Kanguva: ದೀಪಾವಳಿ ಹಬ್ಬಕ್ಕೆ ʼಕಂಗುವʼ ಸ್ಪೆಷೆಲ್ ಪೋಸ್ಟರ್; ಮಿಂಚಿದ ಸೂರ್ಯ
Team Udayavani, Nov 13, 2023, 10:25 AM IST
ಚೆನ್ನೈ: ನಟ ಸೂರ್ಯ ವೃತ್ತಿ ಬದುಕಿನ ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ಪ್ಯಾನ್ ಇಂಡಿಯಾ ʼಕಂಗುವʼ ದೀಪಾವಳಿ ಹಬ್ಬಕ್ಕೆ ಹೊಸ ಪೋಸ್ಟರ್ ರಿಲೀಸ್ ಮಾಡಿ ನಿರೀಕ್ಷೆಯಿಂದ ಕಾಯುತ್ತಿರುವ ಫ್ಯಾನ್ಸ್ ಗಳಿಗೆ ಹಬ್ಬದ ಶುಭಾಶಯವನ್ನು ಕೋರಿದೆ.
ʼಅನ್ನಾಥೆʼ, ʼವಿಶ್ವಾಸಂʼ, ವೇದಾಲಂʼ.. ಹೀಗೆ ಕಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಶಿವ ʼಕಂಗುವʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ʼಕಂಗುವʼ ಗ್ಲಿಂಪ್ಸ್ ಗಮನ ಸೆಳೆದಿದೆ. ವಾರಿಯರ್ ಲುಕ್ ನಲ್ಲಿ ಸೂರ್ಯ ಮಿಂಚಿದ್ದಾರೆ. ವಿಭಿನ್ನ ಅವತಾರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ.
ಇದೀಗ ದೀಪಾವಳಿ ಹಬ್ಬಕ್ಕೆ ʼಕಂಗುವʼ ಪೋಸ್ಟರ್ ರಿಲೀಸ್ ಮಾಡಿದೆ. ಬೇಟೆಗೆ ಹೊರಟವರಂತೆ ಬೆಂಕಿಯ ಕೋಲನ್ನಿಡಿದುಕೊಂಡು ಸೂರ್ಯ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಹಂಚಿಕೊಂಡು ಸೂರ್ಯ ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಇದನ್ನೂ ಓದಿ: Tiger 3: ಮೊದಲ ದಿನವೇ ದೊಡ್ಡ ಓಪನಿಂಗ್ ಪಡೆದುಕೊಂಡ ʼಟೈಗರ್ -3ʼ; ಗಳಿಸಿದ್ದೆಷ್ಟು?
ದಿಶಾ ಪಟಾನಿ , ಬಾಬಿ ಡಿಯೋಲ್, ನಟರಾಜನ್ ಸುಬ್ರಮಣ್ಯಂ, ಜಗಪತಿ ಬಾಬು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ, ಆನಂದರಾಜ್, ರವಿ ರಾಘವೇಂದ್ರ, ಕೆ.ಎಸ್.ರವಿಕುಮಾರ್ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದು, ಖ್ಯಾತ ಸಿನಿಮಾಟೋಗ್ರಾಫರ್ ವೆಟ್ರಿ ಪಳನಿಸಾಮಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
ದುಬಾರಿ ಬಜೆಟ್ ನಲ್ಲಿ ಸಿನಿಮಾ ತಯಾರಾಗುತ್ತಿರುವ ʼಕಂಗುವʼ 2024 ರ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.
ಇದಾದ ಬಳಿಕ ಸೂರ್ಯ ಲೋಕೇಶ್ ಕನಕರಾಜ್ ಹಾಗೂ ಸುಧಾ ಕೊಂಗರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Dear all wish you a Happy happy Deepavali 🪔 #Kanguva pic.twitter.com/U2ibUBIsQh
— Suriya Sivakumar (@Suriya_offl) November 12, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.