನೂ ಓದಿ: “ಪಕ್ಷಕ್ಕಾಗಿ ಒಪ್ಪಿಕೊಂಡೆ…”: DCM ಹುದ್ದೆಯ ಬಗ್ಗೆ ಡಿಕೆ ಶಿವಕುಮಾರ್ ಮಾತು
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ ನನ್ನ ಆಯ್ಕೆ ಯಾರನ್ನೂ ನೋಯಿಸುವ ಹಾಗೆ ಇರಬಾರದೆಂದುಕೊಂಡು ನಮ್ಮ ಪ್ರೀತಿಯ ವಿಚಾರವನ್ನು ಮನೆಯವರ ಬಳಿ ಹೇಳಿದೆ. ನಾನು ಗರ್ಭಿಣಿ ಆಗಿದ್ದೇನೆ ಎಂದು ಹೇಳಿದಾಗ, ಮನೆಯವರು ಇದಕ್ಕೆ ಆಯತೆಂದು ಹೇಳಿದರು. ಆದರೆ ಮುಂದಿನ 72 ಗಂಟೆಯೊಳಗೆ ಮದುವೆಯಾಗಬೇಕೆಂದು ಹೇಳದರು. ಬಾಂಬೆಗೆ ಹಿಂತಿರುಗಿ ಮದುವೆಯಾಗಲು ನನಗೆ ಎರಡೂವರೆ ದಿನಗಳ ಕಾಲಾವಕಾಶ ನೀಡಿದ್ದರು. ಆ ಬಳಿಕ ಕೆಲ ಆತ್ಮೀಯರ ಸಮ್ಮುಖದಲ್ಲಿ ನಾವು ಮದುವೆ ಆದೆವು” ಎಂದು ನಟಿ ಹೇಳಿದ್ದಾರೆ.
2018 ರ ಮೇ ತಿಂಗಳಲ್ಲಿ ಮದುವೆಯಾದ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಇತ್ತೀಚೆಗೆ ತಮ್ಮ 5ನೇ ವರ್ಷದ ಮದುವೆ ದಿನವನ್ನು ಆಚರಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.