Indian 2: ಕಮಲ್ ಹಾಸನ್ ʼಇಂಡಿಯನ್ -2ʼ ಗೆ ರಜಿನಿಕಾಂತ್, ರಾಜಮೌಳಿ,ಕಿಚ್ಚನ ಸಾಥ್
Team Udayavani, Nov 2, 2023, 5:03 PM IST
ಚೆನ್ನೈ: ಕಮಲ್ ಹಾಸನ್ ಅವರ ʼಇಂಡಿಯನ್ -2ʼ ಸಿನಿಮಾದ ಸ್ಪೆಷೆಲ್ ಅಪ್ಡೇಟ್ ರಿವೀಲ್ ಗೆ ಕ್ಷಣಗಣನೆ ಬಾಕಿ ಉಳಿದಿದೆ. ಶುಕ್ರವಾರ(ನ.3 ರಂದು) ʼಇಂಡಿಯನ್ -2ʼ ಇಂಟ್ರೋ(ಟೀಸರ್) ರಿಲೀಸ್ ಆಗಲಿದೆ.
1996ರಲ್ಲಿ ಎಸ್.ಶಂಕರ್ – ಕಮಲ್ ಹಾಸನ್ ಅವರ ʼಇಂಡಿಯನ್ʼ ಸಿನಿಮಾ ದೊಡ್ಡ ಯಶಸ್ಸಾಗಿತ್ತು. ಹೊಸ ಇತಿಹಾಸ ಬರೆದಿದ್ದ ʼಇಂಡಿಯನ್ʼ ಸಿನಿಮಾದ ಸೀಕ್ಚೆಲ್ ಇಷ್ಟು ವರ್ಷದ ಬಳಿಕ ಬರುತ್ತಿರುವುದರಿಂದ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ.
ಸಿನಿಮಾಕ್ಕಾಗಿ ಕಮಲ್ ಹಾಸನ್ ಸಾಕಷ್ಟು ತಯಾರಿ ನಡೆಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ಗಳು ವೈರಲ್ ಆಗಿದೆ. ಇದೀಗ ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ʼಇಂಡಿಯನ್ -2ʼ ಸಿನಿಮಾದ ಇಂಟ್ರೋ ರಿಲೀಸ್ ಗೆ ದಿನ ನಿಗದಿಯಾಗಿದ್ದು, ಈ ಸಮಾರಂಭಕ್ಕೆ ಸಿನಿರಂಗದ ಖ್ಯಾತ ನಟ ಹಾಗೂ ನಿರ್ದೇಶಕರನ್ನು ಚಿತ್ರತಂಡ ಆಹ್ವಾನ ನೀಡಿದೆ.
ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಎಸ್ ಎಸ್ ರಾಜಮೌಳಿ ಅವರು ಸಿನಿಮಾದ ಇಂಟ್ರೋ ರಿಲೀಸ್ ಮಾಡಲಿದ್ದಾರೆ. ಇದರೊಂದಿಗೆ ಕನ್ನಡದಿಂದ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಿಂದ ಆಮಿರ್ ಖಾನ್, ಮಾಲಿವುಡ್ ನಿಂದ ಮೋಹನ್ ಲಾಲ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಲೈಕಾ ಪ್ರೊಡಕ್ಷನ್ಸ್ ರೆಟ್ರೋ ಶೈಲಿಯ ಪೋಸ್ಟರ್ ರಿಲೀಸ್ ಮಾಡಿ ಹೇಳಿದೆ.
ಕಮಲ್ ಹಾಸನ್ ಅವರ ಸಿನಿಮಾದ ಪ್ರಚಾರದಲ್ಲಿ ರಜಿನಿಕಾಂತ್ ಭಾಗಿಯಾಗುತ್ತಿರುವುದು ಇದೇ ಮೊದಲು ಎನ್ನುವುದು ವಿಶೇಷ. ಈ ಹಿಂದೆ ಕಮಲ್ ಹಾಸನ್ – ರಜಿನಿಕಾಂತ್ ತಮ್ಮ ತಮ್ಮ ಸಿನಿಮಾದ ಕೆಲಸವನ್ನು ಪರಸ್ಪರ ಶ್ಲಾಘಿಸುತ್ತಿದ್ದರು.
ಕಳೆದ ವರ್ಷ ಅವರು ನಿರ್ದೇಶಕ ಮಣಿರತ್ನಂ ಅವರ ʼಪೊನ್ನಿಯಿನ್ ಸೆಲ್ವನ್: 1ʼ ಸಿನಿಮಾದ ಪ್ರಚಾರಕ್ಕಾಗಿ ಕಮಲ್ ಹಾಸನ್ – ರಜಿನಿಕಾಂತ್ ಜೊತೆಯಾಗಿದ್ದರು. ಇದಲ್ಲದೆ ಕಳೆದ ವರ್ಷ ʼವಿಕ್ರಮ್ʼ ಚಿತ್ರದ ಭಾರೀ ಯಶಸ್ಸಿನ ನಂತರ ರಜನಿಕಾಂತ್ ಅವರು ಕಮಲ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ತಮ್ಮ ನಿವಾಸಕ್ಕೆ ಕರೆದು ಅಭಿನಂದಿಸಿದ್ದರು.ʼಜೈಲರ್ʼ ಯಶಸ್ಸಿನ ಬಳಿಕ ಕಮಲ್ ಹಾಸನ್ ರಜಿನಿಕಾಂತ್ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದರು.
ʼಇಂಡಿಯನ್ -2ʼ ಸಿನಿಮಾದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಮತ್ತು ಕಾಳಿದಾಸ್ ಜಯರಾಮ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
Their friendship that grew over the years has only got stronger with time! 🤗✨ #SuperstarForUlaganayagan 🤩
‘Superstar @rajinikanth will release ‘Ulaganayagan’ @ikamalhaasan & @shankarshanmugh‘s INDIAN-2 AN INTRO tomorrow at 5:30 PM 🕠#Indian2 🇮🇳 @anirudhofficial… pic.twitter.com/SumRpTnKEH
— Lyca Productions (@LycaProductions) November 2, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.