Tollywood: ರಾಮ್ ಪೋತಿನೇನಿ – ಅನುಪಮಾ ಪರಮೇಶ್ವರನ್ ವಿವಾಹ? ನಟಿಯ ತಾಯಿ ಸ್ಪಷ್ಟನೆ
Team Udayavani, Oct 7, 2023, 11:45 AM IST
ಹೈದರಾಬಾದ್: ಯಂಗ್ & ಟ್ಯಾಲೆಂಟೆಡ್ ನಟರಲ್ಲಿ ಒಬ್ಬರಾಗಿರುವ ರಾಮ್ ಪೋತಿನೇನಿ ಅವರ ʼಸ್ಕಂದʼ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದ್ದು, ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿನಿಮಾರಂಗ ಅಂದ್ಮೇಲೆ ಅಲ್ಲಿ ಗಾಸಿಪ್ ಗಳು ಇರಲೇಬೇಕು. ಕೆಲವೊಂದು ಈ ಸಲ ಗಾಸಿಪ್ ಗಳಿಂದ ಸೆಲೆಬ್ರಿಟಿಗಳು ಹೈರಾಣಾಗಿ ಹೋಗುತ್ತಾರೆ. ಇತ್ತೀಚೆಗೆ ಬಹುಭಾಷಾ ನಟಿ ಕೀರ್ತಿ ಸುರೇಶ್ ಹಾಗೂ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು.
ಇದೀಗ ಅಂಥದ್ದೇ ಮತ್ತೊಂದು ಮ್ಯಾರೇಜ್ ಸುದ್ದಿ ಟಾಲಿವುಡ್ ರಂಗದಲ್ಲಿ ಹರಿದಾಡಿದೆ. ಟಾಲಿವುಡ್ ನಲ್ಲಿ ಜನಪ್ರಿಯ ನಟರಾಗಿರುವ ಹ್ಯಾಂಡ್ಸಮ್ ಹಂಕ್ ರಾಮ್ ಪೋತಿನೇನಿ ಅವರು ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ.
ಈಗಾಗಲೇ ಆನ್ ಸ್ಕ್ರೀನ್ ನಲ್ಲಿ ʼಹಲೋ ಗುರು ಪ್ರೇಮ ಕೊಸಮೆʼ ʼವುನ್ನದಿ ಒಕತೆ ಜಿಂದಗಿʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿರುವ ರಾಮ್ ಹಾಗೂ ಅನುಪಮಾ ಅವರು ಉತ್ತಮ ಸ್ನೇಹಿತರಾಗಿದ್ದಾರೆ. ಸಿನಿಮಾದಲ್ಲಿ ಅವರಿಬ್ಬರ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ರಿಯಲ್ ಲೈಫ್ ನಲ್ಲೂ ಅವರಿಬ್ಬರು ಪರಸ್ಪರ ಇಷ್ಟಪಡುತ್ತಿದ್ದಾರೆ. ಮದುವೆ ಆಗಲಿದ್ದಾರೆ ಎನ್ನುವ ಗಾಸಿಪ್ ತೆಲುಗು ಸಿನಿವಲಯದಲ್ಲಿ ಹರಿದಾಡಿದೆ.
ಸದ್ಯ ಈ ಸುದ್ದಿ ಹರಡುತ್ತಿದ್ದಂತೆ ನಟಿಯ ತಾಯಿ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಅನುಪಮಾ ಅವರ ತಾಯಿ ಸುನಿತಾ ಅವರು ಎಲ್ಲಾ ಊಹಾಪೋಹಗಳನ್ನು ಬಲವಾಗಿ ನಿರಾಕರಿಸಿದ್ದು, ಹರಿದಾಡುತ್ತಿರುವ ಸುದ್ದಿ ಆಧಾರರಹಿತ ಮತ್ತು ಸುಳ್ಳು ಎಂದು ಅವರು ಹೇಳಿರುವುದಾಗಿ ʼನ್ಯೂಸ್ 18ʼ ವರದಿ ಮಾಡಿದೆ.
ಮುಂಬರುವ ಸಿನಿಮಾದಲ್ಲಿ ಬ್ಯುಸಿಯಾದ ನಟ, ನಟಿ: ಸದ್ಯ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡದಿರುವ ರಾಮ್ ಹಾಗೂ ಅನುಪಮಾ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನುಪಮಾ ಮಲ್ಲಿಕ್ ರಾಮ್ ಅವರ ʼಟಿಲ್ಲು ಸ್ಕ್ವೇರ್ʼ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ ಜೊತೆ ನಟಿಸಿದ್ದಾರೆ. ಈ ಚಿತ್ರವು ನವೆಂಬರ್ 10 ರಂದು ರಿಲೀಸ್ ಆಗಲಿದೆ.
ಇತ್ತ ರಾಮ್ ʼಸ್ಕಂದʼ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದ್ದು, ʼ ಡಬಲ್ ಇಸ್ಮಾರ್ಟ್ʼ ಈ ಸಿನಿಮಾ ಮಾರ್ಚ್ 8, 2024 ರಂದು ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.