Jawan Review: ಶಾರುಖ್ ʼಜವಾನ್ʼ ನೋಡಿ ಏನಂದ್ರು ಪ್ರೇಕ್ಷಕರು? ಹೇಗಿದೆ ರೆಸ್ಪಾನ್ಸ್?
ತಪ್ಪೇ ಇಲ್ಲದ ಪರಿಪೂರ್ಣ ಸಿನಿಮಾವೆಂದ ಪ್ರೇಕ್ಷಕ
Team Udayavani, Sep 7, 2023, 9:31 AM IST
ಮುಂಬಯಿ: ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ʼಜವಾನ್ʼ ಸಿನಿಮಾ ಇಂದು (ಸೆ.7 ರಂದು) ವಿಶ್ವದಾದ್ಯಂತ ತೆರೆಕಂಡಿದೆ. ಅಂದುಕೊಂಡಂತೆ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಮಧ್ಯರಾತ್ರಿಯಿಂದಲೇ ಶಾರುಖ್ ಅಭಿಮಾನಿಗಳು ಬಿಗ್ ಸ್ಕ್ರೀನ್ ನಲ್ಲಿ ʼಜವಾನ್ʼ ನೋಡಲು ಸಾಲಾಗಿ ನಿಂತಿದ್ದಾರೆ. ಮಿಡ್ ನೈಟ್ ನಿಂದಲೇ ಶೋಗಳು ಆರಂಭವಾಗಿವೆ.
ಶಾರುಖ್ ಖಾನ್ ʼಪಠಾಣ್ʼ ಸಿನಿಮಾದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಅದೇ ಜೋಶ್ ನಲ್ಲಿ ʼಜವಾನ್ʼ ರಿಲೀಸ್ ಆಗಿದೆ. ಸಿನಿಮಾವನ್ನು ಕಾಲಿವುಡ್ ಸೂಪರ್ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿರುವುದು ಸಿನಿ ಪ್ರೇಕ್ಷಕರ ಕುತೂಹಲಕ್ಕೆ ಮತ್ತೊಂದು ಕಾರಣವೆಂದೇ ಹೇಳಬಹುದು.
ಶಾರುಖ್ ಖಾನ್ ಸಿನಿಮಾದಲ್ಲಿ ವಿಭಿನ್ನ ಹಾಗೂ ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶ ಉಳಿಸುವ ʼಜವಾನ್ʼ ಆಗಿ ಶಾರುಖ್ ಪ್ರೇಕ್ಷಕರಿಗೆ ಇಷ್ಟವಾದರೇ? ಹೇಗಿದೆ ಸಿನಿಮಾ? ನೋಡಿದವರ ಟ್ವಿಟರ್ ರಿವ್ಯೂ ನೋಡ್ಕೊಂಡು ಬರೋಣ ಬನ್ನಿ..
‘ಜವಾನ್’ ಒಬ್ಬ ವಿನ್ನರ್. ಅಟ್ಲೀ ಅವರು ಮಾಸ್ ಜಗತ್ತಿನಲ್ಲಿ ನಮ್ಮನ್ನು ಮನರಂಜಿಸುತ್ತಾರೆ. ಇದೊಂದು ಅಮೋಘ ಎಂಟರ್ಟೈನರ್. ನೋಡಲೇ ಬೇಕಾದ ಸಿನಿಮಾವೆಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇದೊಂದು ಬ್ಲಾಕ್ ಬಸ್ಟರ್ ಸಿನಿಮಾವೆಂದಿದ್ದಾರೆ ಮತ್ತೊಬ್ಬರು.
ಭಾರತೀಯ ಸಿನಿಮಾರಂಗದಲ್ಲಿ ಇದುವರೆಗೆ ಮಾಡಿದ ಪರಿಪೂರ್ಣ ಆ್ಯಕ್ಷನ್ ಎಂಟರ್‌ಟೈನರ್. ವಿಎಫ್ ಎಕ್ಸ್ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದೆ. ಚಿತ್ರದ ಕಥೆ ಅದ್ಭುತವಾಗಿದೆ. 2ನೇ ಹಾಫ್ ನಲ್ಲಿ ಅಸಲಿ ಮಜಾವಿದೆ ಎಂದು ಒಬ್ಬರು ಸಿನಿಮಾವನ್ನು ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.
ಯಾವುದೇ ತಪ್ಪಿಲ್ಲದಿರುವ ಹೈ ಆ್ಯಕ್ಷನ್ ಎಂಟರ್‌ಟೈನರ್ ಆಗಿದೆ. ಇದು ಮಾಸ್ ಮತ್ತು ಕ್ಲಾಸ್ ಮಿಶ್ರಣವಾಗಿದ್ದು, ಕಿಂಗ್ ಖಾನ್ ಮಾಸ್ಟರ್ ಪೀಸ್ ನಟನೆ, ಅಟ್ಲಿ ನಿರ್ದೇಶನದಿಂದ ಸಿನಿಮಾ ಗಮನ ಸೆಳೆಯುತ್ತದೆ. ಅಟ್ಲಿ ಭಾರತೀಯ ಸಿನಿಮಾರಂಗದಲ್ಲಿ ಮುಂದಿನ ದೊಡ್ಡ ವಿಷಯವೆಂದು ಒಬ್ಬರು ಬರೆದುಕೊಂಡಿದ್ದಾರೆ.
ಸೂಪರ್ ಮ್ಯೂಸಿಕ್, ಕ್ಲಾಸ್ ನಟನೆ,ಅದ್ಭುತ ಡೈಲಾಗ್ಸ್, ಅಮೋಘ ದೃಶ್ಯದಿಂದ ʼಜವಾನ್ʼ ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಸಿನಿಮಾದಲ್ಲಿ ಖಳನಾಯಕನಾಗಿ ʼಕಾಳಿʼ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಇನ್ನು ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಪಾತ್ರಕ್ಕೂ ಶ್ಲಾಘನೆ ವ್ಯಕ್ತವಾಗಿದೆ.
#OneWordReview…
#Jawan : BLOCKBUSTER.Rating: ⭐️⭐️⭐️⭐️½
Jawan is a WINNER and more than lives up to the humongous hype… #Atlee immerses us into the world of Mass pan-Indian film, delivers a KING-SIZED ENTERTAINER…
MUST, MUST, MUST WATCH. #JawanReview #ShahRukhKhan pic.twitter.com/t9v7A1PiY7
— Varad (@CricVarad) September 6, 2023
#JawanReview ⭐⭐⭐⭐⭐ – #AryanKhan
Perfect action entertainer ever made in Indian cinema. #VFX are the best quality, this movie has nailed it 👌👌💥🔥💪
The story of the film is brilliant 🤯💥
Asli maja in the 2nd half #Jawan pic.twitter.com/yuSU3Wa1Dr— Abhijeet Bhardwaj (@srkian_bhardwaj) September 6, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.