ಈ ಕಾರಣದಿಂದ ಜೂ.ಎನ್‌ ಟಿಆರ್ ಬಹು ನಿರೀಕ್ಷಿತ‌ ʼದೇವರʼ ರಿಲೀಸ್‌ ಡೇಟ್‌ ಮುಂದೂಡಿಕೆ?

Team Udayavani, Jan 23, 2024, 7:59 PM IST

ಈ ಕಾರಣದಿಂದ ಜೂ.ಎನ್‌ ಟಿಆರ್ ಬಹು ನಿರೀಕ್ಷಿತ‌ ʼದೇವರʼ ರಿಲೀಸ್‌ ಡೇಟ್‌ ಮುಂದೂಡಿಕೆ?

ಹೈದರಾಬಾದ್: ʼಆರ್‌ ಆರ್‌ ಆರ್‌ʼ ಸಿನಿಮಾದ ಬಳಿಕ ಜೂ.ಎನ್‌ ಟಿಆರ್‌ ಪ್ಯಾನ್‌ ಇಂಡಿಯಾದಲ್ಲಿ ಮಿಂಚಿದ್ದಾರೆ. ಅವರ ಜನಪ್ರಿಯತೆಗೆ ತಕ್ಕಂತೆ, ಅವರ ಮುಂದಿನ ಸಿನಿಮಾದ ಬಗ್ಗೆ ಕುತೂಹಲವೂ ಅಷ್ಟೇ ಹೆಚ್ಚಾಗಿದೆ.
ಜೂ. ಎನ್‌ ಟಿಆರ್‌ ಕೊರಟಾಲ ಶಿವ ಅವರೊಂದಿಗೆ ʼದೇವರʼ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಸಿನಿಮಾ ಅನೌನ್ಸ್‌ ಆದ ದಿನದಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ.

ಸಿನಿಮಾದಲ್ಲಿ ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌, ನಟ ಸೈಫ್‌ ಅಲಿಖಾನ್‌ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಬಿಟೌನ್‌ ಸಿನಿಮಂದಿಗೂ ʼದೇವರʼ ಸಿನಿಮಾ ಕುತೂಹಲ ಹುಟ್ಟಿಸಿದೆ. ಎರಡು ಭಾಗದಲ್ಲಿ ʼದೇವರʼ ತೆರೆ ಕಾಣಲಿದೆ. ಮೊದಲ ಭಾಗ ಇದೇ ಏಪ್ರಿಲ್‌ 5 ರಂದು ರಿಲೀಸ್‌ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿತ್ತು. ಆದರೆ ಇದೀಗ ಸಿನಿಮಾ ಅಂದುಕೊಂಡ ದಿನಕ್ಕೆ ತೆರೆಗೆ ಬರುವುದಿಲ್ಲ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

“ದೇವರ ಸಿನಿಮಾಗೆ ವಿಎಫ್‌ ಎಕ್ಸ್‌ ಕೆಲಸ ಹೆಚ್ಚಿದೆ. ಔಟ್‌ ಪುಟ್‌ ಬರಲು ನಿರೀಕ್ಷೆಗಿಂತ ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಕಾರಣದಿಂದ ಚಿತ್ರತಂಡ ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ. ಅಂದುಕೊಂಡ ದಿನಕ್ಕೆ (ಏ.5 ರಂದು) ರಿಲೀಸ್‌ ಮಾಡದಿರಲು ನಿರ್ಧರಿಸಿದೆ” ಎಂದು ಮೂಲಗಳು ಹೇಳಿರುವುದಾಗಿ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

“ಇನ್ನು ಕೂಡ 20 ದಿನದ ಚಿತ್ರೀಕರಣ ಬಾಕಿಯಿದೆ. ಇದಲ್ಲದೆ ಸೈಫ್‌ ಅಲಿಖಾನ್‌ ಅವರಿಗೆ ಭುಜದ ಶಸ್ತ್ರ ಚಿಕಿತ್ಸೆಯಾಗಿದ್ದು, ಚಿತ್ರೀಕರಣ ಇನ್ನಷ್ಟು ತಡವಾಗುವ ಸಾಧ್ಯತೆಯಿದೆ. ಈ ಕಾರಣದಿಂದ ರಿಸ್ಕ್‌ ತೆಗದುಕೊಳ್ಳದೆ ಸಿನಿಮಾ ರಿಲೀಸ್‌ ದಿನವನ್ನು ಮುಂದೂಡಲಾಗಿದೆ. ಸಿನಿಮಾ 2024 ರ ದ್ವಿತೀಯಾರ್ಧದಲ್ಲಿ ತೆರೆ ಕಾಣಲಿದೆ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.

ಇದಾದ ಬಳಿಕ ಜೂ.ಎನ್‌ ಟಿಆರ್‌ ಹೃತಿಕ್‌ ರೋಷನ್‌ ಅವರ ʼವಾರ್‌ -2ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್‌ ನಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ.

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SS Rajamouli: ಡಾಕ್ಯುಮೆಂಟರಿಯಾಗಿ ಓಟಿಟಿಗೆ ಬರಲಿದೆ ರಾಜಮೌಳಿ ಸಿನಿಮಾ ಸಾಹಸಗಾಥೆ

Rashmika Mandanna is in kubera movie

Rashmika Mandanna; ಕುಬೇರ ಮೂಲೆಯಲ್ಲಿ ನಿಂತ ರಶ್ಮಿಕಾ ಮಂದಣ್ಣ

ಮುಂದಿನ ವರ್ಷವೇ ʼಕಲ್ಕಿ 2898 ಎಡಿʼ ಸೀಕ್ವೆಲ್ ರಿಲೀಸ್; ನಿರ್ಮಾಪಕರೇ ಕೊಟ್ರು ಸುಳಿವು

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್‌ ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

Salaar 2: ಪ್ರಶಾಂತ್‌ ನೀಲ್‌ – ಪ್ರಭಾಸ್‌ ʼಸಲಾರ್-2‌ʼ ಸೆಟ್ಟೇರಲು ಡೇಟ್‌ ಫಿಕ್ಸ್

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.