ಅವಿವಾಹಿತ ಆದರೂ ಅವಳಿ ಮಕ್ಕಳಿಗೆ ಅಪ್ಪನಾದ ಕರಣ್ ಜೋಹರ್!
Team Udayavani, Mar 5, 2017, 12:16 PM IST
ಮುಂಬಯಿ: ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ಕಾಸ್ಟ್ಯೂಮ್ ವಿನ್ಯಾಸಗಾರ, ನಟ ಕರಣ್ ಜೋಹರ್ ಅವರು ಇಬ್ಬರು ಅವಳಿ ಮಕ್ಕಳಿಗೆ ತಂದೆಯಾಗಿದ್ದಾರೆ.
ಬಾಡಿಗೆ ತಾಯಿಯ ಮೂಲಕ ಇಬ್ಬರು ಅವಳಿ ಮಕ್ಕಳಿಗೆ ತಂದೆಯಾಗಿದ್ದು, ಈ ಬಗ್ಗೆ ಕರಣ್‌ಗೆ ಬಾಲಿವುಡ್ ವಲಯದಿಂದ ಅಭಿನಂದನೆಗಳು ಹರಿದು ಬಂದಿವೆ.
ಮುಂಬಯಿಯ ಮಸ್ರಾನಿ ಆಸ್ಪತ್ರೆಯಲ್ಲಿ ಮಹಿಳೆ ಫೆಬ್ರವರಿ 7 ರಂದು ಇಬ್ಬರು ಮಕ್ಕಳಿಗೆ ತಾಯಿಯಾಗಿದ್ದು, ಆಕೆಯ ಹೆಸರು ಬಹಿರಂಗ ಪಡಿಸಿಲ್ಲ.
ಬಿಎಂಸಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಕ್ಕಳ ಜನನವನ್ನು ಧೃಡೀಕರಿಸಿದ್ದು, 44 ರ ಹರೆಯದ ಕರಣ್ ಜೋಹರ್ ಅವರನ್ನು ತಂದೆ ಎಂದು ನಮೂದಿಸಿಕೊಂಡಿದ್ದಾರೆ.
ಈ ಹಿಂದೆ ಕರಣ್ ಆತ್ಮೀಯ ಮಿತ್ರರಾಗಿರುವ ಶಾರುಖ್ ಖಾನ್ ಅವರು 3 ನೇ ಮಗು ಅಬ್‌ರಾಮ್‌ನನ್ನು ಬಾಡಿಗೆ ತಾಯಿಯ ಮೂಲಕ ಇದೇ ಮಸ್ರಾನಿ ಅಸ್ಪತ್ರೆಯಲ್ಲಿ ಪಡೆದಿದ್ದರು.
ಕರಣ್ ಜೋಹರ್ ಅವರು ಸಲಿಂಗಿ ಎನ್ನಲಾಗಿತ್ತು. ಇದಕ್ಕೆ ಸ್ವತಃ ಕರಣ್ “ನನ್ನ ಲೈಂಗಿಕ ಆಸಕ್ತಿ ಯಾವುದು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಅದನ್ನು ಕೂಗಿ ಹೇಳಬೇಕಾದ ಅಗತ್ಯವಿಲ್ಲ. ಹಾಗೇನಾದರೂ ಹೇಳಿದರೆ ನನ್ನನ್ನು ಜೈಲಿಗೆ ತಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಆ ಮೂರಕ್ಷರದ ಪದವನ್ನು ನಾನು ಹೇಳುವುದಿಲ್ಲ. ನನ್ನ ಬಗ್ಗೆ ಎಲ್ಲರಿಗೂ ಗೊತ್ತಿದೆ’ ಎಂದು ಜೀವನ ಚರಿತ್ರೆ “ಅನ್‌ಸೂಟಬಲ್ ಬಾಯ್’ನಲ್ಲಿ ತಿಳಿಸಿದ್ದರು.
26ನೇ ವಯಸ್ಸಿನಲ್ಲೇ ನಾನು ಬ್ರಹ್ಮಚರ್ಯೆ ಕಳೆದುಕೊಂಡಿದ್ದೆ. ಅದು ಹೆಮ್ಮೆ ಪಡುವ ಸಂಗತಿ ಏನಲ್ಲ. ಆಗ ನಾನು ನ್ಯೂಯಾರ್ಕ್‌ನಲ್ಲಿದ್ದೆ ಎಂದಿದ್ದರು.
ನಟ ಶಾರುಖ್ ಖಾನ್‌ಗೂ ತಮಗೂ ಸಂಬಂಧ ಕಲ್ಪಿಸುವುದರಿಂದ ಹಿಂಸೆಯಾಗುತ್ತದೆ. ಶಾರುಖ್ ಅವರು ನನಗೆ ತಂದೆ ಹಾಗೂ ಹಿರಿಯಣ್ಣನ ಸಮಾನ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.