ಮೊದಲ ದಿನ 15 ಕೋಟಿ.. 3ನೇ ದಿನ ಹೌಸ್ ಫುಲ್: ವರ್ಕೌಟ್ ಆಯ್ತಾ ʼಸುಲ್ತಾನ್ʼ ಈದ್ ಸೂತ್ರ?
Team Udayavani, Apr 24, 2023, 4:12 PM IST
ಮುಂಬಯಿ: ಪ್ರತಿವರ್ಷ ಈದ್ ಹಬ್ಬಕ್ಕೆ ಸಿನಿಮಾವನ್ನು ರಿಲೀಸ್ ಮಾಡುವ ಸಲ್ಮಾನ್ ಖಾನ್ ಈ ಬಾರಿ ʼ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದೊಂದಿಗೆ ಬಂದಿದ್ದಾರೆ. ನಿರೀಕ್ಷೆಯಂತೆ ಸಿನಿಮಾಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಆದರೆ ಮಿಶ್ರ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
ಫರ್ಹಾದ್ ಸಮ್ಜಿ ನಿರ್ದೇಶನದ ʼ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಟಾಲಿವುಡ್ ನಲ್ಲಿ 2014 ರಲ್ಲಿ ಬಂದ ಅಜಿತ್ ಕುಮಾರ್ ಅಭಿನಯದ ʼವೀರಂʼ ಚಿತ್ರದ ರಿಮೇಕ್ ಸಿನಿಮಾ. ಸಲ್ಲುಭಾಯಿಗೆ ಅಭಿಮಾನಿಗಳು ಹೆಚ್ಚು. ಅವರ ಸಿನಿಮಾ ಸುಲಭವಾಗಿ 100 ಕೋಟಿ ರೂ. ದಾಟಿ ಬಿಡುತ್ತದೆ.
ಇದನ್ನೂ ಓದಿ: Karnataka Election ಜನಾರ್ದನ ರೆಡ್ಡಿ ಬೆಳೆಸಿದವರೇ ಬೆನ್ನಿಗೆ ಚೂರಿ ಹಾಕಿದರು: ಬ್ರಹ್ಮಿಣಿ
ಇದೇ ನಿರೀಕ್ಷೆಯಲ್ಲಿದ್ದ ಚಿತ್ರತಂಡಕ್ಕೆ ಚಿತ್ರದ ಮೊದಲ ದಿನದ ಕಲೆಕ್ಷನ್ ಶಾಕ್ ಆಗಿತ್ತು. ಮೊದಲ ದಿನ ಸಿನಿಮಾ ಗಳಿಸಿದ್ದು 15.81 ಕೋಟಿ ರೂ.ವನ್ನು ಮಾತ್ರ. ಈ ಹಿಂದೆ ಸಲ್ಮಾನ್ ಖಾನ್ ಅವರ ʼಟ್ಯೂಬ್ ಲೈಟ್ʼ ಸಿನಿಮಾ ಇದಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ವೀಕೆಂಡ್ ಆಗಿರುವ ಕಾರಣವೇನೋ ಎರಡನೇ ದಿನ ಅಂದರೆ ಶನಿವಾರ ಸಿನಿಮಾ 25 ಕೋಟಿ ರೂ. ಕಮಾಯಿ ಮಾಡಿತ್ತು. ಸಲ್ಮಾನ್ ಖಾನ್ ಇತರೆ ಸಿನಿಮಾಕ್ಕೆ ಹೋಲಿಸಿದರೆ ಇದು ಕಡಿಮೆಯೇ. ಮೂರನೇ ದಿನವಾದ ಭಾನುವಾರದಂದು ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಮೇಲಕ್ಕೆ ಬಂದಿದೆ. ಮೂರನೇ ದಿನ 26.61 ಕೋಟಿ ರೂ.ವನ್ನು ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದೆ. ಮೂರನೇ ದಿನ ದೇಶದ ಹಲವೆಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ.
ಒಟ್ಟು ಮೊದಲ ವಾರದಲ್ಲಿ ಸಿನಿಮಾ ಒಟ್ಟು 68.17 ಕೋಟಿ ರೂ.ವನ್ನು ಬಾಚಿಕೊಂಡಿದೆ. ವೀಕೆಂಡ್ ನಲ್ಲಿ ಸ್ವಲ್ಪ ಚೇತರಿಕೆ ಕಂಡ ಸಲ್ಮಾನ್ ಸಿನಿಮಾ ವೀಕ್ ಡೇಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ವೆಂಕಟೇಶ್ ಮತ್ತು ಇತರರು ಕಾಣಿಸಿಕೊಂಡಿದ್ದು,ನಟ ರಾಮ್ ಚರಣ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
#KisiKaBhaiKisiKiJaan packs a solid total in its opening weekend… #SalmanKhan’s star power + #Eid festivities ensured #HouseFull boards across many properties on Sat and Sun… Fri 15.81 cr, Sat 25.75 cr, Sun 26.61 cr. Total: ₹ 68.17 cr. #India biz.
The jump on Sat and Sun – in… pic.twitter.com/pq551jXhrz
— taran adarsh (@taran_adarsh) April 24, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.