ತೈಮೂರ್‌ ಅಲಿ ಖಾನ್‌ ಹೆಸರಿನ ವಿವಾದಕ್ಕೆ ಕೊನೆಗೂ ಕರೀನಾ ತೆರೆ !

Team Udayavani, Feb 7, 2017, 4:33 PM IST

Kareena baby-700.jpg

ಹೊಸದಿಲ್ಲಿ : ಛೋಟೆ ನವಾಬ್‌ ಬೇಗಂ ಎಂದೇ ಖ್ಯಾತಳಾಗಿರುವ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ತನ್ನ ನವಜಾತ ಪುತ್ರನಿಗೆ ತೈಮೂರ್‌ ಅಲಿ ಖಾನ್‌ ಎಂದು ಹೆಸರಿಟ್ಟಿರುವುದು ವ್ಯಾಪಕ ಗೊಂದಲ, ಟೀಕೆ, ಚರ್ಚೆ, ವಾದ, ವಿವಾದಕ್ಕೆ ಗುರಿಯಾಗಿತ್ತು. ಅದಕ್ಕೆಲ್ಲ ಆಕೆಯೀಗ ಸರಿಯಾದ ಉತ್ತರ ನೀಡುವ ಮೂಲಕ ಸಮಗ್ರ ಗೊಂದಲ – ವಿವಾದಗಳಿಗೆ ತೆರೆ ಎಳೆದಿದ್ದಾಳೆ.

ತನ್ನ ಬಾಣಂತನವನ್ನು ಪೂರೈಸಿ ಕಳೆದ ವಾರವಷ್ಟೇ ಲ್ಯಾಕ್‌ವೆು ಫ್ಯಾಶನ್‌ ವೀಕ್‌ ಸಮ್ಮರ್‌ ರಿಸಾರ್ಟ್‌ 2017 ಕಾರ್ಯಕ್ರಮದಲ್ಲಿ ವಸ್ತ್ರ ವಿನ್ಯಾಸಕಿ ಅನಿತಾ ಡೋಂಗ್ರೆ ಗಾಗಿ ramp ಮೇಲೆ ನಡೆದು ತನ್ನ ಹಾಗಿನ  ಎಲ್ಲ ವರ್ಗದ ಮಹಿಳೆಯರು ಹುಬ್ಬೇರುವಂತೆ ಮಾಡಿದ್ದ ಕರೀನಾ ಕಪೂರ್‌, ಅವರಿಗೆಲ್ಲ ಮಾದರಿಯಾಗಿದ್ದಾಳೆ.

ಅಂದ ಹಾಗೆ ಪತಿ ಸೈಫ್ ಅಲಿ ಖಾನ್‌ ಮತ್ತು ಪತ್ನಿ ಕರೀನಾ ಕಪೂರ್‌ ಖಾನ್‌ ಈಚೆಗೆ ತಮ್ಮ ನವಜಾತ ಗಂಡು ಮಗುವಿಗೆ ತೈಮೂರ್‌ ಅಲಿ ಖಾನ್‌ ಎಂದು ಹೆಸರಿಟ್ಟಿದ್ದರಷ್ಟೇ ? ಮಗುವಿಗೆ ಅವರು ಆ ಹೆಸರನ್ನು ಇಟ್ಟ ಸುದ್ದಿ ತಿಳಯುತ್ತಲೇ ಹಲವರು, “ಇದೇನು ಕರೀನಾ – ಸೈಫ್ ತಮ್ಮ ಮಗನಿಗೆ ಮಂಗೋಲಿಯದ ಆಕ್ರಮಣಕಾರಿ ದೊರೆ ತೈಮೂರನ ಹೆಸರು ಇಟ್ಟಿದ್ದಾರೆ’ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಿದ್ದರು. ಅಂತೆಯೇ ಹೆಸರು ವ್ಯಾಪಕ ಚರ್ಚೆ, ಟೀಕೆ, ಗೊಂದಲಕ್ಕೆ ಕಾರಣವಾಗಿತ್ತು.

ಬಾಣಂತನ ಮುಗಿಸಿ ಬಂದಿರುವ ಕರೀನಾಗೆ ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಕೇಳಿದಾಗ ಆಕೆ ನೀಡಿದ ಉತ್ತರ ಇದು : 

“ತೈಮೂರ ಎನ್ನುವ ಅರೇಬಿಕ್‌ ಪದದ ಅರ್ಥ ಕಬ್ಬಿಣ  (iron) ಎಂದು. ನಮ್ಮ ಮಗ ಕಬ್ಬಿಣದಷ್ಟು ಬಲಶಾಲಿಯಾಗುತ್ತಾನೆ ಎಂಬ ಅರ್ಥದಲ್ಲಿ ನಾವು ಆ ಹೆಸರನ್ನು ಆತನಿಗೆ ಇಟ್ಟೆವೇ ಹೊರತು ಆ ಹೆಸರು ಮಂಗೋಲಿಯದ ಆಕ್ರಮಣಕಾರಿ ದೊರೆಯದ್ದೆಂದು ನಾವು ತಿಳಿದಿರಲಿಲ್ಲ. ಒಟ್ಟಿನಲ್ಲಿ ತೈಮೂರ ಪದದ ಅರ್ಥ ನಮ್ಮಿಬ್ಬರನ್ನು ತುಂಬಾ ಅಕರ್ಷಿಸಿತು. ಹಾಗಾಗಿ ನಾವು ಆ ಹೆಸರನ್ನೇ ಮಗುವಿಗೆ ಇಟ್ಟೆವು. ಆ ಹೆಸರು ಜೀವಂತವಿರುವ ಅಥವಾ ಇಲ್ಲದಿರುವ ಯಾವುದೇ ವ್ಯಕ್ತಿಗೂ ಸಂಬಂಧಿಸಿದ್ದಲ್ಲ ಎಂದಷ್ಟೇ ನಾವು ಹೇಳಬಯಸುತ್ತೇವೆ; ಇಷ್ಟಕ್ಕೂ ಜನರು ಹೆಸರಿಗೆ ಸಂಬಂಧಪಟ್ಟ ತೀರ ಖಾಸಗಿ ವಿಚಾರದಲ್ಲಿ ಯಾಕಿಷ್ಟು ತಲೆ ಕೆಡಿಸಿಕೊಳ್ಳುತ್ತಾರೆ ಎಂದೇ ಅರ್ಥವಾಗುವುದಿಲ್ಲ’.

ಹಾಗಿದ್ದರೂ ಕರೀನಾ ಈ ಸಂದರ್ಭದಲ್ಲಿ ತಮ್ಮನ್ನು  ಬೆಂಬಲಿಸಿದ ಎಲ್ಲರಿಗೂ, ಕುಟುಂಬದವರು, ಸ್ನೇಹಿತರು ಮತ್ತೆ ಅಭಿಮಾನಿಗಳಿಗೂ ಕೃತಜ್ಞತೆ ಅರ್ಪಿಸಲು ಮರೆಯಲಿಲ್ಲ. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

accident

Kasaragod; ಬಸ್‌-ಕಾರು ಢಿಕ್ಕಿ: ಇಬ್ಬರ ಸಾವು

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.