BOLLYWOOD: ಯಶ್ ಜೊತೆ ನಟಿಸೋಕೆ ಇಷ್ಟವೆಂದ ಕರೀನಾ ಕಪೂರ್; ಮತ್ತೆ ಟ್ರೆಂಡಾಯಿತು ʼYash19ʼ
Team Udayavani, Nov 16, 2023, 5:48 PM IST
ಮುಂಬಯಿ: ʼಕೆಜಿಎಫ್ʼ ಬಳಿಕ ರಾಕಿಂಗ್ ಸ್ಟಾರ್ ಯಶ್ ಹವಾ ಕಹಾ ಹೈ ಎಂದರೆ ಊರು ತುಂಬಾ ಹೈ ಎನ್ನುವಂತಾಗಿದೆ. ಯಶ್ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಅವರ ಬಗ್ಗೆ ಬಿಟೌನ್ ನಟಿಯೊಬ್ಬರು ಮಾತನಾಡಿದ್ದು ವೈರಲ್ ಆಗಿದೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ʼಕಾಫಿ ವಿತ್ ಕರಣ್-8ʼ ಆರಂಭಗೊಂಡಿದೆ. ಈಗಾಗಲೇ ಈ ಬಾರಿಯ ಕಾರ್ಯಕ್ರಮದಲ್ಲಿ ರಣ್ವೀರ್ – ದೀಪಿಕಾ ಭಾಗಿಯಾಗಿದ್ದಾರೆ. ಗಾಸಿಪ್ ಹಾಗೂ ಕೆಲ ಅಗತ್ಯ, ಇನ್ನು ಕೆಲವೊಮ್ಮೆ ಅನಗತ್ಯ ವಿಚಾರಗಳನ್ನು ಕೆದಕುವ ಕಾರ್ಯಕ್ರಮದಲ್ಲಿ ಹೊಸ ಅತಿಥಿಯಾಗಿ ಈ ಬಾರಿ ಆಲಿಯಾ ಭಟ್ ಹಾಗೂ ಕರೀನಾ ಕಪೂರ್ ಭಾಗಿಯಾಗಿದ್ದಾರೆ.
ಈ ವೇಳೆ ಕರೀನಾ ಬಳಿ ಕರಣ್ ರ‍್ಯಾಪಿಡ್ ಫೈರ್ ರೌಂಡ್ ಪ್ರಶ್ನೆಯನ್ನು ಕೇಳಿದ್ದಾರೆ. ಯಾವ ಸೌತ್ ಸ್ಟಾರ್ ಜೊತೆ ನಟಿಸಲು ಇಷ್ಟಪಡುತ್ತೀರಿ ಎನ್ನುವ ಪ್ರಶ್ನೆಯನ್ನು ಕೇಳಿ ಪ್ರಭಾಸ್, ರಾಮ್ ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಅವರ ಆಯ್ಕೆಯನ್ನು ಕೊಟ್ಟಿದ್ದಾರೆ.
ಇದಕ್ಕೆ ಉತ್ತರವಾಗಿ ʼಬೇಬೊʼ, “ಎಲ್ಲರೂ ಸೂಪರ್. ಆದರೆ ನಾನು ‘KGF’ ಹುಡುಗಿ. ನನಗೆ ಕೆಜಿಎಫ್ ಸಿನಿಮಾ ಅಂದ್ರೆ ಇಷ್ಟ. ಹಾಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ” ಎಂದು ಕರೀನಾ ಹೇಳಿದ್ದಾರೆ.
ಇದನ್ನೂ ಓದಿ: Deepfake: ನಟಿ ಕಾಜೋಲ್ ಬಟ್ಟೆ ಬದಲಾಯಿಸುವ ವಿಡಿಯೋ ವೈರಲ್
ಕೆಜಿಎಫ್ ನೋಡಿದ್ದೀರಾ? ಎನ್ನುವ ಪ್ರಶ್ನೆಗೆ ಬೇಬೊ ಹೌದೆಂದು ಉತ್ತರಿಸಿದ್ದಾರೆ. ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಯಶ್ ಫ್ಯಾನ್ಸ್ ಗಳು ಕರೀನಾ ʼಯಶ್ 19ʼ ಇರಬೇಕೆಂದಿದ್ದಾರೆ.
ದೀಪಾವಳಿ ಹಬ್ಬಕ್ಕೆ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅವರ ನಿರೀಕ್ಷೆ ನಿರಾಸೆಯಾಗಿದೆ.
ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ಅವರು ಯಶ್ ಅವರ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.
Kareena Kapoor would like to pair up with @TheNameIsYash BOSS 🔥 among south actors She loves the Action & Elevation Blocks OF #KGF Series #YashBOSS #Yash19 pic.twitter.com/KR2y8R6QZF
— YASH MY WORLD (@yash_my_world) November 16, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.