ಮೂರು ಭಾಗಗಳಲ್ಲಿ ತೆರೆಗೆ ಬರಲಿದೆ ಕಮಲ್‌ – ಶಂಕರ್‌ “ಇಂಡಿಯನ್”: ಏಕಕಾಲದಲ್ಲಿ ಚಿತ್ರೀಕರಣ


Team Udayavani, Jul 26, 2023, 3:59 PM IST

ಮೂರು ಭಾಗಗಳಲ್ಲಿ ತೆರೆಗೆ ಬರಲಿದೆ ಕಮಲ್‌ – ಶಂಕರ್‌ “ಇಂಡಿಯನ್”: ಏಕಕಾಲದಲ್ಲಿ ಚಿತ್ರೀಕರಣ

ಚೆನ್ನೈ: ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಕಮಲ್‌ ಹಾಸನ್‌ ಅವರ ʼಇಂಡಿಯನ್‌ʼ ಸಿನಿಮಾದ ಎರಡನೇ ಭಾಗ ಬರುತ್ತಿರುವುದು ಗೊತ್ತೇ ಇದೆ. ಸಿನಿಮಾ ಸಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.

“ಇಂಡಿಯನ್” ಶಂಕರ್ ಮತ್ತು ಕಮಲ್ ಹಾಸನ್ ಅವರ ವೃತ್ತಿಜೀವನದ ವಿಶೇಷ ಸಿನಿಮಾ. ಇದರ ಮುಂದುವರೆದ ಕಥೆಯು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಕಥೆಯಲ್ಲಿ ಹಲವು ಉಪ ಪ್ಲಾಟ್‌ಗಳಿವೆ. ಇದು ಎರಡು ಭಾಗಗಳಲ್ಲಿ ಒತ್ತಾಯಪೂರ್ವವಾಗಿ ಮುಕ್ತಾಯ ಕಾಣುವ ಸಿನಿಮಾವಲ್ಲ. ಈ ಸಿನಿಮಾದ ಕಥೆಯ ಅಂತ್ಯಕ್ಕೆ ಮೂರು ಭಾಗಗಳು ಬೇಕಾಗುತ್ತದೆ. 2ನೇ ಭಾಗದ ಕಥೆಯಲ್ಲಿನ ಕೆಲ ಅಂಶಗಳು 3ನೇ ಭಾಗದ ಚಿತ್ರೀಕರಣವನ್ನು ಏಕಕಾಲದಲ್ಲಿ ಮಾಡುವಂತೆ ಮಾಡಿದೆ ಎಂದು ಚಿತ್ರತಂಡದ ಆಪ್ತ ಮೂಲವೊಂದು ಹೇಳಿರುವುದಾಗಿ “ಪಿಂಕ್‌ ವಿಲ್ಲಾ” ವರದಿ ಮಾಡಿದೆ.

ಎಡಿಟ್ ಟೇಬಲ್‌ನಲ್ಲಿ ‌ʼʼಇಂಡಿಯನ್” ಸಿನಿಮಾದ 2ನೇ ಭಾಗವನ್ನು ಎರಡು ಭಾಗಗಳಾಗಿ ಚಿತ್ರೀಕರಿಸುವ ಅಂದರೆ ಪಾರ್ಟ್‌ -3 ಯನ್ನು  ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ವರದಿ ತಿಳಿಸಿದೆ.

ಶಂಕರ್‌ ಅವರ ಬಳಿ 6 ಗಂಟೆಗಳ “ಇಂಡಿಯನ್-2”‌ ತುಣುಕುಗಳಿತ್ತು. ಅದನ್ನು ಇಡೀ ಚಿತ್ರತಂಡ ನೋಡಿದ ಮೇಲೆ ಇದರಲ್ಲಿ ಮತ್ತೊಂದು ಸೀಕ್ವೆಲ್‌ ಮಾಡುವ ಅಂಶಗಳಿತ್ತು. ಇದಾದ ಬಳಿಕ ಶಂಕರ್‌ ಅವರು ಕಥೆಯಲ್ಲಿ ಬದಲಾವಣೆ ಮಾಡಿಕೊಂಡು, 2ನೇ ಭಾಗದಲ್ಲಿ ಮೂರನೇ ಭಾಗವನ್ನು ಸೇರಿಸಿ, ಶೂಟ್‌ ಮಾಡಿದರು. ಮೊದಲಿಗೆ “ಇಂಡಿಯನ್-2”‌ ಸಿನಿಮಾದ ಕಥೆ ಸರಿಯಾದ ರೀತಿಯಲ್ಲಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಲು ಆಗುತ್ತಿರಲ್ಲಿಲ್ಲ. ಸಿನಿಮಾದ ದೃಶ್ಯ ಕ್ಲೈಮ್ಯಾಕ್ಸ್‌ ಗೆ ಹೊಂದಿಕೆಯಾಗುತ್ತಿರಲಿಲ್ಲ. 2ನೇ ಭಾಗದ ಕ್ಲೈಮ್ಯಾಕ್ಸ್‌ ಮೂರನೇ ಭಾಗದ ಕಥೆಯ ಆರಂಭಕ್ಕೆ ಕಾರಣವಾಗುತ್ತದೆ. ಈಗಾಗಲೇ 2ನೇ ಭಾಗ ಮುಕ್ತಾಯ ಕಂಡಿದ್ದು, ಮೂರನೇ ಭಾಗದ ಚಿತ್ರೀಕರಣ ಶೇ.75 ರಷ್ಟು ಮುಗಿದಿದೆ. ʼಇಂಡಿಯನ್‌ -2, & 3 ಒಂದು ವರ್ಷದ ಅಂತರದಲ್ಲಿ ತೆರೆಗೆ ಬರಲಿದೆ ಎಂದು ವರದಿ ತಿಳಿಸಿದೆ.

ʼಇಂಡಿಯನ್‌-2ʼ ಸಿನಿಮಾದಲ್ಲಿ ಕಮಲ್ ಹಾಸನ್ ,ಕಾಜಲ್ ಅಗರ್ವಾಲ್ , ರಾಕುಲ್ ಪ್ರೀತ್ ಸಿಂಗ್ ಹಾಗೂ ಮುಂತಾದ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂಇನ ವರ್ಷದ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

 

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.