33.17 ಕೋಟಿ ರೂ. ಬಾಚಿದ ರಣಬೀರ್, ಕತ್ರಿನಾ ಜೋಡಿಯ ‘ಜಗ್ಗ ಜಾಸೂಸ್’
Team Udayavani, Jul 17, 2017, 11:46 AM IST
ಬಾಲಿವುಡ್ ನ ಜಗ್ಗ ಜಾಸೂಸ್ ಮೊದಲ ದಿನವೇ ಸಕ್ಸಸ್ ಆಗಿ ರಣಬೀರ್ ಕತ್ರಿನಾ ಜೋಡಿಗೆ ಯಶಸ್ಸಿನ ಕಿರೀಟ ತೊಡಿಸಿದೆ.
ಜಗ್ಗಾ ಜಾಸೂಸ್ ಉತ್ತಮ ಆರಂಭ ಕಂಡಿದೆ. ದೇಶಾದ್ಯಂತ ಬಿಡುಗಡೆಯಾದ ಬಾಲಿವುಡ್ ನಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಚಿತ್ರ ‘ಜಗ್ಗ ಜಾಸೂಸ್’ ಬಿಡುಗಡೆಯಾದ 3ನೇ ದಿನಕ್ಕೆ 33.17 ಕೋಟಿ ರೂಪಾಯಿಯನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ ಜನ ಚಿತ್ರವನ್ನು ಇಷ್ಟಪಟ್ಟಿದ್ದಾರೆ ಎಂದಿದೆ ಚಿತ್ರತಂಡ. ಅನುರಾಗ್ ಬಸು ನಿರ್ದೇಶನದ ‘ಜಗ್ಗಜಾಸೂಸ್’ ಸಿನಿಮಾದಲ್ಲಿ ರಣ್ ಬೀರ್ ಶಾಲಾ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯ ಮನೋಜ್ಞವಾಗಿದೆ ಎಂಬ ಹೊಗಳಿಕೆ ವ್ಯಕ್ತವಾಗಿದೆ.
ಕಳೆದುಹೋಗಿರುವ ತನ್ನ ತಂದೆಯನ್ನು ಹುಡುಕುವ ಬಾಲಕನ ಕಥೆ ಇದಾಗಿದ್ದು, ರಣ್ ಬೀರ್ ಗೆ ಜೊತೆಯಾಗಿ ಕತ್ರೀನಾ ಕೈಪ್ ಕೂಡಾ ಸಕತ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಮುಗ್ದತೆಯ ನಟನೆ ಮೆಚ್ಚುಗೆಗೆ ಪಾತ್ರವಾಗಿದೆ. ಸಯಾನಿ ಗುಪ್ತಾ ಮತ್ತು ಸೌರಭ್ ಶುಕ್ಲಾ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಬರ್ಫಿ ಚಿತ್ರದ ನಂತರ ಬಸು ಹಾಗೂ ರಣ್ ಬೀರ್ ಜೊತೆಯಾಗಿ ಕೆಲಸ ಮಾಡಿದ ಎರಡನೇ ಚಿತ್ರ ಇದಾಗಿದೆ .
ಕತ್ರೀನಾ ರಣ್ ಬೀರ್ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರೂ, ಈ ಚಿತ್ರ ಇವರಿಬ್ಬರಿಗೆ ಹೊಸ ಬ್ರೇಕ್ ನೀಡಲಿದೆ ಎಂಬ ವಿಶ್ವಾಸ ಇವರಿಬ್ಬರದ್ದು. ಅದಕ್ಕೆ ತಕ್ಕಂತೆಯೇ ಸಿನಿರಸಿಕರಿಂದ ರೆಸ್ಪಾನ್ಸ್ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.