![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 6, 2023, 8:36 AM IST
ವಾಷಿಂಗ್ಟನ್: ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್ 65ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ ನಲ್ಲಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
2023 ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿಯಲ್ಲಿ ರಿಕ್ಕಿ ಮತ್ತು ಸ್ಟೀವರ್ಟ್ ಕೋಪ್‌ಲ್ಯಾಂಡ್ ಅವರ ʼಡಿವೈನ್ ʼಟೈಡ್ಸ್ʼ ಆಲ್ಬಂ ಅತ್ಯುತ್ತಮವಾಗಿ ಗಮನ ಸೆಳೆಯುವ ಆಡಿಯೋ ವಿಭಾಗದಲ್ಲಿ (Best Immersive Audio Album category) ಆಯ್ಕೆಯಾಗಿತ್ತು.
ಸ್ಟೀವರ್ಟ್ ಕೋಪ್‌ಲ್ಯಾಂಡ್ ಅವರೊಂದಿಗೆ ʼಡಿವೈನ್ ಟೈಡ್ಸ್ ಆಲ್ಬಂʼಗಾಗಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇದು ರಿಕ್ಕಿ ಕೇಜ್ ಅವರ ಮೂರನೇ ಗ್ರ್ಯಾಮಿ ಪ್ರಶಸ್ತಿ. ಮೂರು ಬಾರಿ ಗ್ರ್ಯಾಮಿ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಯನ್ನು ರಿಕ್ಕಿ ಕೇಜ್ ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ರಿಕ್ಕಿ ಕೇಜ್ 2015ರಲ್ಲಿ ʼವಿಂಡ್ಸ್ ಆಫ್ ಸಂಸಾರʼ ಹಾಡಿಗೆ ಮೊದಲ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದರು. ಗ್ರ್ಯಾಮಿ 2022 ಅವಾರ್ಡ್ ಕಾರ್ಯಕ್ರಮದಲ್ಲಿ ʼಡಿವೈನ್ ಟೈಡ್ಸ್ʼ ಆಲ್ಬಂ ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲಿ ಪ್ರಶಸ್ತಿ ಗೆದ್ದಿತ್ತು.
ʼಡಿವೈನ್ ಟೈಡ್ಸ್ʼ ಆಲ್ಬಮ್‌ನಲ್ಲಿ ವಿಶ್ವದ ಸಹಜತೆ, ಸೊಗಡನ್ನು ಸುಂದರವಾಗಿ ತೋರಿಸಲಾಗಿದೆ. ಈ ಆಲ್ಬಮ್‌ನಲ್ಲಿ 9 ಹಾಡುಗಳು, 8 ಮ್ಯೂಸಿಕ್ ವಿಡಿಯೋಗಳಿವೆ. ಭಾರತದ ಹಿಮಾಲಯದಿಂದ ಸ್ಪೇನ್ ಕಾಡಿನವರೆಗೂ ಈ ಆಲ್ಬಮ್‌ಗಾಗಿ ಚಿತ್ರೀಕರಣ ಮಾಡಲಾಗಿತ್ತು. ಇದರ ದೃಶ್ಯಗಳು ಮನಮೋಹಕವಾಗಿ ಮೋಡಿ ಬಂದಿದೆ.
ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಕಾರ್ಯಕ್ರಮ ನಡೆದಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಇದು ನನ್ನ ಮೂರನೇ ಗ್ರ್ಯಾಮಿ ಎಂದು ರಿಕ್ಕಿ ಖುಷಿಯಿಂದ ಬರೆದು ವಿಚಾರವನ್ನು ಹಂಚಿಕೊಂಡಿದ್ದಾರೆ.
View this post on Instagram
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.