Bollywood: ʼತೇಜಸ್ʼ ಸಿನಿಮಾ ನೋಡಿ ಯೋಗಿ ಆದಿತ್ಯನಾಥ್ ಭಾವುಕರಾದರು.. ನಟಿ ಕಂಗನಾ
Team Udayavani, Oct 31, 2023, 6:09 PM IST
ಲಕ್ನೋ: ನಟಿ ಕಂಗನಾ ರಣಾವತ್ ಅವರ ʼತೇಜಸ್ʼ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ʼತೇಜಸ್ʼ ಸಿನಿಮಾದ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಆಯೋಜಿಸಿದ್ದು, ಸಿನಿಮಾವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಮೆಚ್ಚಿಕೊಂಡಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.
ನಟಿ ಕಂಗನಾ ಅವರ ʼತೇಜಸ್ʼ ಸಿನಿಮಾದ ವಿಶೇಷ ಸ್ಕ್ರೀನಿಂಗ್ ನ್ನು ಲಕ್ನೋದ ಲೋಕಭವನ ಸಭಾಂಗಣದಲ್ಲಿ ಮಂಗಳವಾರ(ಅ.31 ರಂದು) ಆಯೋಜಿಸಲಾಗಿತ್ತು. ಇದರಲ್ಲಿ ಯುಪಿ ಸಿಎಂ ಆದಿತ್ಯನಾಥ್,ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಸಿನಿಮಾವನ್ನು ನೋಡಿ ಆದಿತ್ಯನಾಥ್ ಅವರು ಭಾವುಕರಾದರು ಎಂದು ನಟಿ ಕಂಗನಾ ಹೇಳಿದ್ದಾರೆ. ಈ ಬಗ್ಗೆ ʼಎಎನ್ ಐʼ ಜೊತೆ ಮಾತನಾಡಿದ ಅವರು, “ಯೋಗಿ ಆದಿತ್ಯನಾಥ್ ಅವರು ʼತೇಜಸ್ʼ ಸಿನಿಮಾವನ್ನು ಇಷ್ಟಪಟ್ಟರು. ಚಿತ್ರ ರಾಷ್ಟ್ರೀಯವಾದವನ್ನು ಸಂಪರ್ಕಿಸಲು ಪ್ರೇರೇಪಿಸುವುದಾಗಿ ಹೇಳಿದರು. ಯೋಗಿ ಆದಿತ್ಯನಾಥ್ ಅವರು ಸಿನಿಮಾ ನೋಡುವಾಗ ಭಾವುಕರಾದರು. ಅವರು ಕಣ್ಣೀರನ್ನು ತಡೆಯಲು ಆಗಿಲ್ಲ. ಅವರು ನಮ್ಮನ್ನು ಮತ್ತು ನಮ್ಮ ಚಲನಚಿತ್ರವನ್ನು ನಮ್ಮ ಎಲ್ಲಾ ಶತ್ರುಗಳು ಮತ್ತು ದೇಶವಿರೋಧಿ ಅಂಶಗಳಿಂದ ರಕ್ಷಿಸುವುದಾಗಿ, ಸಿನಿಮಾ ನೋಡಲು ರಾಷ್ಟ್ರೀಯವಾದಿಗಳನ್ನು ಪ್ರೇರೇಪಿಸುವುದಾಗಿ ಅವರು ಹೇಳಿದರು” ಎಂದು ನಟಿ ಹೇಳಿದ್ದಾರೆ.
ʼತೇಜಸ್’ ಸಿನಿಮಾವನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಬೇಕು. ಇದರಿಂದ ಭಾರತೀಯ ವಾಯುಪಡೆಯ ಬಗ್ಗೆ ಹೆಮ್ಮೆಯ ಭಾವನೆ ಯುವಜನರ ಮನಸ್ಸಿನಲ್ಲಿ ಮೂಡುತ್ತದೆ ಎಂದು ಕಂಗನಾ ಹೇಳಿದ್ದಾರೆ.
ಸರ್ವೇಶ್ ಮೇವಾರ ನಿರ್ದೇಶನದ ʼತೇಜಸ್ʼ ಸಿನಿಮಾಕ್ಕೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಕೇಳಿ ಬರುತ್ತಿಲ್ಲ. ಇದುವರೆಗೆ ಸಿನಿಮಾ 4.25 ಕೋಟಿ ರೂ.ವನ್ನು ಮಾತ್ರಗಳಿಸಿದೆ.
ಕಂಗನಾ ಜೊತೆ ಸಿನಿಮಾದಲ್ಲಿ ಅಂಶುಲ್ ಚೌಹಾಣ್, ವರುಣ್ ಮಿತ್ರ, ಆಶಿಶ್ ವಿದ್ಯಾರ್ಥಿ, ವಿಶಾಕ್ ನಾಯರ್, ಕಶ್ಯಪ್ ಶಂಗಾರಿ, ಸುನಿತ್ ಟಂಡನ್, ರಿಯೊ ಕಪಾಡಿಯಾ, ಮೋಹನ್ ಅಗಾಶೆ ಮತ್ತು ಮುಷ್ತಾಕ್ ಕಾಕ್ ಮುಂತಾದವರು ನಟಿಸಿದ್ದಾರೆ.
#WATCH | Lucknow, UP: On special screening of film ‘Tejas’, Actress Kangana Ranaut says, “CM Yogi Adityanath got emotional while watching the movie. He has assured us that he will support us and will motivate the nationalists to connect with the film…It is not a film on women… pic.twitter.com/8SiQFHDlz7
— ANI (@ANI) October 31, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.