ಸುಶಾಂತ್ ಮನೆಯ ಬಾಗಿಲ ಲಾಕ್ ತೆಗೆಯಲು ಹೋದಾಗ ಏನಾಗಿತ್ತು? ಕೀ ಮೇಕರ್ ಹೇಳಿದ್ದೇನು
ತನ್ನ ಸಹಾಯಕನ ಜತೆಗೂಡಿ ರಫೀಕ್ ಬಾಂದ್ರಾಕ್ಕೆ ತಲುಪಿದಾಗ ಇಬ್ಬರನ್ನೂ ಆರನೇ ಮಹಡಿಗೆ ಕರೆದೊಯ್ದಿದ್ದರಂತೆ.
Team Udayavani, Aug 21, 2020, 4:42 PM IST
ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾಗಿದ್ದ ಕೀ ಮೇಕರ್ ಮಹತ್ವದ ವಿಚಾರವನ್ನು ಬಹಿರಂಗಗೊಳಿಸಿರುವುದು ಬೆಳಕಿಗೆ ಬಂದಿದೆ. ಜೂನ್ 14ರಂದು ನಟ ಸುಶಾಂತ್ ಮನೆಯ ಬಾಗಿಲ ಲಾಕ್ ಒಡೆದ ನಂತರ ಕೀ ಮೇಕರ್ ಗೆ ಸುಶಾಂತ್ ಕೋಣೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲವಾಗಿತ್ತು. ಅಲ್ಲದೇ ಕೂಡಲೇ ಈ ಸ್ಥಳದಿಂದ ಹೊರಡಬೇಕು ಎಂದು ಸೂಚನೆ ಕೊಟ್ಟಿರುವುದಾಗಿ ವರದಿ ತಿಳಿಸಿದೆ.
ಕೀ ಮೇಕರ್ ನನ್ನು ರಫೀಕ್ ಚಾವಿವಾಲಾ ಎಂದು ಗುರುತಿಸಲಾಗಿದೆ. ಜೀ ನ್ಯೂಸ್ ಗೆ ತಿಳಿಸಿರುವ ಮಾಹಿತಿ ಪ್ರಕಾರ, ಜೂನ್ 14ರಂದು ಮಧ್ಯಾಹ್ನ 1.05 ನಿಮಿಷಕ್ಕೆ ಸಿದ್ದಾರ್ಥ್ ಪಿಥಾನಿ ಕರೆ ಮಾಡಿದ್ದು, ಬಾಂದ್ರಾದ ಮನೆಯ ಬಾಗಿಲನ್ನು ಬೀಗವನ್ನು ತೆಗೆದುಕೊಡುವಂತೆ ಕೇಳಿದ್ದರು. ನಂತರ ರಫೀಕ್, ತನಗೆ ಡೋರ್ ಲಾಕ್ ನ ಚಿತ್ರವನ್ನು ವಾಟ್ಸಪ್ ಮಾಡುವಂತೆ ಹೇಳಿರುವುದಾಗಿ ತಿಳಿಸಿದ್ದಾರೆ.
ಆದರೆ ತನಗೆ ಅದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮನೆ ಎಂಬ ಬಗ್ಗೆ ಏನೂ ಮಾಹಿತಿ ತಿಳಿದಿರಲಿಲ್ಲವಾಗಿತ್ತು. ಅಷ್ಟೇ ಅಲ್ಲ ತನಗೆ ಕರೆ ಮಾಡಿದ ವ್ಯಕ್ತಿಯ ಪರಿಚಯವೂ ಇಲ್ಲ. ನಂತರ ತನಗೆ ತಿಳಿದು ಬಂದದ್ದು, ಹಲವಾರು ಮಾಧ್ಯಮಗಳಲ್ಲಿ ಸಿದ್ದಾರ್ಥ ಪಿಥಾನಿ ಹೆಸರು ಪ್ರಕಟವಾದ ಬಳಿಕ ಎಂಬುದಾಗಿ ಕೀ ಮೇಕರ್ ವಿವರಿಸಿದ್ದಾರೆ.
ಇದನ್ನೂ: ಸುಧೀರ್ ಗುಪ್ತಾಗೆ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯ ಹೊಣೆ
ಕರೆ ಮಾಡಿದ್ದ ವ್ಯಕ್ತಿ ತನಗೆ ಜಾಗದ ಮಾಹಿತಿ ನೀಡಿದ್ದರು. ನಂತರ ತನ್ನ ಸಹಾಯಕನ ಜತೆಗೂಡಿ ರಫೀಕ್ ಬಾಂದ್ರಾಕ್ಕೆ ತಲುಪಿದಾಗ ಇಬ್ಬರನ್ನೂ ಆರನೇ ಮಹಡಿಗೆ ಕರೆದೊಯ್ದಿದ್ದರಂತೆ. ನಂತರ ರೂಂ ಬಾಗಿಲನ್ನು ತೆಗೆದುಕೊಡುವಂತೆ ಸೂಚಿಸಿದ್ದರು. ಕೆಲವು ಸಮಯ ನಕಲಿ ಕೀ ಬಳಸಿ ಪ್ರಯತ್ನಿಸಿದ ನಂತರ, ಈ ಬಾಗಿಲ ಲಾಕ್ ಅನ್ನು ಒಡೆಯಲೇಬೇಕು ಎಂದು ರಫೀಕ್ ತಿಳಿಸಿದ್ದರು.
ಇದನ್ನೂ ಓದಿ: ಮುಂಬೈ ಪೊಲೀಸರಿಗೆ ಮುಖಭಂಗ, ಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ ಒಪ್ಪಿಸಿದ ಸುಪ್ರೀಂಕೋರ್ಟ್
ಕೀ ಮೇಕರ್ ಹೇಳಿಕೆ ಪ್ರಕಾರ, ಅದು ಕಂಪ್ಯೂಟರೀಕೃತ ಲಾಕ್ ಆಗಿದ್ದು, ಅದನ್ನು ಸುತ್ತಿಗೆ ಬಳಸಿ ಒಡೆಯಲಾಗಿತ್ತು. ಈ ಕೆಲಸಕ್ಕಾಗಿ 2 ಸಾವಿರ ರೂಪಾಯಿ ನೀಡಿ, ಕೂಡಲೇ ಸ್ಥಳದಿಂದ ಹೊರಡುವಂತೆ ಸೂಚಿಸಿದ್ದರು. ಆದರೆ ಮನೆಯ ಒಳಹೋಗಲು ಹಾಗೂ ಸುಶಾಂತ್ ಕೋಣೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಖಾತೆಯಿಂದ 15 ಕೋಟಿ ವರ್ಗಾವಣೆ: ಗೆಳತಿ ರಿಯಾ ಬಂಧನ ಸಾಧ್ಯತೆ?
ಸುಶಾಂತ್ ಮನೆಯ ಸ್ಥಳದಿಂದ ಹೊರಬಿದ್ದ ನಂತರ ನಟನ ಸಹೋದರಿ ಅಲ್ಲಿಗೆ ಆಗಮಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ತನಗೆ ಈವರೆಗೂ ತನಿಖಾ ಸಂಸ್ಥೆಯಿಂದ ಯಾವುದೇ ಕರೆ ಬಂದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಕರೆ ಬಂದರೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಆದರೆ ಈಗಾಗಲೇ ತನಿಖೆ ನಡೆಸಿದ್ದ ಮುಂಬೈ ಪೊಲೀಸರಿಗೆ ರಫೀಕ್ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
Bollywood: ʼಸಿಂಗಂ ಎಗೇನ್ʼ ಬಳಿಕ ʼಗೋಲ್ ಮಾಲ್ -5ʼಗೆ ಜತೆಯಾಗಲಿದ್ದಾರೆ ಅಜಯ್- ರೋಹಿತ್
Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್ ಬ್ಯೂಟಿ ಆಲಿಯಾ?
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.