Kamal Haasan: ಹೊಸ ಪೋಸ್ಟರ್ ಮೂಲಕ ಪ್ರೇಕ್ಷಕರಿಗೆ ವಿಶೇಷ ಅಪ್ಡೇಟ್ ಕೊಟ್ಟ ʼಇಂಡಿಯನ್-2ʼ
Team Udayavani, Oct 29, 2023, 3:20 PM IST
ಚೆನ್ನೈ: 1996ರಲ್ಲಿ ಎಸ್.ಶಂಕರ್ ನಿರ್ದೇಶಿಸಿದ್ದʼ ಇಂಡಿಯನ್ʼ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿ ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಈ ಸಿನಿಮಾದ ಸೀಕ್ವೆಲ್ ಸಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದ್ದ ಕಮಲ್ ಹಾಸನ್ ಅವರ ʼಇಂಡಿಯನ್ -2ʼ ಹೊಸ ಅನೌನ್ಸ್ ಮೆಂಟ್ ವೊಂದನ್ನು ಮಾಡಿ, ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಸಿನಿಮಾದಲ್ಲಿ ಕಮಲ್ ಹಾಸನ್ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ವಯಸ್ಸಾದವರಂತೆ ಕಾಣಿಸಿಕೊಳ್ಳಲಿದ್ದಾರೆ. ಸಾಕಷ್ಟು ತಯಾರಿಯನ್ನು ನಡೆಸಿಕೊಂಡಿರುವ ಕಮಲ್ ಹಾಸನ್ ಅವರನ್ನು ʼಇಂಡಿಯನ್ -2ʼ ನಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ಮುಂದಿನ ತಿಂಗಳು(ನವೆಂಬರ್ 7 ರಂದು) ಕಮಲ್ ಹಾಸನ್ ಅವರ ಹುಟ್ಟುಹಬ್ಬವಿದೆ. ಅದಕ್ಕೂ ಮುನ್ನ ಸಿನಿಮಾ ತಂಡ ಸ್ಪೆಷೆಲ್ ಅಪ್ಡೇಟ್ ವೊಂದನ್ನು ರಿವೀಲ್ ಮಾಡುವುದಾಗಿ ಹೇಳಿದೆ. ಸಿನಿಮಾದ ಮೊದಲ ಗ್ಲಿಂಪ್ಸ್ ನ್ನು ನವೆಂಬರ್ 3 ರಂದು ರಿಲೀಸ್ ಮಾಡುವುದಾಗಿ ಲೈಕಾ ಪ್ರೊಡಕ್ಷನ್ಸ್ ಪೋಸ್ಟರ್ ವೊಂದನ್ನು ರಿವೀಲ್ ಮಾಡಿ ಹೇಳಿದೆ.
ʼಇಂಡಿಯನ್ -2ʼ ಸಿನಿಮಾದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಮತ್ತು ಕಾಳಿದಾಸ್ ಜಯರಾಮ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ಅನಿರುದ್ಧ್ ಅವರು ಸಿನಿಮಾಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ಮುಂದಿನ ವರ್ಷ ಬಹು ನಿರೀಕ್ಷಿತ ಸಿನಿಮಾ ಬಿಡುಗಡೆ ಆಗಲಿದೆ.
ಇತ್ತೀಚೆಗೆ ಕಮಲ್ ಹಾಸನ್ ಅವರು ಮಣಿರತ್ನಂ ಅವರೊಂದಿಗೆ ಸಿನಿಮಾ ಮಾಡಲಿದ್ದೇನೆ ಎಂದು ಘೋಷಿಸಿದ್ದರು. ಈ ಸಿನಿಮಾಕ್ಕೆ ʼKH234ʼ ಎಂದು ಟೈಟಲ್ ಇಡಲಾಗಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.