ಡ್ರಗ್ ನಂಟಿದ್ದರೆ ಸಾಬೀತುಪಡಿಸಿ; ಮುಂಬಯಿ ಪೊಲೀಸರಿಗೆ ಕಂಗನಾ ಸವಾಲು
Team Udayavani, Sep 9, 2020, 6:15 AM IST
ಮುಂಬಯಿ: “ನನ್ನನ್ನು ಈಗಲೇ ಡ್ರಗ್ ಪರೀಕ್ಷೆಗೆ ಒಳಪಡಿಸಿ. ಡ್ರಗ್ ಡೀಲರ್‌ಗಳೊಂದಿಗೆ ನಾನು ನಂಟು ಹೊಂದಿರುವುದು ಸಾಬೀತಾದರೆ, ನಾನು ಮುಂಬಯಿ ಬಿಟ್ಟು ತೆರಳುತ್ತೇನೆ.’ ಹೀಗೆಂದು ಮುಂಬಯಿ ಪೊಲೀಸರಿಗೆ ಸವಾಲು ಹಾಕಿರುವುದು ಬಾಲಿವುಡ್ ನಟಿ ಕಂಗನಾ ರಣೌತ್. ಕಂಗನಾ ಅವರ ಮಾಜಿ ಪ್ರಿಯಕರ ಅಧ್ಯಾಯನ್ ಸುಮನ್ ಎಂಬವರು ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ, ಕಂಗನಾ ಡ್ರಗ್ ಸೇವಿಸುತ್ತಾರೆ ಮಾತ್ರವಲ್ಲ ನನಗೂ ಸೇವಿಸುವಂತೆ ಬಲವಂತಪಡಿಸಿದ್ದರು ಎಂದು ಹೇಳಿದ್ದರು.
ಈ ಹೇಳಿಕೆ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಶಿವಸೇನೆ ಶಾಸಕ ಸುನೀಲ್ ಪ್ರಭು ಮತ್ತು ಪ್ರತಾಪ್ ಸರ್‌ನಾಯಕ್ ಸರಕಾರವನ್ನು ಮನವಿ ಮಾಡಿದ್ದು, ಅದಕ್ಕೆ ಮಹಾರಾಷ್ಟ್ರ ಸರಕಾರ ಒಪ್ಪಿದೆ. ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಗೃಹ ಸಚಿವ ಅನಿಲ್ ದೇಶ್‌ಮುಖ್, ಡ್ರಗ್ ವಿಚಾರ ಸಂಬಂಧ ಕಂಗನಾ ವಿರುದ್ಧ ತನಿಖೆಗೆ ಆದೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಇದಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಂಗನಾ, “ಮುಂಬಯಿ ಪೊಲೀಸರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ದಯವಿಟ್ಟು ನನ್ನ ರಕ್ತದ ಮಾದರಿ ಸಂಗ್ರಹಿಸಿ, ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ. ನನ್ನ ದೂರವಾಣಿ ಕರೆಗಳ ವಿವರಗಳನ್ನೂ ಪಡೆದು, ತನಿಖೆ ನಡೆಸಿ. ನನಗೆ ಯಾರಾದರೂ ಡ್ರಗ್ ಡೀಲರ್‌ಗಳೊಂದಿಗೆ ಲಿಂಕ್ ಇರುವುದು ಸಾಬೀತು ಮಾಡಿದರೆ, ನಾನು ತಪ್ಪೊಪ್ಪಿಕೊಳ್ಳುತ್ತೇನೆ. ಮಾತ್ರವಲ್ಲ, ಆ ಕ್ಷಣದಲ್ಲೇ ಮುಂಬಯಿ ಬಿಟ್ಟು ತೆರಳುತ್ತೇನೆ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸರಕಾರ ಮತ್ತು ಕಂಗನಾ ವಿರುದ್ಧ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಜಟಾಪಟಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಕುತೂಹಲ ಮೂಡಿಸಿದೆ. ಇನ್ನೊಂದೆಡೆ, ಕಂಗನಾ ಅವರು ಸ್ಥಳೀಯಾಡಳಿತದ ಅನುಮತಿ ಪಡೆಯದೇ ಮುಂಬಯಿ ಯಲ್ಲಿರುವ ತಮ್ಮ ಕಚೇರಿಯಲ್ಲಿ 12ಕ್ಕೂ ಹೆಚ್ಚು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ. ಈ ಕುರಿತ ನೋಟಿಸ್‌ವೊಂದನ್ನು ಕಚೇರಿ ಹೊರಗೆ ಅಂಟಿಸಲಾಗಿದೆ.
“ದೇವರು ನಮ್ಮೊಂದಿಗಿದ್ದಾನೆ’
ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ಬಂಧಿಸುತ್ತಿದ್ದಂತೆ ಸುಶಾಂತ್ ಸಿಂಗ್ ಅವರ ಸಹೋದರಿ ಶ್ವೇತಾ ಸಿಂಗ್ “ದೇವರು ನಮ್ಮೊಂದಿಗಿದ್ದಾನೆ’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ, ಮಂಗಳವಾರ 3ನೇ ದಿನದ ವಿಚಾರಣೆ ವೇಳೆ ಎನ್‌ಸಿಬಿ ಮುಂದೆ ಹಾಜರಾಗಿದ್ದ ರಿಯಾ, ಕಳೆದ ವಾರವಷ್ಟೇ ಬಂಧಿತನಾದ ಸಹೋದರ ಶೋವಿಕ್‌ಗೆ ಮುಖಾಮುಖಿಯಾಗಿದ್ದಾರೆ. ಸೋದರನನ್ನು ನೋಡುತ್ತಿದ್ದಂತೆ ರಿಯಾ ಕಣ್ಣೀರಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಸುಶಾಂತ್ ಸೋದರಿ ವಿರುದ್ಧ ಎಫ್ಐಆರ್
ಸುಶಾಂತ್‌ರ ಮಾನಸಿಕ ಕಾಯಿಲೆಗೆ ಔಷಧ ನೀಡುವಾಗ ವೈದ್ಯರ ಔಷಧ ಚೀಟಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿ ರಿಯಾ ಸಲ್ಲಿಸಿದ್ದ ದೂರಿನ ಮೇರೆಗೆ ಮುಂಬಯಿ ಪೊಲೀಸರು ಸುಶಾಂತ್ ಸೋದರಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸುಶಾಂತ್ ಕುಟುಂಬದ ವಕೀಲರು ಈ ಎಫ್ಐಆರ್ ಕಾನೂನುಬಾಹಿರ ಎಂದಿದ್ದಾರೆ. ಜತೆಗೆ, ಎಫ್ಐಆರ್ ವಜಾಕ್ಕೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಅಥವಾ ರಿಯಾ ವಿರುದ್ಧ ಮಾನಹಾನಿ ಕೇಸ್ ದಾಖಲಿಸಲು ಯೋಚಿಸಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.