ಪುಸ್ತಕದಲ್ಲಿ ʼಬೈಬಲ್ʼ ಪದ ಬಳಸಿದ್ದಕ್ಕೆ ಆಕ್ಷೇಪ: ನಟಿ ಕರೀನಾ ಕಪೂರ್‌ಗೆ ಕೋರ್ಟ್ ನೋಟಿಸ್
Team Udayavani, May 11, 2024, 1:45 PM IST
ಭೋಪಾಲ್: ತನ್ನ ಪುಸ್ತಕದಲ್ಲಿ ʼಬೈಬಲ್ʼ ಪದವನ್ನು ಬಳಸಿದ ಕಾರಣಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಮಧ್ಯ ಪ್ರದೇಶ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
2021 ರಲ್ಲಿ ನಟಿ ಕರೀನಾ ಕಪೂರ್ ತಮ್ಮ ಗರ್ಭಾವಸ್ಥೆ ಕುರಿತು ಗರ್ಭಧಾರಣೆಯ ಸಮಯ ಮತ್ತು ನಿರೀಕ್ಷಿತ ತಾಯಂದಿರಿಗೆ ಸಲಹೆಗಳನ್ನು ನೀಡುವ ಪುಸ್ತಕವೊಂದನ್ನು ಬರೆದಿದ್ದರು. ಇದಕ್ಕೆ “ಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್” ಎನ್ನುವ ಟೈಟಲ್ ಇಡಲಾಗಿತ್ತು.
ಪುಸ್ತಕದಲ್ಲಿನ ಬೈಬಲ್ ಪದ ಬಳಕೆಗೆ ಆಕ್ಷೇಪಿಸಿ ಜಬಲ್ಪುರ್ ನಿವಾಸಿ ಕ್ರಿಸ್ಟೋಫರ್ ಅಂಥೋನಿ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.
ಕರೀನಾ ಕಪೂರ್ ಖಾನ್ ಹಾಗೂ ಪುಸ್ತಕ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಕ್ರಿಸ್ಟೋಫರ್ ಆಂಥೋನಿ ಒತ್ತಾಯಿಸಿದ್ದಾರೆ. ಪುಸ್ತಕದ ಶೀರ್ಷಿಕೆಯಲ್ಲಿ “ಬೈಬಲ್” ಪದವನ್ನು ಏಕೆ ಬಳಸಲಾಗಿದೆ ಎಂಬುದರ ಕುರಿತು ನ್ಯಾಯಾಲಯ ನಟಿಯಿಂದ ಪ್ರತಿಕ್ರಿಯೆ ಕೇಳಿ ನ್ಯಾ. ಗುರುಪಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಪೀಠ ನಟಿಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಮುಂಗಡ ಹಣ ಪಡೆದು ವಾಪಸ್ ನೀಡದ ಆರೋಪ: ನಟ ಸಿಂಬು ವಿರುದ್ದ ಖ್ಯಾತ ನಿರ್ಮಾಪಕನಿಂದ ದೂರು
ಪುಸ್ತಕದಲ್ಲಿನ ʼಬೈಬಲ್ʼ ಪದ ಬಳಕೆಯು ಕ್ರಿಶ್ಚಿಯನ್ ಸಮುದಾಯದ ಭಾವನೆಗೆ ಧಕ್ಕೆ ತಂದಿದೆ ಎಂದು ಅರ್ಜಿದಾರ ಕ್ರಿಸ್ಟೋಫರ್ ಅಂಥೋನಿ ಉಲ್ಲೇಖಿಸಿದ್ದಾರೆ.
“ಬೈಬಲ್ ಪ್ರಪಂಚದಾದ್ಯಂತದ ಕ್ರಿಶ್ಚಿಯನ್ ಧರ್ಮದ ಪವಿತ್ರ ಗ್ರಂಥವಾಗಿದೆ ಇದನ್ನು ಕರೀನಾ ಕಪೂರ್ ಖಾನ್ ಅವರ ಗರ್ಭಧಾರಣೆಯನ್ನು ಬೈಬಲ್ ನೊಂದಿಗೆ ಹೋಲಿಸುವುದು ತಪ್ಪು” ಎಂದು ಕ್ರಿಸ್ಟೋಫರ್ ಹೇಳಿದ್ದಾರೆ. ನಟಿ ತನ್ನ ಪುಸ್ತಕಕ್ಕೆ “ಅಗ್ಗದ ಪ್ರಚಾರ” ವನ್ನು (ಚೀಪ್ ಪಬ್ಲಿಸಿಟಿ) ಪಡೆಯಲು ಈ ಪದವನ್ನು ಬಳಸಿದ್ದಾರೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿದಾರರು ಮೊದಲು ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದರು ಆದರೆ ಅವರು ಪ್ರಕರಣವನ್ನು ದಾಖಲಿಸಲು ನಿರಾಕರಿಸಿದಾಗ, ನಟಿಯ ವಿರುದ್ಧ ದೂರು ದಾಖಲಿಸಲು ಕೆಳ ನ್ಯಾಯಾಲಯಕ್ಕೆ ತೆರಳಿ ಇರುವುದಾಗಿ ಹೇಳಿದ್ದಾರೆ.
ಇದಾದ ಬಳಿಕ ಅವರು, ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಅಲ್ಲಿ ʼಬೈಬಲ್ʼ ಎನ್ನುವ ಪದವು ಹೇಗೆ ಕ್ರಿಶ್ಚಿಯನ್ ಸಮುದಾಯದ ಭಾವನೆಗೆ ಹೇಗೆ ಧಕ್ಕೆ ಆಗುತ್ತದೆ ಎಂದು ಕೋರ್ಟ್ ಕೇಳಿತ್ತು. ಆದರೆ ಅದಕ್ಕೆ ಉತ್ತರಿಸಲು ಅರ್ಜಿದಾರ ವಿಫಲರಾದ ಕಾರಣಕ್ಕೆ ಅವರ ಅರ್ಜಿ ವಜಾ ಆಗಿತ್ತು. ಇದಾದ ಬಳಿಕ ಅವರು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇಲ್ಲೂ ಕೂಡ ಪರಿಹಾರ ಕಾಣದ ಹಿನ್ನೆಲೆ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ನಟಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ ಪ್ರಕ್ರಿಯೆ ಶುಲ್ಕವನ್ನು ಆರ್ಎಡಿ ಮೋಡ್ನಲ್ಲಿ ಪಾವತಿಸಲು ನೋಡಿಸ್ ನೀಡಿದ್ದು, ಇದನ್ನು ಏಳು ದಿನಗಳಲ್ಲಿ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.