ಮತ್ತೆ ವಿವಾದದ ಸುಳಿಯಲ್ಲಿ ಕಂಗನಾ
ನನ್ನ ಬಿಕಿನಿ ಪೋಟೋಗಳನ್ನು ನೋಡಿ ಹಲವರು ನನಗೆ ಧರ್ಮ , ಸನಾತನ ಸಂಪ್ರದಾಯದ ಕುರಿತಾಗಿ ಪಾಠಮಾಡಿದ್ದಾರೆ
Team Udayavani, Dec 24, 2020, 6:16 PM IST
ಮುಂಬೈ: ಒಂದಲ್ಲಾ ಒಂದು ಹೇಳಿಕೆಗಳನ್ನು ನೀಡುವ ಮೂಲಕ ವಿವಾದಗಳನ್ನು ಸೃಷ್ಟಿಸಿಕೊಳ್ಳುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಹೊಸ ವಿವಾದವೊಂದನ್ನು ಮೈಗೆಳೆದುಕೊಂಡಿದ್ದಾರೆ.
ಹಿಂದೂ ಧರ್ಮದ ಭೈರವಿ ದೇವಿ ಕೂದಲು ಬಿಚ್ಚಿಕೊಂಡು, ವಿವಸ್ತ್ರಳಾಗಿ ರಕ್ತ ಕುಡಿಯುತ್ತಾ ಬಂದರೆ ನಿಮಗೆ ಏನನ್ನಿಸುತ್ತದೆ. ನೀವು ಭಯಪಡುವುದಿಲ್ಲವೇ? ಆಕೆಯನ್ನು ದೇವರೆಂದು ಆರಾಧಿಸುವುದಿಲ್ಲವೆ ?ಎಂದು ಹೇಳಿಕೆ ನೀಡಿದ್ದು ಭೈರವಿ ದೇವಿ ಕುರಿತಾಗಿ ಆಡಿದ ಮಾತುಗಳು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಕ್ರಿಸ್ಮಸ್ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್
ಇತ್ತೀಚಿಗಷ್ಟೆ ನಟಿ ಕಂಗನಾ ರಣಾವತ್ ಬೀಚ್ ನಲ್ಲಿ ಬಿಕಿನಿ ಉಡುಪು ಧರಿಸಿ ಪೋಟೋ ತೆಗೆಸಿಕೊಂಡಿದ್ದರು. ಇದಾದ ಬಳಿಕ ಇವರ ಈ ಪೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಈ ಕುರಿತಂತೆ ಕಾಮೆಂಟ್ ಮಾಡಿದ್ದರು.ಆ ಬಳಿಕ ಇನ್ನೊಂದು ಬಿಕಿನಿ ಪೋಟೋವೊಂದನ್ನು ಹಂಚಿಕೊಂಡಿದ್ದ ಕಂಗನಾ ರಣಾವತ್ ನನ್ನ ಬಿಕಿನಿ ಪೋಟೋಗಳನ್ನು ನೋಡಿ ಹಲವರು ನನಗೆ ಧರ್ಮ , ಸನಾತನ ಸಂಪ್ರದಾಯದ ಕುರಿತಾಗಿ ಪಾಠಮಾಡಿದ್ದಾರೆ ಎಂದು ವ್ಯಂಗ್ಯವಾಡುವ ಮೂಲಕ ಭೈರವಿ ದೇವಿಯ ಕುರಿತಾಗಿ ಮಾತನಾಡಿದ್ದಾರೆ.
ಮೆಕ್ಸಿಕೋದಲ್ಲಿ ಕಂಗನಾ
ಈ ಹಿಂದೆ ನಟಿ ಕಂಗನಾ ಮೊದಲ ಬಾರಿ ಬಿಕನಿ ಪೋಟೋ ಹಂಚಿಕೊಂಡಾಗ ಶುಭೋದಯ ಗೆಳೆಯರೆ ನಾನು ನನ್ನ ಜೀವನದಲ್ಲಿ ಭೇಟಿ ನೀಡಿದ ಜಾಗಗಳಲ್ಲಿ ಅತ್ಯಂತ ಸಂತೋಷ ನೀಡಿದ ಸ್ಥಳ ಎಂದರೆ ಅದು ಮೆಕ್ಸಿಕೋ. ಇಲ್ಲಿನ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನನ್ನ ಈ ಪೋಟೋಗಳು ಮೆಕ್ಸಿಕೋದಲ್ಲಿ ತೆಗೆದವುಗಳು ಎಂದು ತಾವು ಶೇರ್ ಮಾಡಿದ್ದ ಪೋಟೋ ಕೆಳಗೆ ಬರೆದುಕೊಂಡಿದ್ದರು ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.