![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 4, 2023, 10:52 AM IST
ಚೆನ್ನೈ: ಕಮಲ್ ಹಾಸನ್ – ಶಂಕರ್ ಅವರ ʼಇಂಡಿಯನ್ -ʼ ಇಂಟ್ರೋ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.
ರಜಿನಿಕಾಂತ್, ಮೋಹನ್ ಲಾಲ್, ಎಸ್ ಎಸ್ ರಾಜಮೌಳಿ, ಕಿಚ್ಚ ಸುದೀಪ್, ಮತ್ತು ಆಮಿರ್ ಖಾನ್ ಅವರು ʼಇಂಡಿಯನ್ -2ʼ ಇಂಟ್ರೋ ರಿಲೀಸ್ ಮಾಡಿದ್ದಾರೆ. ʼಹೆಲೋ ಇಂಡಿಯಾ,ಇಂಡಿಯನ್ ಇಸ್ ಬ್ಯಾಕ್ʼ ಎಂದು ಹೇಳುವ ಕಮಲ್ ಹಾಸನ್ ಓಲ್ಡ್ ಮ್ಯಾನ್ ಅವತಾರ ಪ್ರೇಕ್ಷಕರ ಮನಗೆದ್ದಿದೆ. ಸಿನಿಮಾದ ಬಗ್ಗೆ ಹೈಪ್ ಮತ್ತಷ್ಟು ಹೆಚ್ಚಾಗಿದ್ದು, ಭಾರತೀಯ ಸಿನಿರಂಗದಲ್ಲಿ ʼಇಂಡಿಯನ್ -2ʼ ಕೂಡ ಹೊಸ ದಾಖಲೆ ಬರೆಯುತ್ತದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಶಂಕರ್ ಅವರ ʼಇಂಡಿಯನ್ -2ʼ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. 2ನೇ ಭಾಗದ ಕಥೆಯಲ್ಲಿನ ಕೆಲ ಅಂಶಗಳು 3ನೇ ಭಾಗದ ಚಿತ್ರೀಕರಣವನ್ನು ಏಕಕಾಲದಲ್ಲಿ ಮಾಡುವಂತೆ ಮಾಡಿದೆ ಎಂದು ಚಿತ್ರತಂಡದ ಆಪ್ತ ಮೂಲವೊಂದು ಹೇಳಿರುವುದಾಗಿ “ಪಿಂಕ್ ವಿಲ್ಲಾ” ವರದಿ ಮಾಡಿತ್ತು.
ಶಂಕರ್ ಅವರ ಬಳಿ 6 ಗಂಟೆಗಳ “ಇಂಡಿಯನ್-2” ತುಣುಕುಗಳಿತ್ತು. ಅದನ್ನು ಇಡೀ ಚಿತ್ರತಂಡ ನೋಡಿದ ಮೇಲೆ ಇದರಲ್ಲಿ ಮತ್ತೊಂದು ಸೀಕ್ವೆಲ್ ಮಾಡುವ ಅಂಶಗಳಿತ್ತು. ಇದಾದ ಬಳಿಕ ಶಂಕರ್ ಅವರು ಕಥೆಯಲ್ಲಿ ಬದಲಾವಣೆ ಮಾಡಿಕೊಂಡು, 2ನೇ ಭಾಗದಲ್ಲಿ ಮೂರನೇ ಭಾಗವನ್ನು ಸೇರಿಸಿ, ಶೂಟ್ ಮಾಡಿದರು ಎಂದು ವರದಿ ಆಗಿತ್ತು.
ಇದನ್ನೂ ಓದಿ: Team India; ವಿಶ್ವಕಪ್ ನಿಂದಲೇ ಹೊರಬಿದ್ದ ಹಾರ್ದಿಕ್ ಪಾಂಡ್ಯ; ಬದಲಿಯಾಗಿ ಕನ್ನಡಿಗನ ಆಯ್ಕೆ
ಮಾಹಿತಿಗಳ ಪ್ರಕಾರ ಚಿತ್ರದ ರನ್‌ಟೈಮ್ ಐದೂವರೆ ಗಂಟೆ ದಾಟಿದ ಕಾರಣ ʼಇಂಡಿಯನ್ 2ʼ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾದ ಮೊದಲ ಭಾಗ 2024 ರ ಏ.12 ರಂದು ರಿಲೀಸ್ ಆಗಲಿದೆ. ಮೂರನೇ ಭಾಗ 2024 ರ ದೀಪಾವಳಿಗೆ ರಿಲೀಸ್ ಆಗಲಿದೆ ಎನ್ನಲಾಗಿದೆ. ಆದರೆ ಈ ಕುರಿತು ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಲೈಕಾ ಪ್ರೊಡಕ್ಷನ್ ನಿರ್ಮಾಣದ ʼಇಂಡಿಯನ್ -2ʼ ಸಿನಿಮಾದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ನೆಡುಮುಡಿ ವೇಣು, ವಿವೇಕ್, ಮನೋಬಾಲಾ, ಗುರು ಸೋಮಸುಂದರಂ, ಬಾಬಿ ಸಿಂಹ ಮುಂತಾವರು ನಟಿಸಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.