ಗೋವಾ ಚಿತ್ರೋತ್ಸವ; ಮಾಸ್ಟರ್ ಫ್ರೇಮ್ಸ್ – ಈ ಬಾರಿ ನಿಮ್ಮ ಆಯ್ಕೆಯಲ್ಲಿರಲಿ
ಹನ್ನೊಂದು ಶ್ರೇಷ್ಠ ನಿರ್ದೇಶಕರ ಹನ್ನೊಂದು ಚಿತ್ರಗಳು
Team Udayavani, Nov 20, 2019, 10:41 AM IST
ಪಣಜಿ, ನ. 20: ಸುವರ್ಣ ಸಂಭ್ರಮದಲ್ಲಿರುವ ಗೋವಾ ಚಿತ್ರೋತ್ಸವದಲ್ಲಿ ಈ ಬಾರಿಯ ಮತ್ತೊಂದು ವಿಶೇಷವೆಂದರೆ ಮಾಸ್ಟರ್ ಸ್ಟ್ರೋಕ್ಸ್ ಎಂಬುದು ಮಾಸ್ಟರ್ ಫ್ರೇಮ್ಸ್ ಬದಲಾಗಿರುವುದು.
ಈ ಹಿಂದೆ ಖ್ಯಾತ ಸಿನಿಮಾ ನಿರ್ದೇಶಕರ ಸಿನಿಮಾಗಳನ್ನು ಮಾಸ್ಟರ್ ಸ್ಟ್ರೋಕ್ಸ್ ಎಂಬ ವಿಭಾಗದಡಿ ಪ್ರದರ್ಶಿಸಲಾಗುತ್ತಿತ್ತು. ಅದರಲ್ಲೂ ಕೆಲವು ಹಳೆಯ ಸಿನಿಮಾಗಳು ಸೇರಿರುತ್ತಿದ್ದವು. ಈ ಬಾರಿ ವಿಶಿಷ್ಟವೆಂದರೆ 2019 ರಲ್ಲೇ ನಿರ್ಮಿತವಾದ ಖ್ಯಾತ ನಿರ್ದೇಶಕರ ಹೊಸ ಚಿತ್ರಗಳು ಪ್ರದರ್ಶಿತವಾಗುತ್ತಿವೆ.
ಈ ವಿಭಾಗದಲ್ಲಿ ಒಟ್ಟೂ 17 ಚಿತ್ರಗಳು ಪ್ರದರ್ಶಿತವಾಗುತ್ತಿವೆ. ಇದರಲ್ಲಿ ಖ್ಯಾತ ಜಾಗತಿಕ ಚಿತ್ರ ನಿರ್ದೇಶಕರಾದ ಪೆಡ್ರೊ ಅಲ್ಮೋದವರ್, ಲಾವ್ ಡಿಯಾಜ್, ಕಾಸ್ತಾ ಗವ್ರಾಸ್, ಸೆಮಿ ಕಪ್ಲನೊಗ್ಲುವಿನವರ ಚಿತ್ರಗಳು ಸೇರಿವೆ.
ಅದರಲ್ಲೂ ಸೆಮಿಯ ಟರ್ಕಿಶ್ ಚಿತ್ರ ಕಮಿಟ್‌ಮೆಂಟ್ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಸೆಣಸುತ್ತಿರುವ ಟರ್ಕಿಶ್ ಚಿತ್ರ.
ಇದಲ್ಲದೇ, ರಾಯ್ ಆಂಡರ್ಸನ್ ನ ಆಬೌಟ್ ಎಂಡ್‌ಲೆಸ್‌ನೆಸ್, ಕಾಸ್ರಾ ಗವ್ರಾಸ್‌ನ ಅಡಲ್ಟ್ಸ್ ಇನ್ ದಿ ರೂಮ್, ಫ್ರಾಕೋಯಿಸ್ ಓಜೊವಿನ ದಿ ಗ್ರೇಸ್ ಆಫ್ ಗಾಡ್, ನೀಲ್ಸ್ ಆರ್ಡನ್ ಒಪ್ಲೆ ವಿನ ಡೇನಿಯಲ್, ಅರ್ಥುರೊ ರಿಪ್ಟೆನ್ ನ ದಿ ಲೆಗ್ಸ್, ವರ್ನರ್ ಹೆರ್ಜೊಗ್ ನ ಫ್ಯಾಮಿಲಿ ರೊಮಾನ್ಸ್ ಎಲ್‌ಎಲ್‌ಸಿ, ಕ್ಷೇವಿಯರ್ ಡೊಲನ್ ನ ಮಥಿಯಾಸ್ ಮತ್ತು ಮ್ಯಾಕ್ಸಿಮೆ, ಆಗ್ನಿಜ್ಕಾ ಹಾಲೆಂಡ್‌ನ ಮಿ. ಜೋನ್ಸ್, ಪೆಡ್ರೊ ಆಲ್ಮೊದವರ್ ನ ಪೇನ್ ಆ್ಯಂಡ್ ಗ್ಲೋರಿ, ಫತೀ ಹಕೀನ್ ನ ದಿ ಗೋಲ್ಡನ್ ಗ್ಲೋವ್, ಲಾವ್ ಡೆಯಾಜ್ ನ ದಿ ಹಾಫ್, ಹಿರೊಕಾಜು ಕೊರೆಡಾನ ದಿ ಟ್ರೂತ್, ಜುವಾನ್ ಜೋಸ್ ಕಂಪನೆಲ್ಲಾರ ದಿ ವೆಸೆಲ್ಸ್ ಟೇಲ್ ಹಾಗೂ ಡಾರ್ಡನ್ ಬ್ರದರ್ಸ್ ರ ಯಂಗ್ ಅಹ್ಮದ್ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
ಪೆಡ್ರೊ ಅಲ್ಮೋದವರ್-
ಇವುಗಳಲ್ಲಿ ಬಹುತೇಕ ಚಿತ್ರಗಳು ಭಾರತದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು ಎನ್ನುವುದು ಇಲ್ಲಿಯ ವಿಶೇಷ.
ಈ ವಿಭಾಗವನ್ನು ಯಾಕೆ ನೋಡಬೇಕು?
ಈಗಾಗಲೇ ಸಿನಿಮಾವನ್ನು ಕಟ್ಟಿಕೊಡುವುದರಲ್ಲಿ ಇವರೆಲ್ಲರೂ ಖ್ಯಾತರು. ತಮ್ಮದೇ ತಂತ್ರಗಳಿಂದ ಮತ್ತು ಕಥೆ ಹೇಳುವ/ನಿರೂಪಿಸುವುದಕ್ಕೆ ಖ್ಯಾತಿಯಾದವರು. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ರೂಪುಗೊಳ್ಳುತ್ತಿರುವ ಹೊಸ ವಿದ್ಯಮಾನಗಳಿಗೆ ಒಬ್ಬ ನಿಷ್ಣಾತ ಚಿತ್ರ ನಿರ್ದೇಶಕರು ಈ ಹೊತ್ತಿನಲ್ಲಿ ಹೇಗೆ ಸ್ಪಂದಿಸಿದ್ದಾರೆಂಬುದನ್ನು ತಿಳಿಯಲು ಈ ಸಿನಿಮಾಗಳಿಂದ ಸಾಧ್ಯ. ಇದರೊಂದಿಗೆ ಅವರ ಇಂದಿನ ಸಿನಿಮಾ ಲೆಕ್ಕಾಚಾರಗಳೂ ತಿಳಿಯಲಿಕ್ಕೆ ಸಾಧ್ಯ.
ಸೆಮಿ-ಕಮಿಟ್‌ಮೆಂಟ್ ಸಿನಿಮಾ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.