Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
Team Udayavani, Nov 18, 2024, 1:03 PM IST
ಮುಂಬಯಿ: ಹತ್ತಾರು ವಿಳಂಬದ ಬಳಿಕ ಬಹು ನಿರೀಕ್ಷಿತ ʼಎಮರ್ಜೆನ್ಸಿʼ(Emergency Movie) ಸಿನಿಮಾ ಮತ್ತೊಮ್ಮೆ ತಮ್ಮ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ನಟಿ ಕಂಗನಾ ರಣಾವತ್ (Kangana ranaut) ನಟಿಸಿ, ನಿರ್ದೇಶಿಸಿರುವ ʼಎಮರ್ಜೆನ್ಸಿʼ (Emergency Movie) ಸಿನಿಮಾ ಥಿಯೇಟರ್‌ಗೆ ಲಗ್ಗೆಯಿಡಲು ಸಿದ್ದವಾಗಿದೆ. ಸೋಮವಾರ (ನ.18ರಂದು) ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಇದನ್ನೂ ಓದಿ: Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
ಭಾರತದ ತುರ್ತು ಪರಿಸ್ಥಿತಿಯ ಕಥೆಯನ್ನೊಳಗೊಂಡಿರುವ ʼಎಮರ್ಜೆನ್ಸಿʼ ಸಿನಿಮಾದಲ್ಲಿ ನಟಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಪ್ರಧಾನ ಪಾತ್ರದ ಜತೆ ನಿರ್ದೇಶನದ ಜವಬ್ದಾರಿಯನ್ನು ನಿಭಾಯಿಸಿದ್ದಾರೆ.
ಈ ಹಿಂದೆ ಟ್ರೇಲರ್ ಮೂಲಕ ರಿಲೀಸ್ ಡೇಟ್‌ನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಆದರೆ ಟ್ರೇಲರ್ ರಿಲೀಸ್ ಬಳಿಕ ಶಿರೋಮಣಿ ಅಕಾಲಿದಳದ ದೆಹಲಿ ಘಟಕ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿ, ರಣಾವತ್ ಅವರ ಚಲನಚಿತ್ರ “ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ” ಮತ್ತು “ತಪ್ಪು ಮಾಹಿತಿ ಹರಡಬಹುದು” ಎಂದು ಆರೋಪಿಸಿ ಬಿಡುಗಡೆಯನ್ನು ತಡೆಯುವಂತೆ ಕೋರಿತ್ತು.
ಪರಿಣಾಮ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ ಸಿನಿಮಾಕ್ಕೆ ಸೆನ್ಸಾರ್ ಸಿಗದೆ ರಿಲೀಸ್‌ಗೆ ವಿಳಂಬವಾಗಿತ್ತು.
17th January 2025 – The epic saga of the nation’s most powerful woman and the moment that altered India’s destiny. #Emergency – Unveils Only in cinemas on 17.01.2025! @KanganaTeam @AnupamPKher #SatishKaushik @shreyastalpade1 #MahimaChaudhry @milindrunning #VishakNair… pic.twitter.com/dC0gnYSNlW
— Kangana Ranaut (@KanganaTeam) November 18, 2024
ಚಿತ್ರತಂಡ ಕೋರ್ಟ್ ನೀಡಿದ ಸೂಚನೆಯಂತೆ ಅಗತ್ಯವಿರುವ ದೃಶ್ಯಗಳ ಕಡಿತಕ್ಕೆ ಸಮ್ಮತಿಸಿದ ಬಳಿಕ ಇದೀಗ ಎಲ್ಲಾ ವಿಳಂಬದ ಬಳಿಕ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
2025ರ ಜನವರಿ 17 ರಂದು ʼಎಮರ್ಜೆನ್ಸಿʼ ರಿಲೀಸ್ ಆಗಲಿದೆ ಎಂದು ಕಂಗನಾ ಅನೌನ್ಸ್ ಮಾಡಿದ್ದಾರೆ.
ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಿಲಿಂದ್ ಸೋಮನ್, ಮಹಿಮಾ ಚೌಧರಿ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.