ಬಂಗಲೆ ಭಾಗಶಃ ಧ್ವಂಸ: 2 ಕೋಟಿ ಪರಿಹಾರ ಕೋರಿದ ಕಂಗನಾ!
ನಾನು ನೀಡಿದ ಹೇಳಿಕೆಗೆ ಪ್ರತಿಯಾಗಿ ದುರುದ್ದೇಶದಿಂದ ನನ್ನ ಬಂಗಲೆ ಕೆಡವಲಾಗಿದೆ
Team Udayavani, Sep 16, 2020, 2:20 PM IST
ಮುಂಬೈ: ಮುಂಬೈನಲ್ಲಿನ ತಮ್ಮ ಬಂಗಲೆಯನ್ನು ಭಾಗಶಃ ಕೆಡವಿರುವ ಬೃಹನ್ಮುಂಬೈ ನಗರ ಪಾಲಿಕೆ(ಬಿಎಂಸಿ) ತಮಗೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ನಟಿ ಕಂಗನಾ ರಣೌತ್ ಆಗ್ರಹಿಸಿದ್ದಾರೆ.
ಬಾಂಬೆ ಹೈಕೋರ್ಟ್‌ಗೆ ಈ ಹಿಂದೆಯೇ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಪರಿಷ್ಕರಿಸಿರುವ ಅವರು, 2 ಕೋಟಿ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ನಾನು ನೀಡಿದ ಹೇಳಿಕೆಗೆ ಪ್ರತಿಯಾಗಿ ದುರುದ್ದೇಶದಿಂದ ನನ್ನ ಬಂಗಲೆ ಕೆಡವಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾನೀಗ ಬಿಜೆಪಿ, ಆರೆಸ್ಸೆಸ್ ಜತೆ: ಇತ್ತೀಚೆಗೆ ಶಿವಸೇನೆ ಕಾರ್ಯಕರ್ತರಿಂದ ತುಳಿತಕ್ಕೊಳಗಾದ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ, “ಇಂದಿನಿಂದ ನಾನು ಬಿಜೆಪಿ ಮತ್ತು ಆರೆಸ್ಸೆಸ್ ಜತೆ ಕೈಜೋಡಿಸುತ್ತಿದ್ದೇನೆ’ ಎಂದು ಮಂಗಳವಾರ ಘೋಷಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕ ರೊಂದಿಗೆ ರಾಜಭವನಕ್ಕೆ ತೆರಳಿ ಮಹಾರಾಷ್ಟ್ರ ರಾಜ್ಯಪಾಲ ಕೋಶಿಯಾರಿ ಅವರನ್ನು ಭೇಟಿಯಾಗಿ ಮಾತನಾಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ, ಹಲ್ಲೆಯ ಆರೋಪಿಗಳಾದ ಶಿವಸೇನೆಯ 6 ಕಾರ್ಯಕರ್ತರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಮತ್ತಿಬ್ಬರ ಬಂಧನ: ಈ ನಡುವೆ, ಸುಶಾಂತ್ ಸಾವು ಹಾಗೂ ಡ್ರಗ್ ಪ್ರಕರಣ ಸಂಬಂಧ ಮಂಗಳವಾರ ಎನ್‌ಸಿಬಿ ಮತ್ತಿಬ್ಬರನ್ನು ಬಂಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.