ಸಿನಿಮಾ ಅವಕಾಶ ಹೆಸರಲ್ಲಿ ಸತತ ಅತ್ಯಾಚಾರ: ಬಾಲಿವುಡ್ ನ 9 ಮಂದಿಯ ವಿರುದ್ಧ ಮಾಡೆಲ್ ದೂರು
Team Udayavani, Jun 1, 2021, 8:48 AM IST
ಮುಂಬೈ: ಸಿನಿಮಾ ರಂಗದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಕೆಲವು ವರ್ಷಗಳ ಕಾಲ ಸತತವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಜಾಕಿ ಭಗ್ನಾನಿ ಸೇರಿ ಒಂಬತ್ತು ಮಂದಿಯ ವಿರುದ್ದ ಮಾಡೆಲ್ ಒಬ್ಬರು ದೂರು ನೀಡಿದ್ದಾರೆ.
28 ವರ್ಷದ ಯುವತಿ ದೂರು ನೀಡಿದ್ದು, 2014ರಿಂದ 2019ರ ಸಮಯದಲ್ಲಿ ಸಿನಿಮಾ ಅವಕಾಶ ದೊರಕಿಸಿ ಕೊಡುವುದಾಗಿ ಹೇಳಿ ಒಂಬತ್ತು ಮಂದಿ ಅತ್ಯಾಚಾರ ಮತ್ತು ಕಿರುಕುಳ ನೀಡಿದ್ದಾರೆ ಎಂದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ:ಮೇಘಾಲಯ: ಅನಧಿಕೃತ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ ಐವರು ಕಾರ್ಮಿಕರು
ನಟ ನಿರ್ಮಾಪಕ ಜಾಕಿ ಭಗ್ನಾನಿ, ಫೋಟೋಗ್ರಾಫರ್ ಕೋಲ್ಸ್ಟನ್ ಜೂಲನ್, ಕ್ವಾನ್ ಎಂಟರ್ಟೈನ್ ಮೆಂಟ್ ನ ಅನಿರ್ಬಾನ್, ಟಿ ಸಿರೀಸ್ ನ ಕೃಷಣ್ ಕುಮಾರ್, ನಿಖಿಲ್ ಕಾಮತ್, ಅಜಿತ್ ಥಾಕೂರ್, ಗುರುಜ್ಯೋತ್ ಸಿಂಗ್, ಕೃಷ್ಣ ಕುಮಾರ್ ಮತ್ತು ವಿಷ್ಣು ಇಂದೂರಿ ವಿರುದ್ದ ದೂರು ನೀಡಲಾಗಿದೆ. ಫೋಟೊಗ್ರಾಫರ್ ಕೋಲ್ಸ್ಟನ್ ಜೂಲನ್ ತನ್ನ ಮೇಲೆ ಅತ್ಯಾಚಾರವೆಸಗಿದ್ದು, ಉಳಿದವರು ಕಿರುಕುಳ ನೀಡಿದ್ದಾರೆ ಎಂದು ಮಾಡೆಲ್ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಸೆಕ್ಷನ್ 376 ( ಸತತ ಅತ್ಯಾಚಾರ) ಮತ್ತು ಸೆಕ್ಷನ್ 354 ( ಕಿರುಕುಳ) ಅಡಿಯಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.