Uorfi Javed: ದೇವಸ್ಥಾನದಲ್ಲಿ ರಹಸ್ಯವಾಗಿ ಎಂಗೇಜ್ ಮೆಂಟ್ ಮಾಡಿಕೊಂಡ್ರಾ ಉರ್ಫಿ ಜಾವೇದ್?
Team Udayavani, Oct 3, 2023, 2:05 PM IST
ಮುಂಬಯಿ: ತನ್ನ ಮಾದಕ ನೋಟ ಹಾಗೂ ಹಾಟ್ ಉಡುಗೆ ತೊಡುಗೆಯಿಂದಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನಟಿ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ತನ್ನ ಉಡುಗೆಯಿಂದ ಸುದ್ದಿಯಾಗದೆ ಬೇರೊಂದು ಕಾರಣದಿಂದ ಚರ್ಚೆಯಲ್ಲಿದ್ದಾರೆ.
ತಾನು ಹಾಕಿದ್ದೇ ಬಟ್ಟೆ, ತಾನು ಉಟ್ಟು ಬಂದದ್ದೇ ಫ್ಯಾಷನ್ ಎಂದು ಎಷ್ಟೇ ಟ್ರೋಲ್ ಆದರೂ, ಕ್ಯಾಮೆರಾ ಮುಂದೆ ಬಂದು ಪೋಸ್ ಕೊಡುವ ನಟಿ ಕಂ ಮಾಡೆಲ್ ಉರ್ಫಿ ಜಾವೇದ್ ಇಂಟರ್ ನೆಟ್ ಸೆನ್ಸಷನ್ ಗಳಲ್ಲಿ ಒಬ್ಬರು.
ತನ್ನ ಹಾಟ್ ಲುಕ್ & ಡ್ರೆಸ್ ಗಳಿಂದಲೇ ವೈರಲ್ ಆಗುವ ಉರ್ಫಿ ಈ ಬಾರಿ ಬೇರೊಂದು ಕಾರಣದಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಉರ್ಫಿ ಜಾವೇದ್ ಅವರು ದೇವಸ್ಥಾನವೊಂದರಲ್ಲಿ ಹುಡುಗನ ಜೊತೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹವನ ಕುಂಡದ ಮುಂದೆ ಉರ್ಫಿ ಜಾವೇದ್ ಹುಡುಗನೊಬ್ಬನ ಜೊತೆ ಕೂತಿದ್ದಾರೆ. ಪಕ್ಕದಲ್ಲಿ ಆರ್ಚಕರು ಕೂಡ ಇದ್ದಾರೆ. ಇದು ರೋಕಾ ಸಮಾರಂಭ ಎಂದು ಕೆಲ ಅಭಿಮಾನಿಗಳು ಹೇಳಿದ್ದಾರೆ. ಉರ್ಫಿ ಜಾವೇದ್ ರಹಸ್ಯವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಹಾಗೂ ಅವರ ಫ್ಯಾನ್ಸ್ ಗಳು ಇಂಟರ್ ನೆಟ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಉರ್ಫಿ ಅವರ ಸಹೋದರಿ ಉರುಸಾ ಅವರು ಈ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಆಗಿ ಹಂಚಿಕೊಂಡಿದ್ದು, ಎಂಗೇಜ್ ಮೆಂಟ್ ಸುದ್ದಿಯ ಬಗ್ಗೆ ಮತ್ತಷ್ಟು ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಉರ್ಫಿ ಜಾವೇದ್ ಸಾರ್ವಜನಿಕವಾಗಿ ಎಂದೂ ಕೂಡ ತನ್ನ ಲವ್ ಲೈಫ್ ಬಗ್ಗೆ ಮಾತನಾಡಿಕೊಂಡಿಲ್ಲ. ಸದ್ಯ ಈ ವೈರಲ್ ಫೋಟೋ ಬಗ್ಗೆ ಉರ್ಫಿ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ಇತ್ತೀಚೆಗೆ ಮುಂಬಯಿ ಗಣೇಶ ಚತುರ್ಥಿ ವೇಳೆ ನಟಿ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದರು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.