IMDb 2023 ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕನ್ನಡದ ಏಕೈಕ ಚಿತ್ರ
ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ 'ಪಠಾಣ್' ಸೇರಿ ಶಾರುಖ್ ರ 2 ಚಿತ್ರಗಳು
Team Udayavani, Jan 9, 2023, 5:15 PM IST
ಮುಂಬಯಿ: ಐಎಂಡಿಬಿ 2023 ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕನ್ನಡದ ಏಕೈಕ ಚಿತ್ರ ಸ್ಥಾನ ಪಡೆದಿದೆ.11 ಹಿಂದಿ ಚಲನಚಿತ್ರಗಳು ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದ್ದು, ಐದು ತಮಿಳು , ಮೂರು ತೆಲುಗು ಮತ್ತು ಕನ್ನಡದ ಬಹು ನಿರೀಕ್ಷಿತ ಚಿತ್ರ ”ಕಬ್ಜಾ” ಚಿತ್ರ ಮಾತ್ರ ಸ್ಥಾನ ಪಡೆದಿದೆ.
”ಕಬ್ಜಾ” ಆರ್.ಚಂದ್ರು ನಿರ್ದೇಶನದ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ , ಶ್ರಿಯಾ ಸರನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಲನಚಿತ್ರವು 1980 ರ ದಶಕದ ದರೋಡೆಕೋರನ ಜೀವನದ ಒಂದು ಒಳ ನೋಟ ಹೊಂದಿದೆ ಎಂದು ವರದಿಯಾಗಿದೆ.
ಈಗಾಗಲೇ ವಿವಾದಕ್ಕೆ ಸಿಲುಕಿ ಭಾರಿ ಸುದ್ದಿಯಾಗಿರುವ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ‘ಪಠಾಣ್’ ಕೂಡ 2023 ರ ಬಹು ನಿರೀಕ್ಷಿತ ಚಲನಚಿತ್ರವಾಗಿದೆ. ಇದರೊಂದಿಗೆ ಶಾರುಖ್ ಅವರದ್ದೇ ಜವಾನ್ ಮತ್ತು ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಸೇರಿದಂತೆ ಇತರ ಚಿತ್ರಗಳು ಸಹ IMDb ಹಂಚಿಕೊಂಡ 2023 ರ ಅತ್ಯಂತ ನಿರೀಕ್ಷಿತ ಚಲನಚಿತ್ರಗಳಲ್ಲಿ ಸೇರಿವೆ.
IMDb 2022 ರ ಉದ್ದಕ್ಕೂ ಬಳಕೆದಾರರ ನಿಜವಾದ ಪುಟ ವೀಕ್ಷಣೆಗಳ ಆಧಾರದ ಮೇಲೆ ಹೆಚ್ಚು ನಿರೀಕ್ಷಿತ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ನಿರ್ಧರಿಸುತ್ತದೆ.
ಬಹು ನಿರೀಕ್ಷಿತ ಚಿತ್ರಗಳ ಹೆಸರು ಹೀಗಿವೆ
ಪಠಾಣ್
ಪುಷ್ಪಾ: ಪಾರ್ಟ್ 2
ಜವಾನ್
ಆದಿ ಪುರುಷ್
ಸಲಾರ್
ವರಿಸು
ಕಬ್ಜಾ
ದಳಪತಿ 67
ದಿ ಆರ್ಚೀಸ್
ಡಂಕಿ
ಟೈಗರ್ 3
ಕಿಸಿ ಕಾ ಭಾಯಿ ಕಿಸಿ ಕಿ ಜಾನ್
ತುನಿವು
ಅನಿಮಲ್
ಏಜೆಂಟ್
ಇಂಡಿಯನ್ 2
ವಾಡಿವಾಸಲ್
ಶೆಹಜಾದಾ
ಬಡೇ ಮಿಯಾ ಚೋಟೆ ಮಿಯಾ
ಭೋಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.