![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Dec 2, 2023, 9:56 AM IST
ಹೈದರಾಬಾದ್: ಪ್ರಶಾಂತ್ ನೀಲ್ ಅವರ ʼಸಲಾರ್ʼ ಟ್ರೇಲರ್ ರಿಲೀಸ್ ಆಗಿದೆ. ಬಹು ನಿರೀಕ್ಷಿತ ಸಿನಿಮಾದ ಟ್ರೇಲರ್ ಅಷ್ಟೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ – ಪೃಥ್ವಿರಾಜ್ ಟ್ರೇಲರ್ ನಲ್ಲಿ ಅಬ್ಬರಿಸಿದ್ದಾರೆ.
ಅಂದುಕೊಂಡಂತೆ ಎಲ್ಲಾ ಭಾಷೆಯಲ್ಲಿ ಟ್ರೇಲರ್ 24 ಗಂಟೆಯೊಳಗೆ ಟ್ರೆಂಡ್ ಸೃಷ್ಟಿಸಿದೆ. ʼಸಲಾರ್ʼ ಜಗತ್ತಿನ ಝಲಕ್ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ʼಸಲಾರ್ʼ ಸಿನಿಮಾದ ಬಗ್ಗೆ ಅದರ ನಿರೀಕ್ಷೆಯ ಬಗ್ಗೆ ಪ್ರಶಾಂತ್ ನೀಲ್ ಕಳೆದ ಕೆಲ ದಿನಗಳಿಂದ ನಾನಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ʼಸಲಾರ್ʼ ಸಿನಿಮಾ ಮಾಡುವ ಯೋಜನೆಯ ಬಗ್ಗೆ ನೀಲ್ ಮಾತನಾಡಿದ್ದಾರೆ.
15 ವರ್ಷಗಳ ಹಿಂದೆಯೇ ʼಸಲಾರ್ʼ ಸಿನಿಮಾ ಮಾಡುವ ಯೋಚನೆ ನನ್ನ ತಲೆಗೆ ಬಂದಿತ್ತು. ಆದರೆ ನನ್ನ ಮೊದಲ ಸಿನಿಮಾ ʼಉಗ್ರಂʼ ಬಳಿಕ ʼಕೆಜಿಎಫ್ʼ ಸಿನಿಮಾದಲ್ಲಿ ನಾನು ಬ್ಯುಸಿಯಾದೆ. ಕೆಜಿಎಫ್ ಮಾಡಲು ನಾನು 8 ವರ್ಷ ತೆಗೆದುಕೊಂಡೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Animal: ಮೊದಲ ದಿನದ ಗಳಿಕೆಯಲ್ಲೇ ʼಪಠಾಣ್, ʼಗದರ್ -2ʼ ದಾಖಲೆಯನ್ನು ಮುರಿದ ʼಅನಿಮಲ್ʼ
ʼಸಲಾರ್ʼ ಸಿನಿಮಾ ಶೂಟ್ ಮಾಡಲಿಉ 114 ದಿನ ಬೇಕಾಯಿತು. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬಹುಪಾಲು ಚಿತ್ರೀಕರಣಗೊಂಡಿದೆ. ನಂತರ ಹೈದರಾಬಾದ್‌ನಿಂದ ಐದು ಗಂಟೆಗಳ ದೂರದಲ್ಲಿರುವ ಸಿಂಗನೇರಿ ಮೈನ್ಸ್‌ನಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಲಾಗಿದೆ. ತಂಡವು ಚಿತ್ರದ ಕೆಲವು ದೃಶ್ಯಗಳನ್ನು ದಕ್ಷಿಣ ಬಂದರುಗಳು, ಮಂಗಳೂರು ಬಂದರು ಮತ್ತು ವೈಜಾಗ್ ಬಂದರು ಮತ್ತು ಯುರೋಪ್‌ನಲ್ಲಿ ಸ್ವಲ್ಪ ಭಾಗವನ್ನು ಚಿತ್ರೀಕರಿಸಿದೆ” ಎಂದು ಹೇಳಿದ್ದಾರೆ.
ಈ ಹಿಂದಿನ ಸಂದರ್ಶನದಲ್ಲಿ “ಕೆಜಿಎಫ್ ಹಾಗೂ ಸಲಾರ್ ಬೇರೆಯದೆ ಕಥೆಯನ್ನೊಳಗೊಂಡ ಸಿನಿಮಾ. ʼಸಲಾರ್ʼ ಜಗತ್ತೇ ಬೇರೆ. ಇದೊಂದು ಸ್ನೇಹಿತರಿಬ್ಬರ ಕಥೆ” ಎಂದು ನೀಲ್ ಹೇಳಿದ್ದರು.
ಡಿ.22 ರಂದು ʼಸಲಾರ್ʼ ರಿಲೀಸ್ ಆಗಲಿದೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ನಟಿಸಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.