ಜಯಾಗೆ ತಿರುಗೇಟು;ಛೀ 2 ನಿಮಿಷದ ಪಾತ್ರಕ್ಕಾಗಿ….: ವಿವಾದದ ಕಿಡಿಹೊತ್ತಿಸಿದ ಕಂಗನಾ ಹೇಳಿಕೆ

ಬಾಲಿವುಡ್ ರಂಗದಲ್ಲಿ ಹೆಸರು ಮಾಡಿದವರೇ ಈಗ ಸಿನಿಮಾ ರಂಗವನ್ನು ಚರಂಡಿಗೆ ಹೋಲಿಸಿದ್ದಾರೆ

Team Udayavani, Sep 17, 2020, 1:26 PM IST

ಜಯಾಗೆ ತಿರುಗೇಟು;ಛೀ 2 ನಿಮಿಷದ ಪಾತ್ರಕ್ಕಾಗಿ….: ವಿವಾದದ ಕಿಡಿಹೊತ್ತಿಸಿದ ಕಂಗನಾ ಹೇಳಿಕೆ

ನವದೆಹಲಿ:ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಮತ್ತು ಡ್ರಗ್ಸ್ ಜಾಲದ ನಂಟಿನ ಕುರಿತ ಜಟಾಪಟಿಯಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ಮಹಾರಾಷ್ಟ್ರ ಸರ್ಕಾರ, ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೀಗ ಮತ್ತೊಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.

ಕೆಲವು ವ್ಯಕ್ತಿಗಳು ಸಿನಿಮಾ ರಂಗದ ಹೆಸರನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದು ಹಿರಿಯ ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ರಾಜ್ಯಸಭೆಯಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕಂಗನಾ ಟ್ವೀಟ್ ಮೂಲಕ ಜಯಾ ವಿರುದ್ಧ ಕಿಡಿಕಾರಿದ್ದರು.

ಬಾಲಿವುಡ್ ನಲ್ಲಿ ನಟಿಯರಿಗೆ 2 ನಿಮಿಷದ ಪಾತ್ರ, ಐಟಂ ನಂಬರ್ ಹಾಗೂ ರೋಮ್ಯಾಂಟಿಕ್ ದೃಶ್ಯದಲ್ಲಿ ನಟಿಸಲು ಅವಕಾಶ ಸಿಗಬೇಕಿದ್ದರೆ, ಆಕೆ ಮೊದಲು ಹೀರೋ ಜತೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ಕಂಗನಾ ನೇರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ನಂತರ ಆಕೆಯನ್ನು ಸ್ತ್ರೀವಾದಿ, ದೇಶಭಕ್ತಿ ಪ್ರಧಾನ ಕಧಾಹಂದರದ ಸಿನಿಮಾಗಳಲ್ಲಿ ಪರಿಚಯಿಸಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಲಡಾಖ್ ನಲ್ಲಿ ಚೀನಾ ಸೈನಿಕರ ಮಸ್ತ್ ಮಜಾ: ಪಂಜಾಬಿ ಹಾಡು ಕೇಳುತ್ತಿರುವ ಕೆಂಪು ಪಡೆ

ಜಯಾ ಬಚ್ಚನ್ ಹೇಳಿಕೆಗೆ ಖಾರವಾಗಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕಂಗನಾ, ಜಯಾ ಅವರು ಹೇಳಿರುವ ಪ್ಲೇಟ್ (ಊಟದ ತಟ್ಟೆ) ಯಾವುದು? ಕೇವಲ ಎರಡು ನಿಮಿಷದ ರೋಮ್ಯಾಂಟಿಕ್ ಪಾತ್ರಕ್ಕಾಗಿ ಅದು ಹೀರೋ ಜತೆ ಹಾಸಿಗೆ ಹಂಚಿಕೊಂಡ ನಂತರ ಸಿಗುವ ಆಫರ್ ನದ್ದಾ? ನನ್ನ ಆಲೋಚನೆ ಪ್ರಕಾರ ಈ ಸಿನಿಮಾರಂಗ ಸ್ತ್ರೀ ಸಮಾನತೆಯನ್ನು ದೇಶಭಕ್ತಿ ಸಿನಿಮಾಗಳ ತಟ್ಟೆಯೊಂದಿಗೆ ಅಲಂಕರಿಸಲಾಗಿದೆ. ಇದು ನನ್ನ ಸ್ವಂತ ತಟ್ಟೆ ಜಯಾಜೀ…ಇದು ನಿಮ್ಮದಲ್ಲ…ಎಂದು ತಿರುಗೇಟು ನೀಡಿದ್ದಾರೆ.

ಜಯಾ ಹೇಳಿದ್ದೇನು?

ಲೋಕಸಭೆಯ ಎರಡನೇ ದಿನದ ಅಧಿವೇಶನದಲ್ಲಿ ಮಾತನಾಡಿದ್ದ ಜಯಾ ಬಚ್ಚನ್, ಸಾಮಾಜಿಕ ಜಾಲತಾಣದಲ್ಲಿ ಕೆಲವು ಜನರು ಸಿನಿಮಾ ಕ್ಷೇತ್ರವನ್ನು ಥಳಿಸುತ್ತಿದ್ದಾರೆ. ಬಾಲಿವುಡ್ ರಂಗದಲ್ಲಿ ಹೆಸರು ಮಾಡಿದವರೇ ಈಗ ಸಿನಿಮಾ ರಂಗವನ್ನು ಚರಂಡಿಗೆ ಹೋಲಿಸಿದ್ದಾರೆ. ನಾನು ಇದನ್ನು ಸಾರಸಗಟಾಗಿ ನಿರಾಕರಿಸುತ್ತೇನೆ. ಇಂತಹ ಭಾಷೆಯನ್ನು ಉಪಯೋಗಿಸಬಾರದು ಎಂದು ಸರ್ಕಾರ ಇಂತಹ ವ್ಯಕ್ತಿಗಳಿಗೆ ತಾಕೀತು ಮಾಡಬೇಕು. ತುತ್ತು ಕೊಡುವ ಕೈಯನ್ನೇ ಕಚ್ಚುತ್ತಿದ್ದಾರೆ, ಇದು ತಪ್ಪು ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಪರಸ್ತ್ರೀ ಜೊತೆ ಸಂಗ ಮಾಡಿದ ತಂದೆ! ಚಿನ್ನಾಭರಣ ಮಾರಿ ತನ್ನ ಮಗನ ಹತ್ಯೆಗೆ ಸುಪಾರಿ ನೀಡಿದ

ಜಯಾ ಬಚ್ಚನ್ ಅವರ ಹೇಳಿಕೆಯನ್ನು ಬಾಲಿವುಡ್ ನ ಸೋನಮ್ ಕಪೂರ್, ರಿಚಾ ಛಡ್ಡಾ ಮತ್ತು ಫರಾನ್ ಅಖ್ತರ್ ಸೇರಿದಂತೆ ಹಲವು ಮಂದಿ ಅಭಿನಂದಿಸಿದ್ದಾರೆ. ಸಿನಿಮಾರಂಗದ ಬಗ್ಗೆ ಜಯಾ ಅವರು ತೆಗೆದುಕೊಂಡ ನಿಲುವಿನ ಬಗ್ಗೆ ಶ್ಲಾಘಿಸಿದ್ದಾರೆ.

ಟಾಪ್ ನ್ಯೂಸ್

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.