25ನೇ ವಯಸ್ಸಿಗೆ ನಿಧನ ಹೊಂದಿದ ಕೆ-ಪಾಪ್ ಗ್ರೂಪ್ ASTRO ಸದಸ್ಯ Moonbin
Team Udayavani, Apr 20, 2023, 12:02 PM IST
ಹೊಸದಿಲ್ಲಿ: ಜನಪ್ರಿಯ ಕೆ-ಪಾಪ್ ಬಾಯ್ ಗ್ರೂಪ್ ಆಸ್ಟ್ರೋ ಸದಸ್ಯ ಮೂನ್‌ಬಿನ್ ಬುಧವಾರ 25 ನೇ ವಯಸ್ಸಿನಲ್ಲಿ ನಿಧನರಾದರು. ಆ್ಯಸ್ಟ್ರೋ ಗ್ರೂಪ್ ಇನ್ಸ್ಟಾಗ್ರಾಮ್ ನಲ್ಲಿ ಮೂನ್‌ಬಿನ್ ನಿಧನದ ಸುದ್ದಿಯನ್ನು ದೃಢೀಕರಿಸುವ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದೆ. ಅವರ ಸಾವಿನ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದಿಲ್ಲ.
“ಇಂತಹ ದುಃಖಕರ ಮತ್ತು ಹೃದಯವಿದ್ರಾವಕ ಸುದ್ದಿಯನ್ನು ನಿಮಗೆ ತಂದಿದ್ದಕ್ಕಾಗಿ ನಾವು ಕ್ಷಮೆ ಕೇಳಲು ಬಯಸುತ್ತೇವೆ. ಏಪ್ರಿಲ್ 19 ರಂದು ASTRO ಸದಸ್ಯ ಮೂನ್‌ಬಿನ್ ಇದ್ದಕ್ಕಿದ್ದಂತೆ ನಮ್ಮನ್ನು ತೊರೆದು ಆಕಾಶದಲ್ಲಿ ನಕ್ಷತ್ರವಾದರು. ತಮ್ಮ ಪ್ರೀತಿಯ ಮಗ ಮತ್ತು ಸಹೋದರನನ್ನು ಕಳೆದುಕೊಂಡ ಕುಟುಂಬದ ದುಃಖಕ್ಕೆ ಹೋಲಿಸಲಾಗದಿದ್ದರೂ, ASTRO ಸದಸ್ಯರು, ಹಾಗೆಯೇ ನಮ್ಮ ಸಹವರ್ತಿ ಫ್ಯಾಂಟಜಿಯೊ ಕಲಾವಿದರು ಮತ್ತು ಕಾರ್ಯನಿರ್ವಾಹಕರು ಮೃತರಿಗೆ ತೀವ್ರ ದುಃಖ ಮತ್ತು ಆಘಾತದಲ್ಲಿ ಶೋಕ ವ್ಯಕ್ತಪಡಿಸುತ್ತಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:IPL 2023 ಪವರ್ ಪ್ಲೇ ನಲ್ಲಿ ರಾಹುಲ್ ಬ್ಯಾಟಿಂಗ್ ನೋಡುವುದೆಂದರೆ….: ಪೀಟರ್ಸನ್ ಟೀಕೆ
ವರದಿಗಳ ಪ್ರಕಾರ ಮೂನ್ ಬಿಲ್ ಆತನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಮ್ಯಾನೇಜರ್ ಇದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ASTRO ಗ್ರೂಪ್ ಇನ್ಸ್ಟಾಗ್ರಾಮ್ ನಲ್ಲಿ 5 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.