Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ

ಘಟನೆಯನ್ನು ವಿವರಿಸಿದ ಕೆಲಸದಾಕೆ... ಪುಟ್ಟಮಗುವಿನ ಮೇಲೆ ದಾಳಿಯಾಗುತ್ತಿತ್ತೇ? .. ರಾತ್ರಿ ನಡೆದಿದ್ದೇನು? ಹಲವು ಪ್ರಶ್ನೆಗಳು ಮೂಡಿವೆ!!!

Team Udayavani, Jan 16, 2025, 9:59 PM IST

1-ree

ಮುಂಬಯಿ: ಅಪರಿಚಿತ ದುಷ್ಕರ್ಮಿಯಿಂದ ಇರಿತಕ್ಕೊಳಗಾದ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಸ್ಟಾಫ್ ನರ್ಸ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಭಯಾನಕ ಘಟನೆಯನ್ನು ವಿವರಿಸಿದ್ದು, ಆಗಂತುಕ 1 ಕೋಟಿ ರೂ. ಬೇಡಿಕೆ ಇಟ್ಟಿದ್ದ ಎಂದು ಹೇಳಿಕೊಂಡಿದ್ದಾರೆ.

ಮೊದಲು ಸೈಫ್ ಮತ್ತು ಕರೀನಾ ಕಪೂರ್-ಖಾನ್ ಅವರ ಕಿರಿಯ ಮಗ ಜೆಹ್ ಅವರ ಕೋಣೆಗೆ ಪ್ರವೇಶಿಸಿದ್ದ ಎಂದು ಪ್ರಕರಣದ ದೂರುದಾರೆ ಎಲಿಯಾಮಾ ಫಿಲಿಪ್ ಹೇಳಿದ್ದಾರೆ.

ಜೆಹ್‌ಗೆ ಕೇರ್‌ಟೇಕರ್ ಮತ್ತು ನರ್ಸ್ ಆಗಿ ನೇಮಕಗೊಂಡಿದ್ದ ಎಲಿಯಾಮಾ ಫಿಲಿಪ್ ಪ್ರಕಾರ, ಜೆಹ್‌ನ ಕೋಣೆಯಲ್ಲಿ ಶಬ್ದ ಕೇಳಿದ ನಂತರ ನಸುಕಿನ ಸುಮಾರು 2 ಗಂಟೆಗೆ ಎಚ್ಚರಗೊಂಡಿದ್ದು, ಬಾತ್ರೂಮ್ ಲೈಟ್ ಆನ್ ಆಗಿರುವುದನ್ನು ಕಂಡುಕೊಂಡಿದ್ದಾಳೆ.

ಎಲಿಯಾಮಾ ನೀಡಿದ ಹೇಳಿಕೆಯಲ್ಲಿ ”ಬುಧವಾರ ರಾತ್ರಿ ಜೆಹ್‌ಗೆ ಊಟ ನೀಡಿ ಇನ್ನೊಬ್ಬ ದಾದಿ ಜತೆಗೆ ರಾತ್ರಿ 11 ಗಂಟೆ ಸುಮಾರಿಗೆ ಮಲಗಿದ್ದೆ. ಬಾತ್ ರೂಮ್ ನಲ್ಲಿ ಯಾರಿದ್ದಾರೆಂದು ನೋಡಲು ನಾನು ಎದ್ದು ಕುಳಿತೆ, ಒಬ್ಬ ಕುಳ್ಳಗಿನ , ತೆಳ್ಳಗಿನ ಮನುಷ್ಯ ಹೊರಬಂದು ಜೆಹ್‌ನ ಬೆಡ್ ಕಡೆಗೆ ಹೋಗುವುದನ್ನು ನಾನು ನೋಡಿದೆ. ತತ್ ಕ್ಷಣ ಎದ್ದುನಿಂತೆ. ಆ ವ್ಯಕ್ತಿ ಬೆರಳು ತೋರಿಸಿ, ಯಾವುದೇ ಶಬ್ದ ಮಾಡಬೇಡ ಎಂದು ಹಿಂದಿಯಲ್ಲಿ ಹೇಳಿದ. ನಾನು ಇನ್ನೂ ಜೆಹ್ ನತ್ತ ಓಡಿದೆ. ದುಷ್ಕರ್ಮಿ ಎಡಗೈಯಲ್ಲಿ ಮರದ ಕೋಲನ್ನು ಹೊಂದಿದ್ದ ಅವನ ಬಲಗೈಯಲ್ಲಿ ಉದ್ದವಾದ, ಹ್ಯಾಕ್ಸಾದಂತಹ ಬ್ಲೇಡ್ ಅನ್ನು ಹೊಂದಿದ್ದ. ಆತ ನನ್ನ ಕಡೆಗೆ ಧಾವಿಸಿದ. ಘರ್ಷಣೆಯಲ್ಲಿ ಆತ ಬ್ಲೇಡ್‌ನಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನ್ನ ಮಣಿಕಟ್ಟಿನ ಮೇಲೆ ಗಾಯವಾಗಿದೆ. ಆ ವೇಳೆ ನಾನು ಅವನಲ್ಲಿ ಏನು ಬೇಕು ಎಂದು ಕೇಳಿದೆ. 1 ಕೋಟಿ ರೂ ಬೇಕು ಎಂದು ಹೇಳಿದ್ದಾನೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

”ದಾದಿ ಜೋರಾಗಿ ಕೂಗಿಕೊಂಡಾಗ ಸೈಫ್ ಅಲಿ ಖಾನ್ ಮತ್ತು ಕರೀನಾ ಓಡಿ ಬಂದಿದ್ದಾರೆ. ಈ ವೇಳೆ ಒಳನುಗ್ಗಿದ ದುಷ್ಕರ್ಮಿ ಸೈಫ್ ಮೇಲೆ ದಾಳಿ ಮಾಡಿದ್ದು, ಮನೆಯ ಇತರ ಎಲ್ಲಾ ಸಿಬಂದಿ ಓಡಿದ್ದಾರೆ. ಮತ್ತೆ ಹಿಂತಿರುಗಿ ಬಂದಾಗ ಮುಖ್ಯ ಬಾಗಿಲು ತೆರೆದಿದ್ದು ಒಳನುಗ್ಗಿದ ವ್ಯಕ್ತಿ ಪರಾರಿಯಾಗಿದ್ದ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೂರಿನ ಪ್ರಕಾರ, ಒಳನುಗ್ಗಿದ ವ್ಯಕ್ತಿ ಸುಮಾರು 35 ರಿಂದ 40 ವರ್ಷ ವಯಸ್ಸಿನವನಾಗಿದ್ದಾನೆ. ಪೊಲೀಸರಿಗೆ ಸಿಕ್ಕ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿ ಮೆಟ್ಟಿಲುಗಳ ಮೂಲಕ ಇಳಿದು ಪರಾರಿಯಾಗುತ್ತಿರುವುದನ್ನು ಕಾಣಬಹುದು. ಆರೋಪಿಯನ್ನು ಬಂಧಿಸಲು 20ಕ್ಕೂ ಹೆಚ್ಚು ಪೊಲೀಸರ ತಂಡಗಳನ್ನು ರಚಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತ್ಯನಾರಾಯಣ ಚೌಧರಿ ತಿಳಿಸಿದ್ದಾರೆ.

ಬಾಂದ್ರಾದಲ್ಲಿನ 12 ನೇ ಮಹಡಿಯ ಅಪಾರ್ಟ್‌ಮೆಂಟ್‌ನೊಳಗೆ ಇರಿತ ನಡೆದಿದ್ದು, ಸೈಫ್ ಅಲಿ ಖಾನ್ ಅವರ ಬೆನ್ನುಮೂಳೆಯಲ್ಲಿ ಚಾಕು ಸಿಲುಕಿ ತೀವ್ರವಾಗಿ ಗಾಯಗೊಂಡು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಟಾಪ್ ನ್ಯೂಸ್

Mangaluru ತಣ್ಣೀರುಬಾವಿ ಬೀಚ್‌: ಜ.18, 19: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

Mangaluru ತಣ್ಣೀರುಬಾವಿ ಬೀಚ್‌: ಜ.18, 19: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

1-bcci

BCCI; ವಿಶೇಷ ಅಧಿಕಾರಿಯಾಗಿ ನಾ| ಅರುಣ್‌ ಮಿಶ್ರಾ ಆಯ್ಕೆ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

1-ao

Australian Open ಗ್ರ್ಯಾನ್‌ ಸ್ಲಾಮ್‌: ಸ್ವಿಯಾಟೆಕ್‌, ಫ್ರಿಟ್ಜ್  ಮೂರನೇ ಸುತ್ತಿಗೆ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Saif Ali Khan: ನಟ ಸೈಫ್‌ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ

Saif Ali Khan: ನಟ ಸೈಫ್‌ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

2-saif

Saif Ali Khan: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು

Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್‌ ಬಿಸಿ; ಕಾರಣವೇನು

Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್‌ ಬಿಸಿ; ಕಾರಣವೇನು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mangaluru ತಣ್ಣೀರುಬಾವಿ ಬೀಚ್‌: ಜ.18, 19: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

Mangaluru ತಣ್ಣೀರುಬಾವಿ ಬೀಚ್‌: ಜ.18, 19: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

1-bcci

BCCI; ವಿಶೇಷ ಅಧಿಕಾರಿಯಾಗಿ ನಾ| ಅರುಣ್‌ ಮಿಶ್ರಾ ಆಯ್ಕೆ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

1-ao

Australian Open ಗ್ರ್ಯಾನ್‌ ಸ್ಲಾಮ್‌: ಸ್ವಿಯಾಟೆಕ್‌, ಫ್ರಿಟ್ಜ್  ಮೂರನೇ ಸುತ್ತಿಗೆ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.